ಸರ್ಕಾರದಿಂದ ರಾಜ್ಯದ ಜನತೆಗೆ ಸಿಹಿಸುದ್ದಿ : ಇನ್ನುಮುಂದೆ ಟ್ರಾಫಿಕ್ ದಂಡ ಏನಾಗಲಿದೆ ಗೊತ್ತೆ?

ಬೆಂಗಳೂರು: ವಾಹನ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದ್ದ ‘ದುಬಾರಿ ದಂಡ’ಕ್ಕೆ ಬ್ರೇಕ್ ಬಿದ್ದಿದೆ. ನೂತನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದ ಪರಿಣಾಮ, ಸಿಗ್ನಲ್ ಬ್ರೇಕ್ ಸೇರಿದಂತೆ ಪ್ರತಿಯೊಂದು ಸಂಚಾರಿ ನಿಯಮ ಉಲ್ಲಂಘನೆಗೂ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿತ್ತು. ಈ ಬಗ್ಗೆ ಸಿಎಂ ಯಡಿಯೂರಪ್ಪ ಸಾರಿಗೆ ಇಲಾಖೆ ಜೊತೆ ಮಾತುಕತೆ ನಡೆಸಿದ್ದು, ರಾಜ್ಯದಲ್ಲಿ ದುಬಾರಿ ದಂಡವನ್ನು ತೆಗೆದು ಹಾಕಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *