ಪುಲ್ವಾಮದಲ್ಲಿ ಇಬ್ಬರು ಉಗ್ರರನ್ನು 72 ಕನ್ಯೆಯರ ಬಳಿ ಕಳಿಸಿದ ಸೇನೆ!

ಶ್ರೀನಗರ: ಕಾಶ್ಮೀರದ ಪುಲ್ವಾಮದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರಿದಿದೆ. ಬೆಳಗ್ಗ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ್ದಾರೆ.

ಸಿಆರ್ ಪಿಎಫ್, ರಾಷ್ಟ್ರೀಯ ರೈಫಲ್ಸ್ ಹಾಗೂ ಸ್ಪೆಶಲ್ ಆಪರೇಶನ್ಸ್ ಗ್ರೂಪ್ ಶೋಧ ಕಾರ್ಯ ನಡೆಸುತ್ತಿತ್ತು. ಈ ವೇಳೆ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಹಾಗಾಗಿ ಯೋಧರು ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರ ಜೊತೆ ನಾಗರೀಕ ಕೂಡ ಗಾಯಗೊಂಡಿದ್ದಾರೆ. ಸದ್ಯ ಯೋಧರ ಕಾರ್ಯಚರಣೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಮೋದಿ ಆರ್ಭಟಕ್ಕೆ ಬೆಚ್ಚಿಬಿದ್ದ ನಕ್ಸಲರು : ಗಡ್ ಚಿರೋಲಿ ದಾಳಿ ಪ್ರತೀಕಾರಕ್ಕೆ ನಕ್ಸಲ್ ಕಮಾಂಡರ್ ಮಟಾಷ್!

ರಾಯ್ಪುರ: ಛತ್ತೀಸ್​ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ಬೆಳಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದ್ವಿ ಮುಯ್ಯ ಅಲಿಯಾಸ್​ ಜೋಗ ಕುಂಜುಂ (29) ಎಂಬ ನಕ್ಸಲ್​ ಕಮಾಂಡರ್​ನನ್ನು ಹತ್ಯೆ ಮಾಡಲಾಗಿದೆ. ಲೋಕಸಭೆ ಚುನಾವಣೆಗೆ ಒಂದೆರಡು ದಿನಗಳು ಬಾಕಿಯಿರುವಂತೆ ದಾಂತೇವಾಡ ಸಮೀಪ ನಕ್ಸಲರು ನಡೆಸಿದ್ದ ಸುಧಾರಿತ ಸ್ಫೋಟಕ (ಐಇಡಿ) ದಾಳಿಯಲ್ಲಿ ದಾಂತೇವಾಡ ಶಾಸಕ ಭೀಮಾ ಮಾಡವಿ ಹತರಾಗಿದ್ದರು. ಮಾದ್ವಿ ಮುಯ್ಯ ಈ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಎಂದು ದಾಂತೇವಾಡ ಎಸ್​ಪಿ ಅಭಿಷೇಕ್​ ಪಲ್ಲವ್​ ತಿಳಿಸಿದ್ದಾರೆ.

ಪೆರ್ಪಾ ಮತ್ತು ಮರ್ಕಮರೀಸ್​ ಅರಣ್ಯ ಪ್ರದೇಶದಲ್ಲಿ ದಾಂತೇವಾಡ ಜಿಲ್ಲಾ ಮೀಸಲು ಪಡೆ ಮತ್ತು ಜಿಲ್ಲಾ ಪೊಲಿಸ್​ ಪಡೆ ಗುರುವಾರ ಮುಂಜಾನೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದವು. ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ ನಕ್ಸಲರ ಗುಂಪೊಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸರ ತಂಡದ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಒಬ್ಬ ನಕ್ಸಲ್​ ಹತನಾಗಿದ್ದಾಗಿ ಅಭಿಷೇಕ್​ ಪಲ್ಲವ್​ ಟ್ವೀಟ್​ ಮಾಡಿದ್ದರು. ಹತನಾಗಿರುವ ನಕ್ಸಲ್​ನ ತಲೆಗೆ 8 ಲಕ್ಷ ರೂ. ಬಹುಮಾನ ಮೊತ್ತ ಘೋಷಿಸಲಾಗಿತ್ತು ಎಂದು ಹೇಳಿದ್ದರು.

ತನ್ನ ಸಹೋದ್ಯೋಗಿ ಮೇಲೆಯೇ ಗುಂಡು ಹಾರಿಸಿ ಕೊಂದ ಅಸ್ಸಾಂ ರೈಫಲ್ಸ್ ಯೋಧ!

ಕೋಲ್ಕತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅರೆ ಸೇನಾಪಡೆಯ ಆಸ್ಸಾಂ ರೈಫಲ್ಸ್​ನ ಸೈನಿಕ ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಆರೋಪಿಯನ್ನು ಸೈನಿಕ ಲಕ್ಷ್ಮೀಕಾಂತ್​ ಭರ್ಮನ್​ ಎಂದು ಗುರುತಿಸಲಾಗಿದೆ. ಭೋಲಾನಾಥ್​ ದಾಸ್​ ಮೃತ ಯೋಧ ಹಾಗೂ ಅನಿಲ್ ರಾಜ್​ಬಂಶಿ ಹಾಗೂ ರಂತು ಮಣಿ ಎಂಬುವರು ಗಾಯಗೊಂಡವರು.

ಮೇ 6ರಂದು ಹೌರಾದಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾಗ್ನಾನ್​ನಲ್ಲಿದ್ದ ಅರೆಸೇನಾ ಪಡೆಯ ಶಿಬಿರದ ಮೇಲೆ ಲಕ್ಷ್ಮೀಕಾಂತ್​ ಭರ್ಮನ್ 18 ಸುತ್ತು ಗುಂಡು ಹಾರಿಸಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ.