ನಾವೆಲ್ಲ ಅತೃಪ್ತರಲ್ಲ ಎಂದು ಹೊಸ ಬಾಂಬ್ ಸಿಡಿಸಿದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ..!!

ನನಗೆ ಯಾವುದೇ ನಾಯಕರ ಮೇಲೆ ಅವಿಶ್ವಾಸವಿಲ್ಲ. ಹಿರಿಯ ರಾಜಕಾರಣಿಗಳನ್ನೆಲ್ಲ ನಾನು ಗೌರವಿಸುತ್ತೇನೆ. ರಾಜೀನಾಮೆ ಕೊಟ್ಟ ನಾವೆಲ್ಲ ಅತೃಪ್ತರಲ್ಲ, ಅಸಹಾಯಕರು ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಮುಂಬೈನಿಂದ ಆಗಮಿಸಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ನನಗೆ ಯಾವ ಬೇಸರವೂ ಇಲ್ಲ. ಅವರು ಹಿರಿಯರು. ಈಗ ಅವರೇ ನಮ್ಮ ನಾಯಕರಲ್ಲ ಎಂದು ಹೇಳಿದ್ದಾರೆ. ಅವರ ಮಾತಿಗೆ ಯಾವುದೇ ಕಾಮೆಂಟ್ ಕೊಡುವುದಿಲ್ಲ. ಅವರಿಗೆಲ್ಲ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿದರು.

ನಾವು ಬಹುದೂರ ಹೋದ ಬಳಿಕ ಮನವೊಲಿಸಲು ಬಂದಿದ್ದಾರೆ. ರಾಜೀನಾಮೆ ನೀಡಲು ಕಾರಣವಿದೆ. ಅನರ್ಹತೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಹೆಜ್ಜೆ ಇಟ್ಟಾಗಿದೆ. ಹಿಂದೆ ಸರಿಯುವುದಿಲ್ಲ. ನಾನು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ ಹೊರತು ಪಕ್ಷಕ್ಕೆ ನೀಡಿಲ್ಲ. ಸ್ಪೀಕರ್, ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗುತ್ತೇನೆ ಎಂದು ತಿಳಿಸಿದರು.

ಹಣದಾಸೆಯಿಲ್ಲ

ರಾಜೀನಾಮೆ ನೀಡಿದ ಶಾಸಕರು ಎಲ್ಲರೂ ಅನುಭವಿಗಳೇ. ಹಣದಾಸೆಗೆ ಯಾವ ಶಾಸಕರೂ ರಾಜೀನಾಮೆ ನೀಡಿಲ್ಲ. ನಾವೆಲ್ಲ ಆರ್ಥಿಕವಾಗಿ ಸಬಲರಾಗಿಯೇ ಇದ್ದೇವೆ. ರಾಜೀನಾಮೆ ಅಂಗೀಕಾರ ಆಗುವವರೆಗೆ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಈ ಎಲ್ಲ ಘಟನಾವಳಿಗಳಿಂದ ಆದ ತೊಂದರೆಗೆ ಕ್ಷೇತ್ರದ ಮತದಾರರಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.

ಅಧಿಕಾರಿಗಳ ಜತೆ ಸಭೆ
ಯಲ್ಲಾಪುರ ತಾಲೂಕು ಪಂಚಾಯಿತಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಅಧಿಕಾರಿಗಳ ಜತೆ ಸಭೆ ನಡೆಸಿದರು. ಕಳೆದ 20 ದಿನಗಳಿಂದ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಅತಿವೃಷ್ಟಿ-ಅನಾವೃಷ್ಟಿ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ದೊಡ್ಡ ಬೆಳವಣಿಗೆ; ಈ ಶಾಸಕರ ಶಾಸಕತ್ವ ಅನರ್ಹ..! ಯಾರದು ಗೊತ್ತಾ..??

ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ 17 ಶಾಸಕರ ರಾಜೀನಾಮೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. ಗುರುವಾರ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ ವಿಧಾನ ಸಭಾಧ್ಯಕ್ಷರಾಗಿರುವ ರಮೇಶ್ ಕುಮಾರ್ ಅವರು ಅತೃಪ್ತ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ನೀಡಿದರು.

ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:
– ಅತೃಪ್ತ ಶಾಸಕರು ಕರ್ನಾಟಕ ವಿಧಾನ ಸಭಾ ನಿಯಮಾವಳಿಗೆ ಅನುಗುಣವಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿರಲಿಲ್ಲ.

– ಬಳಿಕ ಅವರೆಲ್ಲಾ ವಿಶೇಷ ವಿಮಾನದಲ್ಲಿ ಮುಂಬಯಿಯಿಂದ ಆಗಮಿಸಿ ನನ್ನ ಎದುರಿನಲ್ಲೇ ಸರಿಯಾದ ಮಾದರಿಯಲ್ಲಿ ತಮ್ಮ ರಾಜೀನಾಮೆ ಪತ್ರವನ್ನು ಮರಳಿ ಸಲ್ಲಿಸಿದ್ದಾರೆ.

– ಶಾಸಕರೊಬ್ಬರಿಗೆ ತಮ್ಮ ಪಕ್ಷದ ನಿರ್ಧಾರಗಳ ಕುರಿತಾಗಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು.

– ಇದು ಶರದ್ ಯಾದವ್ ಪ್ರಕರಣದಲ್ಲೇ ಸಾಬೀತಾಗಿದೆ. ಶರದ್ ಯಾದವ್ ಅವರು ಆರ್.ಜೆ.ಡಿ. ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡ ಕಾರಣಕ್ಕಾಗಿ ಅವರ ಜೆಡಿಯು ಪಕ್ಷದಿಂದ ಉಚ್ಛಾಟನೆಗೊಳ್ಳುತ್ತಾರೆ.

1. ಆರ್. ಶಂಕರ್ ಶಾಸಕತ್ವ ಅನರ್ಹ
ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ (KPJP) ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಆರ್. ಶಂಕರ್. ಬಳಿಕ ಆರ್. ಶಂಕರ್ ಅವರು ತಮ್ಮ ಕೆ.ಪಿ.ಜೆ.ಪಿ. ಪಕ್ಷವನ್ನು ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸಿದ್ದರು.

ಇದೀಗ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಬಳಿಕ ಶಂಕರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರ ರಾಜೀನಾಮೆಯನ್ನು ಪರಿಶೀಲಿಸಿದ ಬಳಿಕ ಆರ್. ಶಂಕರ್ ಅವರ ಶಾಸಕತ್ವವನ್ನುಈಗ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ವಿಧಾನಸಭಾದ್ಯಕ್ಷರು ಅನರ್ಹಗೊಳಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ, ಆದರೆ ಅಚ್ವರಿ ಷರತ್ತು ಹಾಕಿದ; ಬಿಜೆಪಿ ಹೈಕಮಾಂಡ್..!ಏನದು ಗೊತ್ತಾ..??

ಬಹುಮತ ವಿಲ್ಲದೆ 14 ತಿಂಗಳು ಅಧಿಕಾರ ಮಾಡಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ವಿಶ್ವಾಸಮತದಲ್ಲಿ ಗೆಲುವು ಸಾಧಿಸಿರುವ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಪಕ್ಷ ಸರ್ಕಾರ ರಚನೆಮಾಡಲು ತುದಿಗಾಲಿನಲ್ಲಿ ನಿಂತಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಕೇಂದ್ರ ಬಿಜೆಪಿ ಹೈಕಮಾಂಡ್ ಅವರ ಅನುಮತಿಗೆ ಕಾಯುತ್ತಿದ್ದ ಬಿ.ಎಸ್ ಯಡಿಯೂರಪ್ಪ ಅವರಿಗೆ ಅನುಮತಿ ಸಿಕ್ಕಿದೆ. ಯಡಿಯೂರಪ್ಪ ಅವರು ಸಿಎಂ ಆಗಿ ಸರ್ಕಾರ ರಚನೆ ಮಾಡಲು ಕೇಂದ್ರ ಬಿಜೆಪಿ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಇದರ ಜೊತೆಗೆ ಕೆಲವು ಷರತ್ತು ವಿಧಿಸಿದೆ.

ಷರತ್ತುಗಳೇನು?

ಸದ್ಯಕ್ಕೆ ಯಡಿಯೂರಪ್ಪ ಅವರ ಜೊತೆ 23 ಜನ ಮಂತ್ರಿ ಆಗಿರುತ್ತಾರೆ. ಮೊದಲು ಯಡಿಯೂರಪ್ಪ ಮಾತ್ರ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿ. ಬಿಎಸ್‍ವೈ ಸಿಎಂ ಆದ ಬಳಿಕ ವಿಶ್ವಾಸಮತ ಮತ್ತು ಬಜೆಟ್ ಬಿಲ್ ಪಾಸಾಗಲಿ. ಅಲ್ಲಿಯ ತನಕವೂ ಮಂತ್ರಿಸ್ಥಾನ ತುಂಬುವುದು ಬೇಡವೇ ಬೇಡ. ಬುಧವಾರದ ಬಳಿಕ ಸಚಿವ ಸಂಪುಟ ರಚನೆಯಾಗಲಿ ಎಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಚಿವ ಸಂಪುಟದಲ್ಲಿ ಒಟ್ಟು 10 ಸಚಿವ ಸ್ಥಾನ ಖಾಲಿ ಬಿಟ್ಟುಕೊಳ್ಳಬೇಕು. 6 ತಿಂಗಳ ತನಕ ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಬೇಕು ಎಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.

ಅಚ್ಚರಿ ಅಚ್ಚರಿ; ಕೂಡಲೇ ಬಾರ್ ಆರಂಭಿಸಿ ; ಪಂಚಾಯತ್ ಮುಂದೆ ಎಣ್ಣೆ ಪ್ರಿಯರ ಪ್ರತಿಭಟನೆ..!

ಮದ್ಯದಂಗಡಿ ಮುಚ್ಚಬೇಕು ಎಂದು ಗ್ರಾಮಸ್ಥರು ಪ್ರತಿಭಟಿಸಿರುವ ಸುದ್ದಿ ನೀವು ಓದಿರಬಹುದು. ಆದರೆ ಬಾರ್ ಬೇಕೇ ಬೇಕು ಎಂದು ಎಣ್ಣೆ ಪ್ರಿಯರು ಪಂಚಾಯತ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ್ದಾರೆ. ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಯ ಮುಂಭಾಗದಲ್ಲಿ ಗ್ರಾಮಸ್ಥರು ಬಾರ್ ಓಪನ್ ಮಾಡುವಂತೆ ಪ್ರತಿಭಟನೆ ನಡೆಸಿದ್ದಾರೆ.

ಗ್ರಾಮದಲ್ಲಿ ಹಿಂದೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಗ್ರಾಮಕ್ಕೆ ಒಂದು ಎಂಎಸ್‍ಐಎಲ್ ವೈನ್ ಶಾಪ್ ಮಂಜೂರಾಗಿ, ಪ್ರಾರಂಭಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತಿತ್ತು. ಈ ಸಂದರ್ಭದಲ್ಲಿ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದ್ದರು. ವಿರೋಧ ಜೋರಾದ ಕಾರಣ ವೈನ್ ಶಾಪ್ ಆರಂಭವಾಗುವುದು ತಡವಾಗಿತ್ತು. ಹೀಗಾಗಿ ಇಂದು ಗ್ರಾಮದ ಎಣ್ಣೆ ಪ್ರೀಯರು ಬಾರ್ ಕೂಡಲೇ ಓಪನ್ ಮಾಡಲೇಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟಿಸಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ || ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ || ಮುಂದಿನ ಸಿಎಂ ಯಾರು ಗೊತ್ತಾ..?

ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ || ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ || ಮುಂದಿನ ಸಿಎಂ ಯಾರು ಗೊತ್ತಾ..?

ಈ ಒಂದೇ ಒಂದು ಕಾರಣಕ್ಕಾಗಿ ಇಂದು ಎಚ್ಡಿಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು..?! ಏನದು ಗೊತ್ತಾ..?!

ಜಿಲ್ಲೆಯಿಂದ ಗೆದ್ದು ಮುಖ್ಯಮಂತ್ರಿ ಜವಾಬ್ದಾರಿ ಹೊತ್ತ ಯಾರೊಬ್ಬರಿಗೂ ಪೂರ್ಣಾವಧಿ ಭಾಗ್ಯ ಸಿಕ್ಕಿಲ್ಲ. ಜಿಲ್ಲೆಯಿಂದ ಆಯ್ಕೆಯಾದ ಶಾಸಕರ ಪೈಕಿ ಒಟ್ಟು ನಾಲ್ವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಅವರಲ್ಲಿ ಯಾರೊಬ್ಬರೂ 5 ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ಪೂರ್ಣಗೊಳಿಸಲೇ ಇಲ್ಲ. ಅಷ್ಟೇ ಅಲ್ಲದೆ ಎರಡು ಬಾರಿ ಆಯ್ಕೆಯಾದರೂ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ 5 ವರ್ಷ ಪೂರ್ಣಗೊಳ್ಳುವ ಮುನ್ನವೇ ಪತನಗೊಂಡಿದೆ.

ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿ ಸಿಎಂ ಆಗಿದ್ದರು. ಆದರೆ ನಾಲ್ವರಲ್ಲಿ ಒಬ್ಬರೇ ಒಬ್ಬರೂ ಅಧಿಕಾರ ಪೂರ್ಣಗೊಳಿಸಿಲ್ಲ. ಕುಮಾರಸ್ವಾಮಿ ಅವರು ಮೊದಲ ಬಾರಿ 20 ತಿಂಗಳು ಸಿಎಂ ಆಗಿ ಅಧಿಕಾರ ನಡೆಸಿದ್ದರು. 2018ರ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದ ಸಿಎಂ 14 ತಿಂಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

ಕೆಂಗಲ್ ಹನುಮಂತಯ್ಯ ಅವರು 4 ವರ್ಷ 5 ತಿಂಗಳು ಅಧಿಕಾರ ನಡೆಸಿದ್ದರೆ, ರಾಮಕೃಷ್ಣ ಹೆಗಡೆ 12 ತಿಂಗಳು ಅಧಿಕಾರದಲ್ಲಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು 17 ತಿಂಗಳ ಬಳಿಕ ಸಿಎಂ ಸ್ಥಾನದಿಂದ ಕೆಳಗೆ ಇಳಿದಿದ್ದರು.

ದೋಸ್ತಿಗಳ ಎಲ್ಲಾ ಪ್ಲ್ಯಾನ್‌ಗಳು ಠುಸ್ ಆಗುವ ಸಾಧ್ಯತೆ!! ವಿಶ್ವಾಸ ಮತದಲ್ಲಿ ಪಾಲ್ಗೊಳ್ಳುವುದಿಲ್ಲವೆಂದ ಬಿಎಸ್ಪಿ ಶಾಸಕ ಎನ್.ಮಹೇಶ್

ಬೆಂಗಳೂರು: ಸೋಮವಾರ ನಡೆಯುವ ವಿಶ್ವಾಸಮತಯಾಚನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಜ್ಯದಲ್ಲಿನ ಏಕೈಕ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರ ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿಎಸ್ಪಿ ನಾಯಕಿ ಮಾಯಾವತಿಯವರ ಸೂಚನೆ ಮೇರೆಗೆ ತಾವು ನಾಳೆ ನಡೆಯಲಿರುವ ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ  ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದ ಮಹೇಶ್ ಅವರು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.ಆದರೆ ಕೆಲವು ತಿಂಗಳ ನಂತರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ವಿಶ್ವಾಸ ಮತಯಾಚನೆ ವೇಳೆ ದೂರ ಸರಿಯುವ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.

ಈಗಾಗಲೇ ಬಂಡಾಯ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿಯೇ ಟೀಕಾಣಿ ಹೂಡಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಸರ್ಕಾರ ವಿಶ್ವಾಸ ಮತದ ಕೊರತೆಯನ್ನು ಎದುರಿಸುತ್ತಿದೆ ಈಗ ಮಹೇಶ್ ಅವರು ನಾಳೆ ವಿಶ್ವಾಸ ಮತದಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿರುವುದರಿಂದ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎನ್ನಬಹುದು. ಶುಕ್ರವಾರದಂದು ರಾಜ್ಯಪಾಲರು ಸಿಎಂ ಕುಮಾರಸ್ವಾಮಿಯವರಿಗೆ ಎರಡು ಬಾರಿಗೆ ಪತ್ರವನ್ನು ಬರೆದು ವಿಶ್ವಾಸ ಮತ ಸಾಬೀತುಪಡಿಸಲು ಕೋರಿದ್ದರು. ಆದರೆ ಮುಖ್ಯಮಂತ್ರಿಗಳು ಮಾತ್ರ ಎರಡು ನಿರ್ದೇಶನಗಳನ್ನು ಕಡೆಗಣಿಸಿದ್ದರು.

ಈಗ ಸದನದ ಕಾರ್ಯಚಟುವಟಿಕೆಯಲ್ಲಿ ರಾಜ್ಯಪಾಲರ ಹಸ್ತಕ್ಷೇಪ ಮತ್ತು ವಿಪ್ ಅಧಿಕಾರದ ವಿಚಾರವಾಗಿ ಈಗ ಸುಪ್ರೀಂಕೋರ್ಟ್ ಗೆ ಮೊರೆ ಹೋಗಲಾಗಿದೆ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ರಾಜಕೀಯ ಬೆಳವಣಿಗೆಗೆ ಸೋಮವಾರದಂದೇ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನಲಾಗಿದೆ.

ಒಂದುವೇಳೆ ನಿಮ್ಮಲ್ಲಿ ಈ ಲಕ್ಷಣ ಕಂಡು ಬಂದರೆ ಶುಗರ್ ಸಮಸ್ಯೆ ಇದೆ ಎಂದರ್ಥ!!

ಸಾಮಾನ್ಯವಾಗಿ ಕೆಲವೊಮ್ಮೆ ನಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತಲೇ ಇರುತ್ತವೆ, ಆದ್ರೆ ನಾವು ಅದನ್ನು ನಿರ್ಲಕ್ಷಿಸಬಾರದು, ಯಾಕೆಂದರೆ ಇದರಿಂದ ದೊಡ್ಡ ಅನಾಹುತವೇ ಆಗಬಹುದು ಮುಂದೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಶುಗರ್ ಸಮಸ್ಯೆ, ಅಂದರೆ ಸಕ್ಕರೆ ಕಾಯಿಲೆ ದಿನೆ ದಿನೆ ಹೆಚ್ಚುತ್ತಲೇ ಇದೆ. ಇದಕ್ಕೆ ಹಲವು ಕಾರಣಗಳಿವೆ, ಅವುಗಳಲ್ಲಿ ಸೇವಿಸುವಂತ ಊಟ ಹಾಗು ಜೀವನ ಶೈಲಿ ಕೂಡ ಪ್ರಾಮುಖ್ಯತೆಯನ್ನು ವಹಿಸುತ್ತದೆ.

ಈ ರೀತಿಯ ಸಮಸ್ಯೆ ನಿಮ್ಮಲ್ಲಿ ಕಂಡು ಬಂದರೆ ಶುಗರ್ ಇದೆ ಎಂದರ್ಥ, ಯಾವುದಕ್ಕೂ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಹಾಗು ಉತ್ತಮ ಚಿಕಿತ್ಸೆ ಪಡೆದುಕೊಳ್ಳಿ. ಶುಗರ್ ಇದೆ ಅನ್ನೋ ಲಕ್ಷಣಗಳು ಯಾವುವು.?

ಪದೆ ಪದೆ ಮೂತ್ರ ವಿಸರ್ಜನೆ ಆಗುತ್ತಿದ್ದರೆ, ಡಯಾಬಿಟಿಸ್ ನಲ್ಲಿ ಗ್ಲುಕೋಸ್ ಯಥೇಚ್ಛವಾಗಿದ್ದರೆ ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಒತ್ತಡ ಹೇರುತ್ತದೆ. ಹಾಗು ಯಾವುದೇ ಕೆಲಸ ಮಾಡದೇ ಇದ್ರು ಪದೆ ಪದೆ ಆಯಾಸ ಸುಸ್ತು ಕಾಣಿಸಿಕೊಳ್ಳುವುದು ಮತ್ತು ಗಂಟಲು ಒಣಗುವುದು.

ಊಟ ಮಾಡಿ ಸಲ್ಪ ಸಮಯ ಆಗಿದ್ದರು ಮತ್ತೆ ಮತ್ತೆ ಹಸಿವು ಆಗುವುದು ಹಾಗು ಮಧ್ಯರಾತ್ರಿ ಸಮಯದಲ್ಲಿ ಕೂಡ ಹಸಿವು ಬರುವುದು. ಸಲ್ಪ ಹೊತ್ತು ಕೂತರೆ ಕೈ ಕಾಲುಗಳು ಜುಮ್ ಹಿಡಿಯುವುದು ಮತ್ತು ಇದ್ದಕಿದ್ದಂತೆ ಕಣ್ಣುಗಳು ಮಂಜಾಗುವುದು ತಲೆ ಸುತ್ತು ಬರುವುದು.

ದೇಹದಲ್ಲಿ ಆಗುವಂತ ಚಿಕ್ಕ ಪುಟ್ಟ ಗಾಯಗಳು ಬೇಗನೆ ವಾಸಿಯಾಗದೆ ಇರುವುದು, ಹಾಗು ಇದ್ದಕಿದ್ದಂತೆ ದೇಹದಲ್ಲಿ ತೂಕ ಕಡಿಮೆಯಾಗುವುದು, ಈ ರೀತಿಯ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಒಮ್ಮೆ ವೈದ್ಯರನ್ನು ಭೇಟಿ ನೀಡಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಪ್ರತಿದಿನ ಉತ್ತಮ ಮಾಹಿತಿ ತಿಳಿಯಲು ನಮ್ಮ ಪೇಜ್ ಅನ್ನು ಮರೆಯದೆ ಲೈಕ್ ಮಾಡಿ.

ಯಾರು ಎಷ್ಟೇ ಸರ್ಕಸ್ ಮಾಡಿದರೂ ಮೈತ್ರಿ ಸರ್ಕಾರವನ್ನು ಬದುಕಿಸೋಕಾಗಲ್ಲ; ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದ ರೆಬೆಲ್ ಶಾಸಕರು

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ನಿಂದ ಸಿಎಂ ಆಫರ್ ಸಿಕ್ಕಿದ್ದು ನಿಜ ಎಂದು ಕಾಂಗ್ರೆಸ್ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕ ಹೆಚ್.ವಿಶ್ವನಾಥ್, ಮುಗಿಯುವ ಹಂತದಲ್ಲಿ ಈ ರೀತಿಯ ಹೇಳಲಾಗಿದೆ. ಮೈತ್ರಿ ಧರ್ಮ ಕರ್ನಾಟಕ ರಾಜಕಾರಣದಲ್ಲಿ ಮುಗಿದು ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷದ ನಾಯಕರನ್ನು ಹೀನಾಯವಾಗಿ ಸೋಲಿಸಲಾಗಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಸೋಲಿಗೆ ಕಾರಣವೇನು ಎಂಬುದರ ಬಗ್ಗೆಯೂ ಚರ್ಚೆ ಆಗಲಿಲ್ಲ. ಇದೀಗ ಅಧಿಕಾರಕ್ಕಾಗಿ ಸಿಎಂ ಸ್ಥಾನ ಬಿಟ್ಟುಕೊಡ್ತೀವಿ ಅನ್ನೋದು ಮೂರ್ಖತನವಾಗುತ್ತದೆ. ಕರ್ನಾಟಕದಲ್ಲಿಯ ರಾಕ್ಷಸ ರಾಜಕಾರಣ ಕೊನೆಯಾಗಿಸಲು ಈ ಮೈತ್ರಿ ಸರ್ಕಾರ ಹೋಗಬೇಕಿದೆ. ಜೆಡಿಎಸ್ ಆಫರ್ ನೀಡಿದ್ರೂ ಕಾಂಗ್ರೆಸ್‍ನಲ್ಲಿ ಸಿಎಂ ಆಗಲು ಯಾರು ತಯಾರಿಲ್ಲ ಎಂದು ವ್ಯಂಗ್ಯವಾಡಿದರು.

ಋಷಿಮುನಿಗಳಿಲ್ಲ:
ಕೊನೆ ಗಳಿಗೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಈ ರೀತಿ ಹೇಳುತ್ತಿದ್ದಾರೆ. ಸತ್ತ ಹೆಣವನ್ನು ಬದುಕಿಸಲು ಋಷಿಗಳು ಯಾರು ನಮ್ಮ ಬಳಿ ಇಲ್ಲ. ಸಾಯುತ್ತಿರುವ ಸರ್ಕಾರವನ್ನು ಬದುಕಿಸಲು ಕಮಂಡಲದಿಂದ ನೀರು ತೆಗೆದು ಚುಮುಕಿಸಲು ಋಷಿಗಳು ಯಾರು ಇಲ್ಲ ಎಂಬುದನ್ನು ಎರಡೂ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ. ಸಿಎಂ ಆಫರ್ ಕುರಿತು ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಗಳು ನಡೆದರೂ ಏನು ಮಾಡಲು ಸಾಧ್ಯವಿಲ್ಲ. ಅಧರ್ಮದಲ್ಲಿ ಹೋಗುತ್ತಿರುವ ಮೈತ್ರಿ ಸರ್ಕಾರ ಕೊನೆಯಾಗಬೇಕಿದೆ. ಸಿದ್ದರಾಮಯ್ಯನವರು ಸಿಎಂ ಆದ್ರೂ ಯಾವ ಶಾಸಕರು ತಮ್ಮ ರಾಜೀನಾಮೆಯನ್ನು ಹಿಂಪಡೆಯಲ್ಲ. ಎಲ್ಲರ ನಿರ್ಧಾರ ಅಚಲವಾಗಿದ್ದು, ಯಾವ ಶಾಸಕರು ಸ್ವಹಿತಾಸಕ್ತಿಗಾಗಿ ರಾಜೀನಾಮೆ ನೀಡಿಲ್ಲ. ಯಾರಿಗೋ ಅಧಿಕಾರ ಸಿಗಬೇಕು ಅಥವಾ ಅಧಿಕಾರ ಕೊಡಿಸಬೇಕು ಎಂದು ನಾವು ರಾಜೀನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ರೆಸಾರ್ಟಿನಲ್ಲಿರುವ ಶಾಸಕರನ್ನು ಫ್ರೀಯಾಗಿ ಬಿಟ್ಟರೆ ಹಲವರು ನಮ್ಮನ್ನು ಸೇರಿಕೊಳ್ಳಲಿದ್ದಾರೆ. ಹಾಗಾಗಿ ಎಲ್ಲರನ್ನು ರೆಸಾರ್ಟಿನ ಬಂಧನದಲ್ಲಿ ಇರಿಸಲಾಗಿದೆ. ಇಲ್ಲಿ ಯಾರು ಮಂತ್ರಿಯಾಗುವ ಉದ್ದೇಶದಿಂದ ರಾಜೀನಾಮೆ ನೀಡಿಲ್ಲ. ಡಿ.ಕೆ.ಶಿವಕುಮಾರ್ ಓರ್ವ ಶೋಮ್ಯಾನ್. ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನಾಡುತ್ತಾರೆ. ಮುಂಬೈನಲ್ಲಿ ಬಂದರೂ ಯಾರನ್ನು ಭೇಟಿಯಾಗಿಲ್ಲ. ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುವುದು. ಫೋಟೋ ತೆಗೆಸಿಕೊಳ್ಳುವುದು ಶಿವಕುಮಾರ್ ಅವರ ಕೆಲಸ ಎಂದು ಹೆಚ್.ವಿಶ್ವನಾಥ್ ಟೀಕಿಸಿದರು.

ಡಿಕೆಶಿ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್‍ನವರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ. ಕಾಂಗ್ರೆಸ್‍ನವರು ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್‍ನವರು ಮುಕ್ತ ಕಂಠದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್‍ಗೂ ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಾನಾಗಲಿ(ಡಿ.ಕೆ.ಶಿವಕುಮಾರ್), ಡಾ.ಜಿ.ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯನವರು ಯಾರಾದರೂ ಸರಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕೆಂದು ಕೇಳಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.