ನಮ್ಮ ರಾಜ್ಯದಲ್ಲಿ ಶಾಸಕರಿಗೆ ಮತ್ತು ಮುಖ್ಯಮಂತ್ರಿಗಳ ಸಂಬಳ ಎಷ್ಟು ಗೊತ್ತಾ? ಶಾಕಿಂಗ್ ನ್ಯೂಸ್!

ನಮ್ಮ ಕರ್ನಾಟಕದ ಮುಖ್ಯಮಂತ್ರಿ ಮತ್ತು ಶಾಸಕರ ಸಂಬಳ ಮತ್ತು ಅವರಿಗೆ ಸಿಗುವ ಅನುಕೂಲಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ಬನ್ನಿ. ನಿಮಗೆಲ್ಲ ಗೊತ್ತೇ ಇದೆ ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿ ಯಾ ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿರುವುದು. ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಯಡಿಯೂರಪ್ಪ ಪೂರಕ ಬಜೆಟ್ ಗೂ ಅಂಗೀಕಾರ ಸಿಕ್ಕಿದೆ. ಕರ್ನಾಟಕ ಹೊಸ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಸಿಗುವ ಸಂಬಳವೆಷ್ಟು ಎಂಬುದರ ವಿವರ ಇಲ್ಲಿದೆ. ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳ ಹಾಗೂ ಶಾಸಕರ ಸಂಬಳ ಬೇರೆ ಬೇರೆಯಾಗಿರುತ್ತದೆ.

ಎದೆ ಮೇಲೆ ಸುಧಾಮೂರ್ತಿ ಅವರ ಟ್ಯಾಟೋ ಹಾಕಿಸಿಕೊಂಡ ಯುವಕ! ಮುಂದೆ ಆಗಿದ್ದೇನು ಗೊತ್ತಾ?

ಸಾಮಾನ್ಯವಾಗಿ ಸಿನಿಮಾ ನಟರು, ರಾಜಕೀಯದವರು, ಕ್ರಿಕೆಟ್ ದಿಗ್ಗಜರು, ಸೆಲೆಬ್ರಿಟಿಗಳ ಟ್ಯಾಟೂ ಹಾಕಿಸಿಕೊಂಡು ಸಂಭ್ರಮಪಡುವವರೇ ಜಾಸ್ತಿ. ಮೈಸೂರಿನ ಈ ಯುವಕ ಸ್ವಲ್ಪ ಡಿಫರೆಂಟ್. ಇಂದು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರ ಹುಟ್ಟುಹಬ್ಬ. ಅವರಿಗೆ ಒಳ್ಳೆಯದಾಗಲಿ ಎಂದು ಚಾಮುಂಡಿ ಬೆಟ್ಟವನ್ನು ಬರಿಗಾಲಲ್ಲಿ ಹತ್ತಿ ವಿಶೇಷ ಪೂಜೆ ಸಲ್ಲಿಸಿದ್ದಾನೆ.

ಎದೆಯಲ್ಲಿ ಸುಧಾಮೂರ್ತಿ ಅವರ ಟ್ಯಾಟೋ ಹಾಕಿಸಿಕೊಳ್ಳುವುದರ ಮೂಲಕ ಅಭಿಮಾನ ಮೆರೆದಿದ್ದಾನೆ. ತನ್ನ ತಾಯಿಯಂತೆ ಸುಧಾಮೂರ್ತಿಯವರನ್ನೂ ಪ್ರೀತಿಸುವ ಮೈಸೂರಿನ ಜೆಸಿ ನಗರದ ನಿವಾಸಿ ಲೋಕೇಶ್, ತನ್ನ ಬಲಗೈ ಮೇಲೆ ಮತ್ತು ಎದೆಯಲ್ಲಿ ಸುಧಾಮೂರ್ತಿಯವರ ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾನೆ. ‘ನಾನು ಅತಿಯಾಗಿ ಪ್ರೀತಿಸುವ ನನ್ನ ಅಮ್ಮ ನಂತೆಯೇ ಸುಧಾಮೂರ್ತಿಯವರನ್ನ ಪ್ರೀತಿಸ್ತಿನಿ. ಅವ್ರೇ ನಂಗೇ ಸ್ಫೂರ್ತಿ. ಅವ್ರಿಗಿರೋ ಸಮಾಜ ಕಾಳಜಿ, ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ, ಕಷ್ಟದಲ್ಲಿರುವರಿಗೆ ನೆರವಾಗುವುದು, ಅದ್ರಲ್ಲೂ ಸಾವಿರಾರು ಕೋಟಿಯ ಒಡತಿಯಾಗಿದ್ರೂ ಕೂಡ ಅವರ ಸರಳತೆ ಇದೆಲ್ಲಾ ನನಗೆ ಸ್ಫೂರ್ತಿ ಎನ್ನುತ್ತಾನೆ ಲೋಕೇಶ್.

ಸ್ವಾತಂತ್ರ್ಯದ ದಿನದಂದು ಪಾಕಿಸ್ತಾನಕ್ಕೆ ಭಾರತೀಯ ಸೈನಿಕರ ಕೊಟ್ಟ ಗಿಫ್ಟ್ ಏನು ಗೊತ್ತಾ?? ಸೂಪರ್!

ನವದೆಹಲಿ: ಸ್ವಾತಂತ್ರ್ಯ ದಿನದಂದು ಪಾಕ್ ಸೇನೆಯ ಮೂವರು ಸೈನಿಕರು ಭಾರತ ಸೇನಾ ಪಡೆಗಳ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ಇಂದು ಭರ್ಜರಿ ಭೇಟಿ ನೆಡೆದಿದೆ

ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಕ್ಕೆ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸುತ್ತಿರುವ ಪಾಕ್ ಸೇನೆ ಇಂದು ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಆರಂಭಿಸಿತ್ತು. ಈ ದಾಳಿಗೆ ಭಾರತ ಸೈನಿಕರು ಪ್ರತಿದಾಳಿ ನಡೆಸಿ ಗುಂಡಿನ ಸುರಿಮಳೆಗೈದಿದ್ದರು. ಪರಿಣಾಮ ಭಾರತದ ಸೈನಿಕರ ಗುಂಡೇಟಿಗೆ ಮೂವರು ಪಾಕ್ ಸೈನಿಕರು ಮೃತಪಟ್ಟಿದ್ದಾರೆ.

ಪಾಕಿಸ್ತಾನ ಡಿಜಿಐಸ್‍ಪಿಆರ್ ಅಬ್ದುಲ್ ಗಫೂರ್ ಸೈನಿಕರು ಮೃತಪಟ್ಟ ವಿಚಾರವನ್ನು ಟ್ವೀಟ್ ಮಾಡಿ ತಿಳಿಸಿದ್ದಾರೆ. ಭಾರತ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿ ನಡೆಸಿದ್ದು, ನಮ್ಮ ಮೂವರು ಸೈನಿಕರು ಮೃತಪಟ್ಟಿದ್ದಾರೆ. ನಾವು ನಡೆಸಿದ ಪ್ರತಿ ದಾಳಿಗೆ ಭಾರತದ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್ ನಿರ್ಧಾರ ಕೇಳಿ ಬೆಚ್ಚಿಬಿದ್ದ ಯುಪಿ ಮುಸ್ಲಿಮರು!

ಉತ್ತರ ಪ್ರದೇಶದ ಸಾರ್ವಜನಿಕ ಸ್ಥಳಗಳಲ್ಲೆಲ್ಲೂ ಇನ್ನು ಮುಂದೆ ನಮಾಜ್ ಮಾಡುವಂತಿಲ್ಲ. ವಾಸ್ತವವಾಗಿ, ಯುಪಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಅದೇ ಸಮಯದಲ್ಲಿ, ರಸ್ತೆಗಳಲ್ಲಿ ನಮಾಜ್ ಮಾಡುವುದಕ್ಕೂ ನಿಷೇಧ ಹೇರಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ, ಇದು ಜನರಿಗೆ ತೊಂದರೆ ಉಂಟುಮಾಡುತ್ತದೆ ಎಂದು ಡಿಜಿಪಿ ಒಪಿ ಸಿಂಗ್ ಹೇಳಿದರು. ಈ ವ್ಯವಸ್ಥೆಯನ್ನು ಇತ್ತೀಚೆಗೆ ಮೀರತ್ ಮತ್ತು ಅಲಿಗಢದಲ್ಲಿ ಜಾರಿಗೆ ತರಲಾಗಿದ್ದು, ಇದೀಗ ಇಡೀ ರಾಜ್ಯದಲ್ಲಿ ಇದನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ

ನಮಾಜ್ ಸಂದರ್ಭದಲ್ಲಿ ರಸ್ತೆಗಳಲ್ಲಿ ವಾಹನಗಳ ಜಾಮ್ ಆಗದಂತೆ ನೋಡಿಕೊಳ್ಳಲು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮತ್ತು ಇತರ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅಲಿಗಢ ಜಿಲ್ಲಾಡಳಿತವು ಈ ಹಿಂದೆ ರಸ್ತೆಗಳಲ್ಲಿ ನಮಾಜ್ ಅರ್ಪಿಸುವುದನ್ನು ನಿಷೇಧಿಸಿ ವಿವರವಾದ ಸುತ್ತೋಲೆ ಹೊರಡಿಸಿತ್ತು, ನಂತರ ಅದನ್ನು ಯಶಸ್ವಿಯಾಗಿ ಜಾರಿಗೆ ತರಲಾಯಿತು ಎಂದು ಡಿಜಿಪಿ ಹೇಳಿದ್ದಾರೆ.

ಕಾಶ್ಮೀರದ ಕುರಿತು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟ ಅಮಿತ್ ಷಾ! ಎಲ್ಲೆಡೆ ಪ್ರಶಂಸೆ!

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಕಾಶ್ಮೀರದಲ್ಲಿ 15ಕ್ಕೆ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಅಮಿತ್ ಶಾ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣಾ ಕ್ರಮಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರಿಂದ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ. ಆದರೆ ಗೃಹ ಸಚಿವರ ಭೇಟಿಯನ್ನ ರಕ್ಷಣೆ ದೃಷ್ಟಿಯಿಂದ ಗೌಪ್ಯವಾಗಿಡಲಾಗಿದೆ ಎನ್ನಲಾಗಿದೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಗೃಹ ಸಚಿವರಾದ ಅಮಿತ್ ಶಾ ಅವರು ಮೊದಲ ಬಾರಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ : ಸಚಿವ ಸಂಪುಟ ರಚನೆ ಬೆನ್ನಲ್ಲೇ ಬಿಎಸ್’ವೈ ಗೆ ಪತ್ರ ಬರೆದ ದೇವೇಗೌಡ!

ಬೆಂಗಳೂರು: ರಾಜ್ಯದಲ್ಲಿ ನೆರೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ನೆರವು ನೀಡುವುದು ನಮ್ಮ ಕರ್ತವ್ಯವಾಗಿದ್ದು, ನಾನು ಮತ್ತು ನನ್ನ ಪಕ್ಷ ನಿಮ್ಮೊಂದಿಗೆ ಇರುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರು ಪತ್ರ ಬರೆದಿದ್ದಾರೆ.

ಬಹುದೊಡ್ಡ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿ ಜನರಿಗೆ ಅಗತ್ಯ ನೆರವು ನೀಡುವ ಸಂದರ್ಭದಲ್ಲಿ ಕೆಲವು ಲೋಪದೋಷ, ನ್ಯೂನತೆಗಳು ಎದುರಾಗುವುದು ಸಹಜ. ಆದರೆ ಇದರಲ್ಲಿ ರಾಜಕೀಯ ಮಾಡದೇ ಎಲ್ಲರೂ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ಪತ್ರದಲ್ಲಿ ಸಲಹೆ  ಎಚ್‍ಡಿಡಿ ನೀಡಿದ್ದಾರೆ.

ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ, ಕರಾವಳಿ ಪ್ರದೇಶ ಮತ್ತು ಮಲೆನಾಡು ಪ್ರದೇಶಗಳ ಬಹುತೇಕ ಜಿಲ್ಲೆಗಳು ಕಳೆದ ವಾರದಿಂದ ನೆರೆ ಮತ್ತು ಭೂ ಕುಸಿತದಿಂದ ಅಪಾರ ಸಾವು-ನೋವು ಉಂಟಾಗಿದೆ. ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಸಂತ್ರಸ್ತರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಸರ್ಕಾರದ ಮೊದಲ ಕರ್ತವ್ಯವಾಗಿದೆ. ಅಲ್ಲದೇ ಪ್ರವಾಹದಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಶಿಬಿರಗಳನ್ನು ತೆರೆದು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಸರ್ಕಾರ ಕಾರ್ಯಗಳ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಪಡೆದಿದ್ದು, ಅಗಾದ ಪ್ರಮಾಣದ ದುರಂತವನ್ನು ನಿಭಾಯಿಸುವುದು ಕಷ್ಟಸಾಧ್ಯ. ಇದರಲ್ಲಿ ಕೆಲವೊಮ್ಮೆ ನ್ಯೂನತೆಗಳು ಎದುರಾಗುತ್ತವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣ ಬೆರಸದೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಈ ಕಾರ್ಯವನ್ನು ಸಮಯೋಜಿತವಾಗಿ ನಡೆಸಲು ಸಲಹೆ ನೀಡುತ್ತೇನೆ ಎಂದಿದ್ದಾರೆ.

ಕೊನೆಗೂ ಫಿಕ್ಸ್ ಆಯ್ತು ನೂತನ ಸಚಿವರ ಪಟ್ಟಿ.. ಇಡೀ ಜನತೆಗೆ ಶಾಕ್ ಕೊಟ್ಟ ಬಿಎಸ್’ವೈ

ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…

ಗೋವಿಂದ ಕಾರಜೋಳ: ಲೋಕೋಪಯೋಗಿ
ಈಶ್ವರಪ್ಪ: ಗೃಹ ಇಲಾಖೆ
ಆರ್​.ಅಶೋಕ್: ಸಾರಿಗೆ
ಜಗದೀಶ ಶೆಟ್ಟರ್: ಕಂದಾಯ
ವಿ. ಸೋಮಣ್ಣ: ನಗರಾಭಿವೃದ್ಧಿ
ಜೆ.ಸಿ. ಮಾಧುಸ್ವಾಮಿ: ಕಾನೂನು & ಸಂಸದೀಯ ವ್ಯವಹಾರ
ಬಿ. ಶ್ರೀರಾಮುಲು: ಸಮಾಜ ಕಲ್ಯಾಣ
ಉಮೇಶ್ ಕತ್ತಿ: ಕೃಷಿ
ಡಾ.ಅಶ್ವತ್ಥ್ ನಾರಾಯಣ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರೇಣುಕಾಚಾರ್ಯ: ಪೌರಾಡಳಿತ ಖಾತೆ
ಬಾಲಚಂದ್ರ ಜಾರಕಿಹೊಳಿ: ಕಾರ್ಮಿಕ ಇಲಾಖೆ
ಶಿವನಗೌಡ ನಾಯಕ್​: ಸಣ್ಣ ಕೈಗಾರಿಕೆ ಖಾತೆ
ಅಂಗಾರ: ಸಣ್ಣ ನೀರಾವರಿ
ಬೋಪಯ್ಯ: ಉನ್ನತ ಶಿಕ್ಷಣ
ಕೋಟಾ ಶ್ರೀನಿವಾಸ ಪೂಜಾರಿ: ಮುಜರಾಯಿ ಮತ್ತು ಯೋಜನೆ
ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನದಿಂದ ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಸರ್ಕಾರ 14 ತಿಂಗಳ ಕಾಲ ಆಡಳಿತ ನಡೆಸಿ ಪತನಗೊಂಡಿತ್ತು. ಇದಾದ ಬೆನ್ನಲ್ಲೇ ನೂತನ ಸರ್ಕಾರದ ಸಿಎಂ ಆಗಿ ಬಿ.ಎಸ್​.ಯಡಿಯೂರಪ್ಪ ಅವರು ಕಳೆದ ತಿಂಗಳು ಪ್ರಮಾಣ ವಚನ ಸ್ವೀಕರಿಸಿದ್ದರು. ಈ ನಡುವೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್​ ನಿಧನ ಹಾಗೂ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಚಿವ ಸಂಪುರ ರಚನೆ ವಿಳಂಬವಾಗಿತ್ತು. ಪ್ರವಾಹ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್​ವೈ ಏಕಾಂಗಿಯಾಗಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದರು. ಇದರ ನಡುವೆ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಕೊನೆಗೂ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ರಾಜ್ಯದ ಆಡಳಿತ ವ್ಯವಸ್ಥೆ ವೇಗ ಪಡೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಪ್ರವಾಹಪೀಡಿತ ಪ್ರದೇಶಕ್ಕೆ “ಅನರ್ಹ ಶಾಸಕ” ಎಂಟಿಬಿ ನಾಗರಾಜ್ ಕೊಟ್ಟ ಹಣವೆಷ್ಟು ಗೊತ್ತೆ?

ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​​ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಧನ ನೀಡಿದ್ದಾರೆ.

ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂಪಾಯಿ ಚೆಕ್​ ನೀಡುವ ಮೂಲಕ ಪರಿಹಾರವನ್ನು ನೀಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ರೈತರ ಬೆಳೆ ನಾಶ, ಜಾನುವಾರುಗಳು, ಮನೆ, ಸಾವು-ನೋವು ಮತ್ತಿತರ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಪರಿಹಾರವನ್ನು ಕೊಟ್ಟಿದ್ದಾರೆ. ಕಳೆದ ವಾರಗಳಿಂದ ಉತ್ತರ ಕರ್ನಾಟಕ ಭಾಗ, ಮಲೆನಾಡು ಪ್ರದೇಶ ಹಾಗೂ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಸಾಕಷ್ಟು ಮಂದಿ ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಹಲವು ಸಾವು-ನೋವುಗಳು ಕೂಡ ಸಂಭವಿಸಿದೆ.

ತನ್ನ ಕಾರ್ ಮೇಲೆ ಪೇಪರ್ ಎಸೆದ ಮುಸ್ಲಿಂ ಸಂತ್ರಸ್ಥೆ! ಬಳಿಕ ನಿರ್ಮಲಾ ಸೀತಾರಾಮನ್ ಮಾಡಿದ್ದೇನು ಗೊತ್ತೆ?

ತನ್ನ ಕಾರ್ ಮೇಲೆ ಪೇಪರ್ ಎಸೆದ ಮುಸ್ಲಿಂ ಸಂತ್ರಸ್ಥೆ! ಬಳಿಕ ನಿರ್ಮಲಾ ಸೀತಾರಾಮನ್ ಮಾಡಿದ್ದೇನು ಗೊತ್ತೆ?