ಐತಿಹಾಸಿಕ ಬೆಳವಣಿಗೆ : ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಟ್ಟ ಭಾರತೀಯರ ಪಟ್ಟಿ ಬಿಡುಗಡೆ!

ನವದೆಹಲಿ/ಬರ್ನ್: 2018ರಿಂದ ಸ್ವಿಜರ್ಲೆಂಡ್​ನ ಬ್ಯಾಂಕ್​ಗಳಲ್ಲಿ ಭಾರತೀಯರು ಹೊಂದಿರುವ ಖಾತೆಗಳ ಬಗ್ಗೆ ವಿವರವನ್ನು ಸ್ವಿಜರ್ಲೆಂಡ್ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಅಲ್ಲಿನ ಬ್ಯಾಂಕ್​ಗಳು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.

2018ರಿಂದ ಖಾತೆದಾರರು ಇರಿಸಿದ ಠೇವಣಿ, ಎಷ್ಟು ಸಾರಿ ವಹಿವಾಟು ನಡೆಸಿದ್ದಾರೆ ಎಂಬ ಮಾಹಿತಿಯನ್ನು ಸಹ ನೀಡಲಿದೆ ಎನ್ನಲಾಗಿದೆ. ಇನ್ನು 2018ಕ್ಕೂ ಪೂರ್ವದಲ್ಲಿ ಖಾತೆ ಹೊಂದಿದ್ದವರಲ್ಲಿ ಕನಿಷ್ಠ 100 ಪ್ರಕರಣಗಳ ಬಗ್ಗೆ ಸ್ವಿಸ್ ಆಡಳಿತ ಭಾರತಕ್ಕೆ ಹೆಸರಿನ ಮೊದಲ ಅಕ್ಷರ (ಇನ್ಶಿಯಲ್ಸ್) ನಂತೆ ಮಾಹಿತಿ ನೀಡಿತ್ತು, ಆದರೆ ಎಇಒಇ ಒಪ್ಪಂದ ಅನ್ವಯವಾಗದ ಕಾರಣ ಈ ಪ್ರಕರಣಗಳ ಬಗ್ಗೆ ಸಂಪೂರ್ಣ ವಿವರ ನೀಡಿಲ್ಲ ಅಂತ ತಿಳಿದು ಬಂದಿದೆ.

ಜಾಗತೀಕ ಒತ್ತಡಕ್ಕೆ ಮಣಿದಿರುವ ಸ್ವಿಸ್‌ ಖಾತೆದಾರರ ಗೌಪ್ಯತೆ ಬಗ್ಗೆ ಇದ್ದ ನಿಯಮ ಸಡಿಲಿಸಿ ಅಗತ್ಯ ಕಾನೂನು ರೂಪಿಸಿದ್ದು, ಹೀಗಾಗಿ ಖಾತೆದಾರರ ವಿವರ ಹಂಚಿಕೊಳ್ಳಲು ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿ ಮಾಡಿದೆ.

Leave a Reply

Your email address will not be published. Required fields are marked *