ಮನೆಯಲ್ಲಿ ತುಳಸಿ ಗಿಡ ಇದ್ದರೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನ ಮಾಡಬೇಡಿ..!!

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತುಂಬಾ ಪ್ರಮುಖ ಸ್ಥಾನವನ್ನ ನೀಡಲಾಗಿದೆ, ಪ್ರತಿ ದಿನ ತುಳಸಿಯನ್ನ ದೇವರು ಎಂದು ಭಾವಿಸಿ ಪೂಜೆ ಮಾಡುತ್ತಾರೆ.

ಪ್ರತಿ ಮನೆಯಲ್ಲಿ ಕೂಡ ತುಳಸಿ ಗಿಡ ಇದ್ದೆ ಇರುತ್ತದೆ, ಆದಿಶಕ್ತಿ ಅಂಶಗಳಲ್ಲಿ ಒಂದು ಅಂಶವೇ ತುಳಸಿ ದೇವಿ, ಆದ್ದರಿಂದ ತುಳಸಿ ಗಿಡದ ಹತ್ತಿರ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನ ಮಾಡಬಾರದು.

ಹಾಗಾದರೆ ಆ ತಪ್ಪುಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಪ್ರತಿದಿನ ನಾವು ಪೂಜೆ ಮಾಡುವ ತುಳಸಿ ಗಿಡದ ದಳಗಳನ್ನ ಕಿತ್ತು ಅದರಿಂದಲೇ ದೇವರಿಗೆ ಪೂಜೆ ಮಾಡುವುದು ತುಂಬಾ ತಪ್ಪು, ಹೀಗೆ ಪೂಜೆ ಮಾಡುವ ತುಳಸಿ ದಳಗಳನ್ನ ಕೀಳುವುದರಿಂದ ತುಳಸಿ ದೇವಿಯ ಕೋಪಕ್ಕೆ ಒಳಗಾಗಬೇಕಾಗುತ್ತದೆ.

ಆದ್ದರಿಂದ ಪ್ರತಿದಿನ ಪೂಜೆ ಮಾಡುವ ಸಮಯದಲ್ಲಿ ತುಳಸಿ ಗಿಡದ ದಳವನ್ನ ಕೀಳದೆ ಮತ್ತೊಂದು ತುಳಸಿ ಗಿಡವನ್ನ ನೆಟ್ಟು ಆ ಗಿಡದ ದಳಗಳನ್ನ ದೇವರಿಗೆ ಸಮರ್ಪಿಸಿದರೆ ಒಳ್ಳೆಯದು.

ಇನ್ನು ಒಗೆದ ಬಟ್ಟೆಗಳಿಂದ ಬರುವ ನೀರನ್ನ ತುಳಸಿ ಗಿಡದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು, ಅಪ್ಪಿ ತಪ್ಪಿ ಬಟ್ಟೆಯ ನೀರಿನ ಹನಿಗಳು ತುಳಸಿ ಗಿಡದ ಮೇಲೆ ಬಿದ್ದರೆ ತುಳಸಿ ಅಗೌರವ ಮಾಡಿದಂತೆ ಆಗುತ್ತದೆ.

ಇನ್ನು ಯಾರಿಗಾದರೂ ತುಳಸಿ ಗಿಡದ ಬೀಜಗಳನ್ನ ಕೊಡಬೇಕೆಂದರೆ ಪ್ರತಿದಿನ ಪೂಜೆ ಮಾಡುವ ತುಳಸಿ ಗಿಡದ ಬೀಜಗಳನ್ನ ನೀಡದೆ ಮತ್ತೊಂದು ತುಳಸಿ ಗಿಡದ ಬೀಜವನ್ನ ನೀಡಿದರೆ ತುಂಬಾ ಒಳ್ಳೆಯದು.

ಗಣೇಶ ಚತುರ್ಥಿ ದಿನ ಬಿಟ್ಟು ಬೇರೆ ಯಾವ ದಿನ ಕೂಡ ಗಣೇಶನಿಗೆ ತುಳಸಿ ದಳಗಳಿಂದ ಪೂಜೆ ಮಾಡಬಾರದು, ಇನ್ನು ಅರಸಿನದಿಂದ ಮಾಡಿದ ಗಣಪತಿಯನ್ನ ಪೂಜೆ ಮಾಡಿದ ನಂತರ ಅರಿಸಿನ ಗಣಪತಿಯನ್ನ ತೆಗೆದುಕೊಂಡು ಹೋಗಿ ತುಳಸಿ ಗಿಡದ ಹತ್ತಿರ ಇಡುತ್ತಾರೆ, ಆದರೆ ಇದು ತಪ್ಪು.

ಇನ್ನು ಮನೆಯಲ್ಲಿ ಒಣಗಿದ ತುಳಸಿ ಗಿಡವನ್ನ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು, ಒಂದುವೇಳೆ ತುಳಸಿ ಗಿಡ ಒಣಗಿ ಹೋದರೆ ಅದನ್ನ ಹರಿಯುವ ನೀರಿನಲ್ಲಿ ಬಿಡಬೇಕು, ಒಣಗಿದ ತುಳಸಿ ಗಿಡ ಮನೆಯಲ್ಲಿ ಇದ್ದರೆ ಅಶುಭ ಎಂದು ಹೇಳಲಾಗುತ್ತದೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಿಡಿಯೋ ನೋಡಿ

Leave a Reply

Your email address will not be published. Required fields are marked *