ಈ ವಾರ ‘ವಾರದ ಕತೆ ಕಿಚ್ಚನ ಜತೆ’ ಪ್ರಸಾರ ಆಗಲ್ಲ?

ಕನ್ನಡ ಚಿತ್ರರಂಗದ ಪ್ರಮುಖ ನಟರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿರುವ ನಂತರ ಒಂದೊಂದೆ ಬೆಳವಣಿಗೆಗಳು ನಡೆಯುತ್ತಲೇ ಇದೆ. ಶೂಟಿಂಗ್ ಬಿಟ್ಟು ನಾಯಕರು ಮನೆ ಕಡೆ ಬಂದಿದ್ದಾರೆ.

ಐಟಿ ಅಧಿಕಾರಿಗಳು ಕಿಚ್ಚ ಸುದೀಪ್ ಮನೆ ಮೇಲೆಯೂ ದಾಳಿ ನಡೆಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 6 ನಡೆಸಿಕೊಡುವ ಸುದೀಪ್ ಅವರಿಗೂ ಐಟಿ ಬಿಸಿ ತಟ್ಟಿದೆ.

ಬಿಗ್‌ ಬಾಸ್ ಮನೆಯಲ್ಲಿ ಮೇಘಶ್ರೀಗೆ ಇವರ ಮೇಲೆ ಲವ್‌ ಆಗಿತ್ತಂತೆ!
ಬಾಸ್‌ ಆರನೇ ಆವೃತ್ತಿ ಈಗ 66 ದಿನ ದಾಟಿದೆ. ಒಂದು ಹಂತದಲ್ಲಿ ಶಾಂತಿ ನೆಲೆಸಿತು ಎಂದಾಗ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಮನೆಯಲ್ಲಿ ಬೆಂಕಿ ಹಚ್ಚಿದೆ. ಮೇಘಶ್ರೀ ಜನ್ಮದಿನದಿಂದ ಆರಂಭವಾದ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮ ಜಾಸ್ತಿ ಹೊತ್ತು ಉಳಿಯಲಿಲ್ಲ.  ಬಿಗ್ ಬಾಸ್ ನೀಡಿದ ಸೂಪರ್ ಹೀರೋ ವರ್ಸ್ ಸೂಪರ್‌ ವಿಲನ್‌ನ ಲಕ್ಸುರಿ ಬಜೆಟ್‌ ಟಾಸ್ಕ್‌  ಬೆಂಕಿ ಹಚ್ಚಿತು. ಹೀರೋಗಳಾಗಿ ಶಶಿ, ಧನರಾಜ್‌, ಅಕ್ಷತಾ, ಕವಿತಾ, ನಿವೇದಿತಾ, ಜೀವಿತಾ ಇದ್ದರೆ, ವಿಲನ್‌ಗಳಾಗಿ ಇದ್ದದ್ದು ಮುರಳಿ, ರಶ್ಮಿ, ಆಂಡಿ, ರಾಕೇಶ್‌, ನವೀನ್ ಮತ್ತು ಮೇಘಶ್ರೀ  ಇದ್ದರು.

ಐಟಿ ಅಧಿಕಾರಿಗಳ ಪರಿಶೀಲನೆಯಿಂದಾಗಿ ಬಿಗ್ ಬಾಸ್ ಶೂಟಿಂಗ್ ಸ್ಥಗಿತವಾಗುವ ಸಾಧ್ಯತೆ ಇದೆ. ಇಂದು ಅಂದರೆ ಶುಕ್ರವಾರ ಸಂಜೆಯೋಳಗೆ ಪರಿಶೀಲನೆ ಮುಗಿಯದೆ ಇದ್ದಲ್ಲಿ ಬಿಗ್ ಬಾಸ್ ಶೂಟಿಂಗ್ ಗೆ ಸುದೀಪ್  ತರೆಳಲು ಸಾಧ್ಯವಿಲ್ಲ. ಪ್ರತಿ ಶುಕ್ರವಾರ ಶನಿವಾರದಂದು ಬಿಗ್ ಬಾಸ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಸುದೀಪ್ ಪಾಲ್ಗೊಳ್ಳುತ್ತಾರೆ.

ಇನೋವೇಟಿವ್ ಫಿಲ್ಮಂ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತದೆ. ವಾರದ ಕತೆ ಕಿಚ್ಚನ ಜತೆ ಮತ್ತುಸೂಪರ್ ಸಂಡೆ ವಿತ್ ಸುದೀಪ್ ಕಾರ್ಯಕ್ರಮಗಳು ಕ್ರಮವಾಗಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಬೇಕು. ಆದರೆ ಐಟಿ ದಾಳಿ ಕಾರ್ಯಕ್ರಮದ ಶೂಟಿಂಗ್ ಸ್ಥಗಿತಕ್ಕೆ ಕಾರಣವಾಗಬಹುದು.