ಪುಲ್ವಾಮದಲ್ಲಿ ಮತ್ತೆ ಭೀಕರ ಉಗ್ರ ದಾಳಿ : ದಾಳಿಯಲ್ಲಿ ಸಿಕ್ಕ ಯೋಧರು ಏನಾಗಿದ್ದಾರೆ ಗೊತ್ತಾ?

ಶ್ರೀನಗರ: ಸೇನಾ ವಾಹನವನ್ನು ಟಾರ್ಗೆಟ್ ಮಾಡಿ IED ಸ್ಫೋಟಕಗಳೊಂದಿಗೆ ಉಗ್ರರು ದಾಳಿ ನಡೆಸಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ. ಕೇಂದ್ರ ಮೀಸಲು ಪಡೆಯ ಪೊಲೀಸರ ಮೇಲೆ ಕಳೆದ ಬಾರಿ ದಾಳಿ ನಡೆಸಿದ್ದ ಪುಲ್ವಾಮಾ ಪ್ರದೇಶದ ಬಳಿಯೇ ಇಂದು ದಾಳಿ ನಡೆಸಲು ಉಗ್ರರು ಯತ್ನಿಸಿದ್ದಾರೆ. ಈ ವೇಳೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಸೇನಾ ವಾಹನ ಕ್ಯಾಸ್ಪರ್ ವಾಹನ ಜಖಂ ಗೊಂಡಿದೆ. ಸದ್ಯ ಉಗ್ರರೊಂದಿಗಿನ ಗುಂಡಿನ ಕಾಳಗ ಇಂದಿಗೂ ಮುಂದುವರಿದಿದೆ ಎಂಬ ಮಾಹಿತಿ ಲಭಿಸಿದೆ.

ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ ವಾಹನ ಮೇಲೆ ಪುಲ್ವಾಮಾದ ಅರಿಹಲ್ ಗ್ರಾಮದ ಬಳಿ ದಾಳಿ ನಡೆದಿದ್ದು, ದಾಳಿಯ ಬೆನ್ನಲ್ಲೇ ವಾಹನದ ಮೇಲೆ ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆದಿದೆ. ದಕ್ಷಿಣ ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಎನ್‍ಕೌಂಟರ್ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ. ಜಿಲ್ಲೆಯ ಅಚ್ಚಲ್‍ಬಾಗ್‍ನ ಬಡೋರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಓರ್ವ ಉಗ್ರನನ್ನು ಹೊಡೆದುರಳಿಸಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಲಭಿಸಿದೆ. ಯೋಧರು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಆರ್ಮಿ ಮೇಜರ್ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದರು. ಉಗ್ರರು ಅಡಗಿಕೊಂಡು ಕುಳಿತಿರುವ ಮಾಹಿತಿ ಪಡೆದ ಯೋಧರು, ಪೊಲೀಸರೊಂದಿಗೆ ಶೋಧ ಕಾರ್ಯ ನಡೆಸಿದ್ದರು. ಈ ವೇಳೆಯೇ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ಆರ್ಮಿ ಮೇಜರ್ ಅವರನ್ನು ಶ್ರೀನಗರ ಆರ್ಮಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸೇನೆಗೆ ಮತ್ತಷ್ಟು ಬಲ : ಅರವತ್ತು ವರ್ಷದಲ್ಲಿ ಕಾಂಗ್ರೆಸ್ ನಿಂದ ಆಗದ ಕೆಲಸವನ್ನು ಅಧಿಕಾರಕ್ಕೆ ಬಂದ 2 ದಿನದಲ್ಲಿ ಮಾಡಿದ ಮೋದಿ!!

ನವದೆಹಲಿ: ದೇಶ ರಕ್ಷಣೆಗೈದವರಿಗೆ ಪ್ರಧಾನಿ ಮೋದಿ ಸರ್ಕಾರ ತನ್ನ ಮೊದಲ ಕ್ಯಾಬಿನೆಟ್‍ನಲ್ಲಿ ಗೌರವ ಸಲ್ಲಿಸಿದೆ. ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ(ಪಿಎಂಎಸ್‍ಎಸ್) ಮೊತ್ತವನ್ನು ಏರಿಕೆ ಮಾಡಲಾಗಿದೆ. ಎನ್‍ಡಿಎ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ ಇಂದು ನಡೆದಿದ್ದು, ರಾಷ್ಟ್ರೀಯ ರಕ್ಷಣಾ ನಿಧಿಯಿಂದ ನೀಡಲಾಗುತ್ತಿದ್ದ ಪಿಎಂಎಸ್‍ಎಸ್ ಮೊತ್ತವನ್ನು ಏರಿಕೆ ಮಾಡಿರುವುದಾಗಿ ಸರ್ಕಾರ ತಿಳಿಸಿದೆ. ನಮ್ಮ ದೇಶವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರಿಗೆ ಗೌರವ ಸಲ್ಲಿಸಲು ಮೊದಲ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಈ ವಿದ್ಯಾರ್ಥಿವೇತನ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಯೋಧರ ಮಕ್ಕಳಿಗೆ ಮಾತ್ರ ಲಭ್ಯವಾಗುತಿತ್ತು. ಈಗ ಈ ವಿದ್ಯಾರ್ಥಿ ವೇತನವನ್ನು ರಾಜ್ಯಗಳಿಗೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿರುವ ಪೊಲೀಸರಿಗೆ ವಿಸ್ತರಿಸಲಾಗಿದ್ದು, ನಕ್ಸಲ್/ಉಗ್ರರ ಕಾರ್ಯಾಚರಣೆ ವೇಳೆ ಮೃತಪಟ್ಟ ಪೊಲೀಸರ ಮಕ್ಕಳಿಗೆ ಇನ್ನು ಮುಂದೆ ಈ ವಿದ್ಯಾರ್ಥಿವೇತನ ಸಿಗಲಿದೆ. ಹುಡುಗರಿಗೆ ಶೇ.25 ರಷ್ಟು ಏರಿಕೆ ಆಗಿದ್ದರೆ ಹುಡುಗಿಯರಿಗೆ ಮೊತ್ತ ಶೇ.33 ರಷ್ಟು ಏರಿಕೆ ಮಾಡಲಾಗಿದೆ. ಇಲ್ಲಿಯವರಗೆ ಹುಡುಗರಿಗೆ ಪ್ರತಿ ತಿಂಗಳು 2 ಸಾವಿರ ರೂ. ವಿದ್ಯಾರ್ಥಿ ವೇತನ ಸಿಗುತ್ತಿದ್ದರೆ ಈಗ ಈ ಮೊತ್ತ 2,500ಕ್ಕೆ ಏರಿಕೆಯಾಗಿದೆ. ಹುಡುಗಿಯರಿಗೆ ಈ ಮೊದಲು 2,250 ರೂ. ವಿದ್ಯಾರ್ಥಿ ವೇತನ ಸಿಕ್ಕಿದ್ದರೆ ಈಗ 3,000 ರೂ.ಗೆ ಏರಿಕೆಯಾಗಿದೆ.

ಪುಲ್ವಾಮದಲ್ಲಿ ಇಬ್ಬರು ಉಗ್ರರನ್ನು 72 ಕನ್ಯೆಯರ ಬಳಿ ಕಳಿಸಿದ ಸೇನೆ!

ಶ್ರೀನಗರ: ಕಾಶ್ಮೀರದ ಪುಲ್ವಾಮದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಬೆಳಗ್ಗ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ್ದಾರೆ.

ಸಿಆರ್ ಪಿಎಫ್, ರಾಷ್ಟ್ರೀಯ ರೈಫಲ್ಸ್ ಹಾಗೂ ಸ್ಪೆಶಲ್ ಆಪರೇಶನ್ಸ್ ಗ್ರೂಪ್ ಶೋಧ ಕಾರ್ಯ ನಡೆಸುತ್ತಿತ್ತು. ಈ ವೇಳೆ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಹಾಗಾಗಿ ಯೋಧರು ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರ ಜೊತೆ ನಾಗರೀಕ ಕೂಡ ಗಾಯಗೊಂಡಿದ್ದಾರೆ. ಸದ್ಯ ಯೋಧರ ಕಾರ್ಯಚರಣೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಹಾಡನ್ನು ಪ್ರಸಾರ ಮಾಡದಂತೆ ಪಾಕಿಸ್ತಾನ ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಕೂಡ ಆದೇಶಿಸಿತ್ತಂತೆ! ಇಂದೇ ವೈರಲ್ ಮಾಡೋಣ

ಈ ದೇಶಭಕ್ತಿಯ ಹಾಡನ್ನು ಪ್ರಸಾರ ಮಾಡದಂತೆ ಪಾಕಿಸ್ತಾನ ಮಾತ್ರವಲ್ಲ ಅಂದಿನ ಕಾಂಗ್ರೆಸ್ ಸರ್ಕಾರ ಕೂಡ ಆದೇಶಿಸಿತ್ತಂತೆ. ಈ ಹಾಡನ್ನು ಪ್ರಸಾರ ಮಾಡಬಾರದೆಂದು ಕಾಂಗ್ರೇಸ್ ಸರ್ಕಾರ ದೂರದರ್ಶನ ಹಾಗೂ ರೇಡಿಯೋ ಮತ್ತು ಇನ್ನಿತರ ಮಾಧ್ಯಮಗಳಿಗೂ ಆದೇಶ ಹೊರಡಿಸಿತ್ತಂತೆ. ಆದರೆ ಇಂದು ಈ ಹಾಡು ಮತ್ತೆ ವೈರಲ್ ಮಾಡುವ ಕರ್ತವ್ಯ ನಮ್ಮದು.. ಕೇಳಿ ಶೇರ್ ಮಾಡೋಣ.. ಎಲ್ಲಾ ದೇಶಭಕ್ತರಿಗೂ ತಲಿಪಿಸೋಣ!

ನೀವು ದೇಶಭಕ್ತರಾಗಿದ್ದರೆ ತಪ್ಪದೇ ಶೇರ್ ಮಾಡಿ ;

ಮೋದಿ ವಿರುದ್ಧ ಸ್ಪರ್ಧಿಸಲು ಹೊರಟ BSF ಯೋಧನ ಮುಖವಾಡ ಕಳಚಿಬಿತ್ತು! ಅಯೋಗ್ಯನೆಂದು ಸೇನೆ ಆತನನ್ನು ಕಿತ್ತೆಸಿದ್ದೇಕೆ ಗೊತ್ತೆ?

ಬಿಎಸ್‌ಎಫ್ ಯೋಧರಿಗೆ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ವಿಡಿಯೊ ಅಪ್‌ಲೋಡ್ ಮಾಡಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ನನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಯೋಧ ತೇಜ್ ಬಹದ್ದೂರ್ ಯಾದವ್ ಅನ್ನು ‘ಅಶಿಸ್ತಿನ’ ಕಾರಣ ನೀಡಿ ಸೇವೆಯಿಂದ ವಜಾಗೊಳಿಸಲಾಗಿತ್ತೆಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ.

ಬಿಎಸ್‌ಎಫ್ ಕಾಯ್ದೆ ಮತ್ತು ನಿಯಮಗಳ ಅನ್ವಯ ಅವನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.

ಬಿಎಸ್‌ಎಫ್ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ತೇಜ್ ಬಹದ್ದೂರ್ ಯಾದವ್ ಫೇಸ್‌ಬುಕ್‌ನಲ್ಲಿ ಹಾಕಿದ್ದ ವಿಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಪ್ರಧಾನಿ ಕಾರ್ಯಾಲಯವು ಕೇಂದ್ರ ಗೃಹ ಸಚಿವಾಲಯ ಹಾಗೂ ಬಿಎಸ್‌ಎಫ್ ಕಡೆನಿಂದ ವರದಿ ಕೇಳಿತ್ತು. ವಿಡಿಯೊ ವೈರಲ್ ಆಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಯೋಧರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.

ಈತ ಒಬ್ಬ ಅಯೋಗ್ಯ ಎಂದು ಹೇಳಲು ಇಲ್ಲಿದೆ ಸಾಕ್ಷಿ.

ಬಿಎಸ್​ಎಫ್​ ಯೋಧರ ಸ್ಥಿತಿಗತಿ ಅಧ್ಯಯನಕ್ಕೆ ನಡೆಸಿದ್ದ ಅಧಿಕಾರಿಗಳಿಗೆ ಅಂದು ಶಾಕ್ ಒಂದು ಕಾದಿತ್ತು. ತೇಜ್ ಬಹದ್ದೂರ್ ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ. ಅನುಮತಿ ಪಡೆಯದೆ ಗೈರು ಹಾಜರಾಗುತ್ತಿದ್ದ. ಅತಿಯಾದ ಮಧ್ಯಪಾನ ಮಾಡುವುದು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ಪ್ರಶ್ನಿಸಿದ ಅಧಿಕಾರಿಗಳ ವಿರುದ್ಧ ಷ್ಯಡ್ಯಂತ್ರ ರೂಪಿಸಲು ಕಳಪೆ ಆಹಾರ ಎಂದು ವೀಡಿಯೋ ಮಾಡಿದ್ದ ಎಂದು ಬಯಲಾಗಿದೆ.

ವೈರಲ್ ಆದ ಈ ಫೋಟೋ ಹಿಂದಿನ ಸತ್ಯಾಂಶ ಏನು? ಕೇಳಿದ್ರೆ ನೀವು ಅಚ್ಚರಿಯಾಗೋದು ಪಕ್ಕಾ!

ನವದೆಹಲಿ : 2019 ರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 116 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿದಿದೆ.

ಈ ಮಧ್ಯೆ ಮಹಿಳೆಯೋರ್ವರು ಮತದಾನ ಮಾಡಲು ಮತಗಟ್ಟೆ ಒಳಗೆ ಹೋದಾಗ, ಮತಗಟ್ಟೆಯ ಭದ್ರತೆಗೆ ನಿಯೋಜನೆಗೊಂಡಿದ್ದ CRPF ಯೋಧನೋರ್ವ ಆಕೆಯ ಕಂದನನ್ನು ಆರೈಕೆ ಮಾಡಿದ ಫೋಟೋ ಭಾರೀ ವೈರಲ್ ಆಗಿದೆ.

ಪುಲ್ವಾಮ ದಾಳಿ ಮಾದರಿಯಲ್ಲಿ CRPF ಮೇಲೆ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರ ಹೆದರಿ ಪರಾರಿ! ಉಗ್ರನ ಬಳಿ ಸಿಕ್ಕ ಆ ಪತ್ರದಲ್ಲೇನಿತ್ತು ಗೊತ್ತೆ?

ಶನಿವಾರ ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ ಬನಿಹಾಲ್ ಬಳಿ ಪುಲ್ವಾಮಾ ದಾಳಿಯ ಮಾದರಿಯಲ್ಲಿ ಸಿಆರ್ ಪಿಎಫ್ ವಾಹನಕ್ಕೆ ಕಾರು ಡಿಕ್ಕಿ ಹೊಡೆಸಲು ಸಂಚು ರೂಪಿಸಲಾಗಿತ್ತು ಆದರೆ ಸಿಆರ್ ಪಿಎಫ್ ವಾಹನದ ಸ್ವಲ್ಪ ದೂರದಲ್ಲಿ ಕಾರ್ ಸ್ಫೋಟಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಇತ್ತ ಸ್ಫೋಟಕ್ಕೂ ಮುನ್ನ ಸ್ಯಾಂಟ್ರೋ ಕಾರು ಚಾಲಕನಾಗಿದ್ದ ಉಗ್ರ ಓಡಿ ಹೋಗಿದ್ದನು. ಕಾರು ಚಾಲಕ ಓರ್ವ ಆತ್ಮಾಹುತಿ ದಾಳಿಕೋರ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಈ ಸಂಬಂಧ ಜಮ್ಮು-ಕಾಶ್ಮೀರ ಪೊಲೀಸರಿಗೆ ಉಗ್ರನ ಬರೆದಿದ್ದ ಪತ್ರ(ಸೂಸೈಡ್ ನೋಟ್)ವೊಂದು ಲಭ್ಯವಾಗಿದೆ.

ಆತ್ಮಾಹುತಿ ದಾಳಿಕೋರನನ್ನು ಓವೈಸ್ ಅಮೀನ್ ಎಂದು ಗುರುತಿಸಲಾಗಿದೆ. ಓವೈಸ್ ದಾಳಿಗೂ ಮುನ್ನವೇ ಸ್ಫೋಟಕಗಳಿಂದ ಕಾರ್ ಬಿಟ್ಟು ಓಡಿ ಹೋಗಿದ್ದಾನೆ. ಜಮ್ಮು-ಕಾಶ್ಮೀರ ಪೊಲೀಸರಿಗೆ ಎರಡು ಪುಟಗಳ ಪತ್ರ ದೊರೆತಿದ್ದು, ಉಗ್ರ ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದನು ಎಂಬುವುದು ಬಯಲಾಗಿದೆ. ಹೀಗಾಗಿ ಸೈನಿಕರ ವಾಹನಕ್ಕೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಆತ್ಮಾಹುತಿ ದಾಳಿ ನಡೆಸಲು ಉಗ್ರ ಓವೈಸ್ ಪ್ಲಾನ್ ಮಾಡಿದ್ದ. ಕೊನೆ ಕ್ಷಣದಲ್ಲಿ ತನ್ನ ಸಾವಿಗೆ ಹೆದರಿದ ಓವೈಸ್, ಸೈನಿಕರ ವಾಹನದ ಕೂಗಳತೆಯ ದೂರದಲ್ಲಿ ಕಾರ್ ಸ್ಫೋಟಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ.

ಅಲ್ಲದೇ ಪತ್ರದಲ್ಲಿ ತಾನು ಈ ಪತ್ರ ಸಿಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದೆಲ್ಲಾ ಬರೆದಿಟ್ಟಿದ್ದಾನೆ. ಆದರೆ ಆತನ ಪುಕ್ಕುಲುತನ ಇದನ್ನೆಲ್ಲಾ ದೂರವಾಗಿಸಿದೆ.

ವೀಡಿಯೋ : 4 ಜೈಷ್ ಉಗ್ರರ ರುಂಡ ಚೆಂಡಾಡಿದ ಭಾರತೀಯ ಸೇನೆ!

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಇಂದು ಗುಂಡಿನ ಚಕಮಕಿ ನಡೆದಿದ್ದು ಲಷ್ಕರ್-ಏ-ತೋಯ್ಬಾ ಉಗ್ರ ಸಂಘಟನೆಯ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲ್ಲಾಗಿದೆ ಎಂದು ತಿಳಿದುಬಂದಿದೆ.

2 ಎಕೆ ರೈಫಲ್ಸ್, 1 SLR ಹಾಗೂ ಪಿಸ್ತೂಲನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಒಟ್ಟಿನಲ್ಲಿ ಪದೇ ಪದೇ ಗಡಿ ಉಲ್ಲಂಘಿಸುವ ಉಗ್ರರಿಗೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸುತ್ತಿದ್ದಾರೆ.

ಪುಲ್ವಾಮ ಹೊಸದೇನಲ್ಲ!

ಫೆ. 14ರ ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಆರ್ಡಿಎಕ್ಸ್ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಪರಿಣಾಮ 46 CRPF ಯೋಧರು ಹುತಾತ್ಮರಾಗಿದ್ದರು.

ಏರ್ ಸ್ಟ್ರೈಕ್ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದ ಪಾಕ್!! ಇಮ್ರಾನ್‌ಖಾನ್‌ಗೆ ಭಾರೀ ಮುಖಭಂಗ

ಏರ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಭಾರತದ ಕೆಲ ರಾಜಕೀಯ ಪಕ್ಷಗಳು ಸಾಕ್ಷಿಗಳನ್ನು ಕೇಳಿ ದಾಳಿ ನಡೆದಿರುವುದನ್ನೇ ಅನುಮಾನಿಸಿದ್ದರು. ಆದರೆ ದಾಳಿ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿ ಆಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿದೆ.

ಬಾಲಕೋಟ್ ಭಯೋತ್ಪಾದಕ ವಿರುದ್ಧ ಭಾರತ ದಾಳಿಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿಯೊಬ್ಬರು ಮಾತನಾಡಿರುವ 3 ನಿಮಿಷಗಳ ಆಡಿಯೋ ಲಭ್ಯವಾಗಿದೆ. ಏರ್ ಸ್ಟ್ರೈಕ್ ನಡೆದಿದೆ ಎಂದು ಮೊದಲು ಒಪ್ಪಿಕೊಂಡಿದ್ದ ಪಾಕಿಸ್ತಾನ ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಆದರೆ ಬಾಂಬ್ ದಾಳಿಯಿಂದ ಪರಿಸರ ಮೇಲೆ ದಾಳಿ ನಡೆದಿದೆ ಎಂದು ವಿಶ್ವಸಂಸ್ಥೆಗೂ ದೂರು ನೀಡಲು ಮುಂದಾಗಿತ್ತು. ಆದರೆ ಸದ್ಯ ಘಟನೆಯನ್ನು ಪ್ರಪಂಚಕ್ಕೆ ತಿಳಿಯದಂತೆ ಮಾಡಲು ಪಾಕಿಸ್ತಾನ ಎಷ್ಟೆಲ್ಲಾ ಪ್ರಯತ್ನ ನಡೆಸಿತ್ತು ಎನ್ನುವುದು ಬಹಿರಂಗವಾಗಿದೆ.

ಭಾರತ ದಾಳಿ ನಡೆಸಿ ಬಾಲಕೋಟ್ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರು ನೆಲೆಸಿದ್ದಾರೆ ಎನ್ನುವುದು ಖಚಿತವಾಗಿದೆ. ಅಲ್ಲದೇ ದಾಳಿಯಲ್ಲಿ ಸಾಕಷ್ಟು ಉಗ್ರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಮಾಹಿತಿ ಹೊರಬಾರದಂತೆ ತಡೆಯಲು ಯತ್ನಿಸಿದ್ದ ಪಾಕಿಸ್ತಾನ ಸೇನೆ ಸಂಪೂರ್ಣ ಪ್ರದೇಶವನ್ನು ವಶಕ್ಕೆ ಪಡೆದು ಯಾರು ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿತ್ತು.

ದಾಳಿಯಲ್ಲಿ ಮೃತಪಟ್ಟ ಉಗ್ರರ ಶವಗಳನ್ನು ಸಂಗ್ರಹಿಸಿದ್ದ ಪಾಕ್ ಹಲವು ಕಾರುಗಳಲ್ಲಿ ಪೆಟ್ರೋಲ್ ತಂದು ಸುರಿದು ಸ್ಥಳದಲ್ಲೇ ಸುಟ್ಟು ಹಾಕಿತ್ತು. ಅಷ್ಟು ಶವಗಳನ್ನು ಸುಟ್ಟು ಹಾಕಲು ಸಾಧ್ಯವಾಗದ ಪರಿಣಾಮ ಒಂದಷ್ಟು ಶವಗಳನ್ನು ಹತ್ತಿರದ ಕುಲ್ಹಾಗ್ ನದಿಗೆ ಎಸೆದು ಸಾಕ್ಷ್ಯ ನಾಶ ಪಡಿಸಿತ್ತು ಎಂಬ ಮಾಹಿತಿ ಲಭಿಸಿದೆ.

ಏರ್ ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೇ ಇಡೀ ಪ್ರದೇಶವನ್ನು ವಶಕ್ಕೆ ಪಡೆದ ಸೇನೆ ಬಳಿಕ ಇಡೀ ಪ್ರದೇಶದ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಮೂಲಕ ಘಟನೆಯ ಫೋಟೋ, ವಿಡಿಯೋ ವೈರಲ್ ಆಗದಂತೆ ಬಂದ್ ಮಾಡಿತ್ತು. ಪಾಕಿಸ್ತಾನದ ಸೇನಾ ಅಧಿಕಾರಿ ಕೆಲ ಫೋಟೋಗಳನ್ನು ಟ್ವೀಟ್ ಮಾಡಿ ಏನು ಆಗಿಲ್ಲ ಎಂಬಂತೆ ಬಿಂಬಿಸಿದ್ದರು. ಅಲ್ಲದೇ ಮಾಧ್ಯಮಗಳು ಸೇರಿದಂತೆ ಯಾರಿಗೂ ಹೇಳಿಕೆ ನೀಡದಂತೆ ಸ್ಥಳೀಯ ಮಂದಿ ಮೇಲೆ ಹಲ್ಲೆ ನಡೆಸಿ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿತ್ತು. ಅವರಲ್ಲಿದ್ದ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡಿತ್ತು ಎಂದು ತಿಳಿದು ಬಂದಿದೆ.

ಬಾಂಬ್ ದಾಳಿಯಲ್ಲಿ ಗಾಯಗೊಂಡ ಉಗ್ರರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡದೇ ಅಫ್ಘಾನಿಸ್ತಾನದ ಗಡಿಗೆ ಕಳುಹಿಸಿಕೊಟ್ಟು ಪ್ರದೇಶವನ್ನು ಕ್ಲೀಯರ್ ಮಾಡಿತ್ತು. ದಾಳಿಯಲ್ಲಿ ಜೈಷ್ ಎ ಮೊಹಮ್ಮದ್ ಸಂಘಟನೆಯ ಬಾಂಬ್ ತಜ್ಞ, ಸಾಫ್ಟ್‍ವೇರ್ ಎಕ್ಸ್‍ಪರ್ಟ್ ಬಲಿಯಾಗಿರುವುದು ಕೂಡ ಸ್ಪಷ್ಟವಾಗಿದೆ.

ಉಗ್ರ ಕೇಂದ್ರದಲ್ಲಿದ್ದ ಉಗ್ರರಲ್ಲಿ ಹೆಚ್ಚಿನವರು ಜೈಷ್ ಸಂಘಟನೆಗೆ ಸೇರಿದವರು. ಸ್ಥಳೀಯ ವ್ಯಕ್ತಿಯ ಹೇಳಿಕೆ ಅನ್ವಯ ಭಾರತದ ದಾಳಿಯನ್ನು ಕಂಡು ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್‍ಐ ಹಾಗೂ ಜೈಷ್ ಸಂಘಟನೆ ಭಯಗೊಂಡಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಎಷ್ಟು ಮಂದಿ ಸಾವನ್ನಪಿದ್ದರು ಎಂದು ಹೇಳುವುದು ಕಷ್ಟಸಾಧ್ಯ ಎಂದಿದ್ದಾನೆ.

ನಮಗೆ ನಂಬಿಕೆ ಇದೆ. ಭಾರತ ಮತ್ತೊಮ್ಮೆ ಈ ರೀತಿ ಉಗ್ರರ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು. ಮತ್ತೆ ದಾಳಿ ನಡೆಸಿದರೆ ನಮಗೆ ಉಗ್ರರ ಸಮಸ್ಯೆಯೇ ಇಲ್ಲವಾಗುತ್ತದೆ ಎಂದು ಸ್ಥಳೀಯ ವ್ಯಕ್ತಿ ಹೇಳಿದ್ದಾನೆ. ಭಾರತ ಮತ್ತೊಂದು ದಾಳಿ ನಡೆಸಿದರೆ ಸ್ಥಳದಲ್ಲಿ ಅಡಗಿ ಕುಳಿತುಕೊಳ್ಳಲು ಎಲ್ಲೂ ಅವಕಾಶ ಇಲ್ಲದ ಪರಿಣಾಮ ಉಗ್ರರನ್ನು ಪಾಕ್ ಅಫ್ಘಾನ್ ಗಡಿಗೆ ಶಿಫ್ಟ್ ಮಾಡಿದೆ.

ಅಲ್ಲದೇ ಇಂದು ಪುಲ್ವಾಮಾ ದಾಳಿಯ ಸಂಚುಕೋರ ಮುದಾಸೀರ್ ಎನ್‌ಕೌಂಟರ್‌‌ಗೆ ಬಲಿಯಾಗಿದ್ದಾನೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಯೋಧರ ಸಾವಿಗೆ ಕಾರಣವಾದ ಮಾಸ್ಟರ್ ಮೈಂಡ್ ಉಗ್ರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭರ್ಜರಿ ಭೇಟಿಯಾಡಿದ್ದಾರೆ. ಜೈಶ್-ಇ-ಮೊಹಮ್ಮದ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮುದಾಸೀರ್ ಅಹ್ಮದ್ ಖಾನ್ ಅಲಿಯಾಸ್ ಮೋದ್ ಭಾಯ್, ಸೇರಿದಂತೆ ಮೂವರು ಉಗ್ರರು ಮೃತಪಟ್ಟಿದ್ದಾರೆ. ಇವರೆಲ್ಲರೂ ದಕ್ಷಿಣ ಕಾಶ್ಮೀರದ ಥ್ರಾಲ್ ನಲ್ಲಿ ಮಧ್ಯರಾತ್ರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಮೂಲಕ ಭಾರತೀಯ ಸೇನೆ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಿಂಗ್ಲಿಷ್ ಗ್ರಾಮದ ಬಳಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಮೂಲಗಳ ಪ್ರಕಾರ ಉಗ್ರರ ಶವಗಳ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

40 ಯೋಧರು ಹುತಾತ್ಮ:
ಫೇ. 14ರ ಪ್ರೇಮಿಗಳ ದಿನವಾದ ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು.