ಬಿಗ್ ಬಾಸ್ ಸೀಸನ್ 7ಗೆ ಭಾಗವಹಿಸೋ ಸ್ಪರ್ಧಿಗಳು ಪಟ್ಟಿ ಇಲ್ಲಿದೆ ನೋಡಿ!

ಸಲ್ಮಾನ್ ಖಾನ್ ನೇತೃತ್ವದಲ್ಲಿ ಹಿಂದಿಯಲ್ಲಿ, ಕಮಲ್ ಹಾಸನ್ ನೇತೃತ್ವದಲ್ಲಿ ತಮಿಳಿನಲ್ಲಿ, ಜ್ಯೂನಿಯರ್ ಎನ್‌ಟಿಆರ್, ನಾನಿ ನೇತೃತ್ವದಲ್ಲಿ ತೆಲುಗಿನಲ್ಲಿ ತೆರೆ ಕಂಡ ಬಿಗ್ ಬಾಸ್ ಶೋಗಳು ಪ್ರೇಕ್ಷಕರ ಗಮನ ಸೆಳೆದಿವೆ. ಹಾಗೆಯೇ ಕಿಚ್ಚ

ಸುದೀಪ್ ನೇತೃತ್ವದ ಕನ್ನಡದ ಬಿಗ್‌ಬಾಸ್ ಕೂಡ ಇದರಿಂದ ಹೊರತಾಗೇನಿಲ್ಲ.

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ 6 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. 7ನೇ ಸೀಸನ್‌ಗೆ ಕಲರ್ಸ್ ಕನ್ನಡ ವಾಹಿನಿ ತಯಾರಿ ಮಾಡಿಕೊಳ್ಳುತ್ತಿದ್ದು, ಅಲ್ಲಿಂದ ಇಂಟರೆಸ್ಟಿಂಗ್ ವಿಚಾರವೊಂದು ಹೊರಬಿದ್ದಿದೆ. ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಕೂಡ ‘ಬಿಗ್‌ಬಾಸ್’ ಮನೆ ಪ್ರವೇಶಿಸಿದ್ದರು. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಎಪಿಸೋಡ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

ಅಕ್ಟೋಬರ್ ಎರಡನೇ ವಾರದಿಂದ ಬಿಗ್ ಬಾಸ್ ಹೊಸ ಸೀಸನ್

ಸಿನಿಮಾ, ಕಿರುತೆರೆ, ರಾಜಕೀಯ ಕ್ಷೇತ್ರದಿಂದ ಬಂದ ವ್ಯಕ್ತಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳಲು ವೀಕ್ಷಕರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಹಾಗಾಗಿ ಕೇವಲ ಸೆಲೆಬ್ರಿಟಿಗಳೇ ಪರಸ್ಪರ ಪೈಪೋಟಿ ನಡೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ವಾಹಿನಿ ಬಂದಿದೆ. ಅಂತಿಮವಾಗಿ ಆಯ್ಕೆಯಾಗುವ 15 ಮಂದಿ ಸೆಲೆಬ್ರಿಟಿಗಳು ಯಾರು ಎಂಬ ಕಾತರ ‘ಬಿಗ್‌ ಬಾಸ್’ ವೀಕ್ಷಕರ ಮನದಲ್ಲಿ ಮೂಡಿದೆ.7ನೇ ಸೀಸನ್‌ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಜವಾಬ್ದಾರಿ ಹೊತ್ತಿದ್ದಾರೆ. ಇಂದು ‘ಬಿಗ್‌ ಬಾಸ್’ ಪ್ರೋಮೋ ಶೂಟ್ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 13ರಂದು ಪ್ರೋಮೋ ಬಿತ್ತರವಾಗಲಿದೆ. ಬಿಗ್‌ಬಾಸ್ ಮನೆ ಎಂಟ್ರಿಯಾದಕೂಡಲೇ ಅಲ್ಲಿನ ಸ್ಪರ್ಧಿಗಳ ಜನಪ್ರಿಯತೆ ಏಕಾಏಕಿ ಹೆಚ್ಚುತ್ತದೆ. ಜೊತೆಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಅವರು ಹೆಚ್ಚಿನದಾಗಿ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಸೀಸನ್‌ನಲ್ಲಿ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಮಾಹಿತಿಯ ಸುಳಿವಿಲ್ಲ. ಅಕ್ಟೋಬರ್ 20ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 7’ ಪ್ರಸಾರವಾಗಲಿದೆ.

Leave a Reply

Your email address will not be published. Required fields are marked *