GST ಪಾವತಿದಾರರಿಗೆ ಬಹುದೊಡ್ಡ ಗುಡ್ ನ್ಯೂಸ್ ಕೇಂದ್ರ!

ನವದೆಹಲಿ : ಜಿಎಸ್ ಟಿ ಪಾವತಿದಾರರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಜಿಎಸ್ ಟಿ ರಿಟರ್ನ್ ಫೈಲಿಂಗ್ ನವೆಂಬರ್ 30 ರ ವರೆಗೆ ವಿಸ್ತರಣೆ ಮಾಡಲಾಗಿದೆ.

 

ಹೌದು, ಸಿಬಿಐಸಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜಿಎಸ್ ಟಿ ರಿಟರ್ನ್-9, ಜಿಎಸ್ ಟಿ ರಿಟರ್ನ್ -9 ಎ ಮತ್ತು ಜಿಎಸ್ ಟಿ ರಿಟರ್ನ್ -9 ಸಿ ಅರ್ಜಿಯನ್ನು ಭರ್ತಿ ಮಾಡಲು ತೆರಿಗೆದಾರರಿಗೆ ನವೆಂಬರ್ 30 ರ ವರೆಗೆ ವಿಸ್ತರಿಸಲಾಗಿದೆ. ಸಿಬಿಐಸಿ ಟ್ವೀಟರ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹತಿ ನೀಡಿದ್ದು, ಜಿಎಸ್ ಟಿ ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದೆ. ಇದರಿಂದ ತೆರಿಗೆದಾರರು ಕೊಂಚ ನಿರಾಳರಾಗಿದ್ದಾರೆ.

 

2017-18 ರಲ್ಲಿನ ಜಿಎಸ್ ಟಿ ಪಾವತಿಯ ಅಂತಿಮ ದಿನಾಂಕವನ್ನು ಆಗಸ್ಟ್ 31 ಕ್ಕೆ ನಿಗದಿಪಡಿಸಲಾಗಿತ್ತು. ತಾಂತ್ರಿಕ ತೊಂದರೆಗೆಳು ಮತ್ತು ಹೊಂದಾಣಿಕೆಯಲ್ಲಿ ಎದುರಾದ ಸಮಸ್ಯೆಗಳಿಂದ ಮೂರು ತಿಂಗಳು ಮುಂದೂಡಲಾಗಿದೆ.ಕೊನೆಯ ದಿನಾಂಕವನ್ನು ನವೆಂಬರ್ 30 ಕ್ಕೆ ನಿಗದಿಪಡಿಸಲಾಗಿದೆ.

Leave a Reply

Your email address will not be published. Required fields are marked *