ಮಾಯಾವತಿಯ ‘ಆನೆ ಪ್ರತಿಮೆ’ ಹೊಟ್ಟೆ ಜಾಲಾಡಿದು ಯಾಕೇ?

ಗಣಿ ಅಕ್ರಮಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಮೇಲೆ ದಾಳಿ ಮಾಡಿದ್ದ ಜಾರಿ ನಿರ್ದೇಶನಾಲಯ  ಇದೀಗ ಮಾಯಾವತಿ ಅವರಗೆ ಸಂಬಂಧಿಸಿದ ಎಳು ಕಡೆ ದಾಳಿ ಮಾಡಿದೆ.

ಉತ್ತರ ಪ್ರದೇಶದ 7 ಕಡೆ ಇಡಿ ದಾಳಿ ಮಾಡಿದ್ದು ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದೆ. ಪ್ರತಿಮೆಗಳ ನಿರ್ಮಾಣದಲ್ಲಿ ಅವ್ಯವಹಾರ ಆರೋಪ  ಕೇಳಿ ಬಂದ ನಂತರ ದಾಳಿ ಮಾಡಲಾಗಿದೆ.  ಮಾಯಾವತಿ ಸಿಎಂ ಆಗಿದ್ದ ವೇಳೆ ಉತ್ತರ ಪ್ರದೇಶದಲ್ಲಿ ಆನೆ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದರು.

ಆನೆಗಳ ಪ್ರತಿಮೆ ನಿರ್ಮಾಣಕ್ಕೆ 111 ಕೋಟಿ ರೂ. ಮೀಸಲಿರಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಸಂಬಂಧ ಮಾಯಾವತಿ ಅವರನ್ನು ವಿಚಾರಣೆಗೆ ಗುರಿ  ಮಾಡುವ ಸಾಧ್ಯತೆ ಇದೆ. ಮಾಯಾವತಿ 2007 ರಿಂದ 2012ರ ಅವಧಿಯಲ್ಲಿ ಉತ್ತರ ಪ್ರದೇಶದ ಸಿಎಂ ಆಗಿದ್ದರು.

ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

ಕ್ಯಾನ್ಸರ್ ಈ ಶಬ್ಧ ಕೇಳಿದ್ರೆ ನಡುಕ ಹುಟ್ಟುತ್ತದೆ. ಇತ್ತೀಚಿನ ದಿನಗಳಲ್ಲಿ ಜೀವನ ಶೈಲಿ ಹಾಗೂ ನಮ್ಮ ಆಹಾರ ಕ್ರಮದಿಂದಾಗಿ ಕ್ಯಾನ್ಸರ್‌ಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿದ್ದರೂ ವಿಜ್ಞಾನಿಗಳು ಮಾತ್ರ ಅದೆಷ್ಟೇ ಯತ್ನಿಸಿದರೂ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೀಗ ಕ್ಯಾನ್ಸರ್‌ ಸಂಪೂರ್ಣ ಗುಣಪಡಿಸಬಲ್ಲ ಔಷಧಿ ಕಂಡು ಹಿಡಿಯಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈವರೆಗೂ ವಿಜ್ಞಾನಿಗಳಿಗೆ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಔಷಧಿ ಹುಡುಕುವುದು ಬಹುದೊಡ್ಡ ಸವಾಲಾಗಿತ್ತು. ಅದೆಷ್ಟೇ ಶ್ರಮಪಟ್ಟರೂ ಔಷಧಿ ಕಂಡು ಹಿಡಿಯುವುದು ಮಾತ್ರ ಸಾಧ್ಯವಾಗಿತ್ತು. ಆದರೀಗ ಇಸ್ರೇಲ್‌ನ ವಿಜ್ಞಾನಿಗಳು 2020ರೊಳಗೆ ಕ್ಯಾನ್ಸರ್‌ನ್ನು ಸಂಪೂರ್ಣವಾಗಿ ಗುಣಪಡಿಸಬಲ್ಲ ಔಷಧಿ ತಯಾರಿಸುತ್ತೇವೆಂದು ಖಚಿತಪಡಿಸಿದ್ದಾರೆ. ಈ ವಿಜ್ಞಾನಿಗಳು ತಾವು ಸಿದ್ಧಪಡಿಸಿರುವ ಔಷಧಿ ಪರೀಕ್ಷಿಸುವ ಕೊನೆಯ ಹಂತದಲ್ಲಿದ್ದಾರೆನ್ನಲಾಗಿದೆ. ಒಂದು ವೇಳೆ ಅವರು ತಮ್ಮ ಪ್ರಯೋಗದಲ್ಲಿ ಯಸಶ್ವಿಯಾದದರೆ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ತಮ್ಮ ನೋವಿನಿಂದ ಮುಕ್ತಿ ಸಿಗಲಿದೆ.

ಡಬ್ಬಡ್ ಮುಟಾಟೋ (Dubbed MuTaTo) ಹೆಸರಿನ ಈ ಔಷಧಿಯನ್ನು ಎನಲ್ಯೂಷನ್ ಬಯೋಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಗೆ ಸಂಬಂಧಿಸಿದ ವಿಜ್ಞಾನಿಗಳು ಆವಿಷ್ಕಾರ ಮಾಡಿದ್ದಾರೆ. ಔಷಧಿ ಪ್ರಯೋಗವು ಅಂತಮ ಘಟ್ಟ ತಲುಪಿದ್ದು, ಯಶಸ್ವಿಯಾಗುತ್ತಿದ್ದಂತೆಯೇ ಅಂದರೆ ಸುಮಾರು 2020ಯೊಳಗೆ ಕ್ಯಾನ್ಸರ್ ಪೀಡಿತರಿಗೆ ನೀಡಲಾಗುತ್ತದೆ.

ದ ಜೆರುಸಲೆಂ ಕಂಪೆನಿಯ ಚೇರ್ ಮನ್ ಡೆನ್ ಎರಿಡೋರ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ ‘ನಾವು ಕಂಡು ಹುಡುಕಿರುವ ಕ್ಯಾನ್ಸರ್ ಔಷಧಿಯ ಪ್ರಭಾವ ಮೊದಲ ದಿನದಿಂದಲೇ ಕಂಡುಕೊಳ್ಳಬಹುದು. ಇದರಿಂದ ಯಾವುದೇ ದುಷ್ಪರಿಣಾಮಗಳಿಲ್ಲ ಹಾಗೂ ಇದು ದುಬಾರಿಯಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ ಬೆಲೆಗೆ ಜನರ ಕೈತಲುಪಲಿದೆ.

ಫೋರ್ಬ್ಸ್ ನಲ್ಲಿ ಪ್ರಕಟವಾಗಿರುವ ವರದಿಯನ್ವಯ ಮುಟಾಟೋ ಕ್ಯಾನ್ಸರ್ ಕ್ಯಾನ್ಸರ್-ಟಾರ್ಗೆಟಿಂಗ್ ಪೆಪ್ಸಿಡೇಸ್ ಹಾಗೂ ಯೂನಿಕ್ ಟಾಕ್ಸಿನ್ ನ ಮಿಶ್ರಣವೆನ್ನಲಾಗಿದೆ. ಇದು ಕೇವಲ ಕ್ಯಾನ್ಸರ್ ಪೀಡಿತ ಜೀವಕೋಶಗನ್ನಷ್ಟೇ ನಾಶಪಡಿಸುತ್ತವೆ. ಕಿಮೋ ಅಥವಾ ಇತರ ಕ್ಯಾನ್ಸರ್ ಚಿಕಿತ್ಸೆಗೆ ಬಳಸಲಾಗುವ ಔಷಧಿಗಳಂತೆ ಆರೋಗ್ಯಯುತ ಜೀವಕೋಶಗಳನ್ನೂ ಇದು ನಾಶಪಡಿಸುವುದಿಲ್ಲ.

ಈಗಾಗಲೇ ಇಲಿಗಳ ಮೇಲೆ ಈ ಔಷಧಿಯನ್ನು ಪ್ರಯೋಗಿಸಲಾಗಿದ್ದು, ಯಸಶ್ಸು ಲಭಿಸಿದೆ. 2019ರಲ್ಲಿ ಮನುಷ್ಯರ ಮೇಲೂ ಇದರ ಪ್ರಯೋಗ ನಡೆಯಲಿದೆ.

ಬೆಂಗ್ಳೂರು ಗಂಡ್ಮಕ್ಕಳಿಗೂ ಸೇಫಲ್ಲ, ಮಹಿಳೆಯರೆ ಬಂದು 500 ರೂ. ಕೊಟ್ಟು ಬಾ ಅಂದ್ರು, ಆಮೇಲೆ!

ಕ್ಯಾಬ್ ನಲ್ಲಿ ಸಂಚರಿಸುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ, ಬಸ್‌ಗೆ ಕಾಯುತ್ತಿದ್ದ ಯುವತಿ ಹೊತ್ತೊಯ್ದ ಕಾಮಾಂಧರು ಎಂಬ ಅನೇಕ ಸುದ್ದಿಗಳನ್ನು ಓದುತ್ತಲೇ ಇರುತ್ತವೆ. ಆದರೆ ಇಲ್ಲಿ ಬಸ್‌ಗೆ  ಕಾಯುತ್ತಿದ್ದ ಯುವಕನನ್ನೇ ಮಹಿಳೆಯರು ಹೊತ್ತೊಯ್ದಿದ್ದಾರೆ!

ಮಂಗಳವಾರ ತಡರಾತ್ರಿ ಬಸ್‌ಗೆ ಕಾಯುತ್ತಿದ್ದ ಯುವಕನಿಗೆ 500 ರೂ. ನೀಡಿ ಲೈಂಗಿಕ ಕ್ರಿಯೆಗೆ ಬರುವಂತೆ  ಇಬ್ಬರು ಮಹಿಳೆಯರು ಪುಸಲಾಯಿಸಿದ್ದಾರೆ. ನಂತರ ಬಲವಂತವಾಗಿ ಆತನನ್ನು ಆಟೋದಲ್ಲಿ ಕೂರಿಸಿ ಆತನ ಪರ್ಸ್ ಹಣ ದೋಚಲು ಯತ್ನಿಸಿದ್ದಾರೆ. ನಂತರ ಮಹಿಳೆಯರೇ ಕಿರುಚಿ ಅತ್ಯಾಚಾರ ಮಾಡ್ತಿದ್ದಾನೆ ಎಂದು ಹೇಳುತ್ತೇವೆ ಎಂದು ಬೆದರಿಸಿ ಹಣ ವಸೂಲಿ‌ ಮಾಡಿ ಎಸ್ಕೇಪ್ ಆಗಿದ್ದಾರೆ.

ಓರಲ್‌ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!
ತನ್ನ ಮೇಲೆ ಮದ್ಯದ ನಶೆಯಲ್ಲಿ ಎರಗಲು ಬಂದ ಕಾಮುಕನಿಗೆ ಈ ಮಹಿಳೆ ಕೊಟ್ಟ ಶಿಕ್ಷೆ ಮಾದರಿಯಾಗಿದೆ. ಓರಲ್ ಸೆಕ್ಸ್ ಗೆ ಒತ್ತಾಯಿಸಿ ಮುಖದ ಮೇಲೆ ಚಾಕು ಇಟ್ಟ ಕಾಮುಕನ ಇಂದ್ರಿಯವನ್ನೆ ಗಟ್ಟಿಯಾಗಿ ಕಚ್ಚಿದ್ದಾಳೆ.

ಮಹಿಳೆಯ ದಾಳಿಯಿಂದ ಕಂಗಾಲಾದವ ಎದ್ದನೋ ಬಿದ್ದನೋ ಎಂದು ಓಡಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನ್ಯೂಯಾರ್ಕ್ ಪೊಲೀಸರು ಘಟನೆಯ ಸಂಪೂರ್ಣ ವಿವರ ನೀಡಿದ್ದು ಆರೋಪಿ ನಿಕೋಲೋಸ್ ಸಮಾರೋಗೆ ಬಲೆ ಬೀಸಿದ್ದಾರೆ.

39 ವರ್ಷದ ಮಹಿಳೆಯೊಂದಿಗೆ ಬಾರ್ ವೊಂದಕ್ಕೆ ತೆರಳಿ ಕುಡಿದು ಹಿಂದೆ ಬಂದಿದ್ದ  ನಿಕೋಲೋಸ್ ಮತ್ತು ಆತನ ಸ್ನೇಹಿತರು ಮಹಿಳೆಯನ್ನು ಆಕೆಯ ಮನೆಗೆ ಬಿಡಲು ತೆರಳಿದ್ದಾರೆ. ಈ ವೇಳೆ ಮಹಿಳೆಯನ್ನು ಸೆಕ್ಸ್ ಗೆ ಆಹ್ವಾನಿಸಿದ್ದಾರೆ. ವಿಚಲಿತಗೊಂಡ ಮಹಿಳೆ ಪುರುಷಾಂಗವನ್ನೇ ಕಚ್ಚಿ ಪ್ರಜ್ಞಾಹೀನಳಾಗಿದ್ದಾಳೆ.

ದರೋಡೆ ಮಾಡಿದ ಮಹಿಳೆಯರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಕೊಂಚ ಯಾಮಾರಿದರೂ ಹುಡುಗರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂಬುದನ್ನು ಈ ಪ್ರಕರಣ ಹೇಳಿದೆ.

ನಿಮ್ಮ Paytm, phonepe, Google tez ಬಂದ್ ಆಗಲಿದೆ!

ನೀವು Paytm, Phonepe, Google tez ಈ ರೀತಿ ಯಾವುದೇ E-wallet App ಬಳಕೆದಾರ ಆಗಿದ್ದರೆ ಇದನ್ನು ತಪ್ಪದೇ ಓದಿ.

RBI ( ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ನಿಯಮಗಳ ಪ್ರಕಾರ ವಾಲೆಟ್ ನಲ್ಲಿರುವ ಹಣ ವರ್ಗಾವಣೆ ಮಾಡಲು ಕೆವೈಸಿ ಅನ್ನು ಹೊಂದಿರುವುದು ಅವಶ್ಯಕವಾಗಿದ್ದು ಗ್ರಾಹಕರು ಫೆಬ್ರವರಿ 28ರೊಳಗೆ ಕೆವೈಸಿ ನವೀಕರಿಸಬೇಕು.

ಸಾಮಾನ್ಯವಾಗಿ ಗ್ರಾಹಕನಿಗೆ 3 ರಿಂದ 4 ಈ ವ್ಯಾಲೆಟ್ ಗಳಿವೆ. ಈ ಸಂದರ್ಭದಲ್ಲಿ ಎಲ್ಲಾ ಭೌತಿಕ ಕೆವೈಸಿ ಗಳು ವಾಲೆಟ್ ಕಂಪನಿ ಮತ್ತು ಗ್ರಾಹಕರ ಕಷ್ಟಕರ ಕೆಲಸ. ಅನೇಕ ದೊಡ್ಡ ಕಂಪನಿಗಳು ದೂರ ಹಂತದ ಕೆ ವೈ ಸಿ ಯ ಆಯ್ಕೆಯನ್ನು ನೀಡುತ್ತೇವೆ. ಈ ವಿಧಾನವು ಸಣ್ಣ ವ್ಯಾಲೆಟ್ ಕಂಪನಿಗಳಿಗೆ ದುಬಾರಿ ಎಂದು ಸಾಬೀತಾಗಿದೆ. ಗ್ರಾಹಕರು ಕೆವಿಸಿ ಪಡೆಯದಿದ್ದರೆ ವ್ಯಾಲೆಟ್ನಿಂದ ಖಾತೆಯನ್ನು ಖಾತೆಗೆ ಹಣವನ್ನು ವರ್ಗಾಯಿಸಲು ಒಂದು ಅವಕಾಶವಿರುತ್ತದೆ ಎಂದು ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ನವೀನ್ ಸೂರ್ಯ ಹೇಳುತ್ತಾರೆ.

ಪ್ರಸ್ತುತ ಈ ವಾರದ ಉದ್ಯಮವು 18ರಿಂದ 20 ಸಾವಿರ ಕೋಟಿ ರೂಪಾಯಿಗಳನ್ನು ಹೊಂದಿವೆ ಎಂದು ನವೀನ್ ಸುರೆ ಹೇಳಿದ್ದಾರೆ ವ್ಯಾಲೆಟ್ ಕಂಪನಿಗಳು kbz ಗಾಗಿ ತಮ್ಮ ಗ್ರಾಹಕರಿಗಾಗಿ ಸಂದೇಶಗಳನ್ನು ಕಳುಹಿಸಿದ್ದೇವೆ ಅಂತಹ ಪರಿಸ್ಥಿತಿಯಲ್ಲಿ ಬೌತಿಕ ಕೆವೈಸಿ ಕಂಪನಿ ಮತ್ತು ಗ್ರಾಹಕರ ಇಬ್ಬರಿಗೂ ಕಷ್ಟಕರವಾದ ಕೆಲಸ ಇಲ್ಲದೆ ಪ್ರತಿಯೊಬ್ಬರೂ ವ್ಯಾಲೆಟ ಗಳಲ್ಲಿ KYC ಮಾಡಲು ಪ್ರತಿ ಗ್ರಾಹಕರಿಗೂ ಸಹ ಕಷ್ಟವಾಗುತ್ತದೆ ಈ ಸಮಯದಲ್ಲಿ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಹಣವನ್ನು ವರ್ಗಾಯಿಸಲು ಅವಕಾಶವನ್ನು ಪಡೆಯುತ್ತದೆ ಎಂದು ಹೇಳಿದ್ದಾರೆ.

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ‘ಕೈ’ ನಾಯಕ!

ಮಹತ್ವದ ಬೆಳವಣಿಗೆಯೊಂದರಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ, ಕೇರಳದ ಕಾಂಗ್ರೆಸ್ ನಾಯಕ ಓಂ ಜಾರ್ಜ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಓಂ ಜಾರ್ಜ್ 17 ವರ್ಷದ ಅಪ್ರಾಪ್ತ ಬಾಲಕಿಗೆ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಬಾಲಕಿಯ ಪೋಷಕರು ಜಾರ್ಜ್ ಮನೆಯ ಕೆಲಸದಾಳುಗಳಾಗಿದ್ದು, ಎರಡು ವರ್ಷಗಳಿಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜಾರ್ಜ್ ವಿರುದ್ದ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಇನ್ನು ತನ್ನ ನಾಯಕನ ವಿರುದ್ಧ ಗಂಭೀರ ಆರೋಪ ಕೇಳಿ ಬರುತ್ತಿದ್ದಂತೇ ಜಾರ್ಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.

‘ಉರಿ’ ಸಿನಿಮಾ ನೋಡಿ ಉಪರಾಷ್ಟ್ರಪತಿ ಹೇಳಿದ್ದೇನು ಗೊತ್ತಾ! ನೋಡಿದ್ದರೆ ಓಮ್ಮೆ ಶಾಕ್ ಆಗುತ್ತೆ…

ಭಾರತ ದೇಶದ ಸೇನಾ ಶಕ್ತಿ ಏನೆಂಬುದು ವಿಶ್ವಕ್ಕೆ ಪರಿಚಯವಾದದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಿಂದಾಗಿ. ದೇಶದಲ್ಲಿ ನರೆಂದ್ರ ಮೋದಿ ಪ್ರಧಾನಿ ಗದ್ದುಗೆ ಏರಿದ ಬಳಿಕ ಸೈನಿಕರಿಗೆ ಹೊಸ ಹುರುಪನ್ನು ನೀಡಿದೆ. ದೇಶದ ಸೈನಿಕರಿಗೆ ಸದಾ ಮೊದಲ ಆದ್ಯತೆಯನ್ನು ನೀಡುತ್ತಿದ್ದರು. ಸೈನಿಕರ ಜೊತೆಗೆ ದೀಪಾವಳಿ ಹಾಗೂ ಇನ್ನಿತರ ಹಬ್ಬಗಳನ್ನು ಆಚರಿಸುವ ಮೂಲಕ ಸೈನಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದರು.

ಭಾರತ ದೇಶದ ಸೈನ್ಯದ ತಾಕತ್ತು ಏನೆಂಬುದು ವಿಶ್ವಕ್ಕೆ ಪರಿಚಯವಾದದ್ದು ಭಾರತೀಯ ಸೇನೆ ಪಕ್ಕದ ಪಾಕಿಸ್ಥಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ನಡೆಸಿದ ನಂತರ. ಭಾರತದ ಗಡಿಯನ್ನು ಉಲ್ಲಂಘಿಸಿ ನುಸುಳುವ ಪ್ರಯತ್ನ ಮಾಡುತ್ತಿದ್ದ ಪಾಕಿಸ್ಥಾನದ ಉಗ್ರರಿಗೆ ಸರ್ಜಿಕಲ್ ದಾಳಿಯ ಮೂಲಕ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿತ್ತು.

ಭಾರತೀಯ ಸೇನೆಯ ತಾಕತ್ತು ಸರ್ಜಿಕಲ್ ದಾಳಿಯ ಬಳಿಕ ಇಡೀ ವಿಶ್ವಕ್ಕೆ ಪರಿಚಯವಾಯಿತು. ಸೇನೆಯ ಈ ಕಾರ್ಯವನ್ನು ತೆರೆಯ ಮೇಲೆ ತರಲು ನಿರ್ಧರಿಸಿದರು. ಭಾರತೀಯ ಸೇನೆ ನಡೆಸಿದ ಈ ವಿರೋಚಿತ ದಾಳಿಗೆ ’ಉರಿ- ಸರ್ಜಿಕಲ್ ಸ್ತ್ರೈಕ್’ ಎಂದು ಹೆಸರಿಡಲಾಯಿತು. ’ಉರಿ’ ಚಿತ್ರ ಬಿಡುಗಡೆಯಾದ ಬಳಿಕೆ ಭಾರೀ ಮೆಚ್ಚುಗೆಗೆ ಪಾತ್ರವಾಯಿತು. ಉರಿ ಸಿನಿಮಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಬ್ರೇಕಿಂಗ್ ನ್ಯೂಸ್: ಫೆ.21 ರಾಮ ಮಂದಿರಕ್ಕೆ ಅಡಿಗಲ್ಲು?

ರಾಮ ಮಂದಿರ ನಿರ್ಮಾಣ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಮೀನ ಮೇಷ ಎಣಿಸುತ್ತಿದೆ. ಇನ್ನು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಈ ವಿಚಾರದಲ್ಲ ಆಸಕ್ತಿ ತೋರುತ್ತಿಲ್ಲವೆಂದು ಹಿಂದೂ ಸಾಧು ಸಂತರು ಆಕ್ರೋಶಗೊಂಡಿದ್ದಾರೆ.

ಇಂದು ನಡೆದ ಹಿಂದೂ ಸಾಧು ಸಂತರ ಸಮಾವೇಶ ಪರಮಧರ್ಮ ಸಂಸದ್ ನಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಬಹಿರಂಗವಾಗಿಯೇ  ಅಸಮಾಧಾನಗೊಂಡಿದ್ದರು. ಅಲ್ಲದೆ ಬಿಜೆಪಿಗೆ ಆರ್ಎಸ್ಎಸ್ ಗೆ ಕಾಯದೆ ತಾವೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಈ ಧರ್ಮ ಸಂಸದ್ ನಿರ್ಧರಿಸಿದೆ. ಸ್ವಾಮಿ ಸ್ವರೂಪಾನಂದ ಅವರಿಗೆ ಈ ಹೊಸ ಹೋರಾಟದ ನೇತೃತ್ವ ವಹಿಸಲಾಗಿದ್ದು ಸ್ವಾಮಿ ಸ್ವರೂಪನಂದ ಅವರು ಫೆಬ್ರವರಿ 21ರಂದು ಅಯೋಧ್ಯೆಯ ವಿವಾದಿತ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.

ಅಯೋಧ್ಯೆ ವಿವಾದಿತ ಜಾಗದ ಪ್ರಕರಣವು ಸದ್ಯ ಸುಪ್ರೀಂ ಕೋರ್ಟ್ ನಲ್ಲಿದೆ. ಆದರೆ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಮಂದಿರ ನಿರ್ಮಾಣ ಕಾರ್ಯ ನಡೆಸಬಹುದು ಎಂಬುದು ಕೆಲ ಹಿಂದೂ ಸಂಘಟನೆಗಳ ಅಭಿಪ್ರಾಯ ಹಾಗೂ ಒತ್ತಾಯವಾಗಿದೆ. ಆದರೆ ಪ್ರಧಾನಿ ಮೋದಿ ಅವರು ಸುಪ್ರೀಂ ಕೋರ್ಟ್ ನಿಂದ ಅಂತಿಮ ತೀರ್ಪು ಬರುವವರೆಗೂ ಮಂದಿರ ನಿರ್ಮಾಣ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ನಡೆ ಇರುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಅಣ್ಣಾ ನಿನ್ನು ಎಲ್ಲೋ! ಸತೀಶ್ ಜಾಕಿಹೊಳಿ

ಗೋಕಾಕ್ ಶಾಸಕ ರಮೇಶ್ ಜಾರಕಿ ಹೊಳಿ ಎಲ್ಲಿದ್ದಾ ರೆಂಬುದು ನನಗೆ ಗೊತ್ತಿಲ್ಲ. ಗೋಕಾಕ್‍ನಲ್ಲೂ ಇಲ್ಲ, ನನ್ನ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿ ಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ನನ್ನ ಸಹೋದರನೇ ಆದರೂ ಕೂಡ ನಮ್ಮಿಬ್ಬರ ವ್ಯವಹಾರ ಬೇರೆ ಬೇರೆ. ಅವರನ್ನು ಯಾರೂ ಬಲವಂತವಾಗಿ ಹಿಡಿದಿಟ್ಟಿಲ್ಲ. ಅವರು ಸ್ವಯಂಪ್ರೇರಿತವಾಗಿ ಹೋಗಿರಬಹುದು ಎಂದು ಹೇಳಿದರು.

ಅವರಿಗೆ ಶೋಕಾಸ್ ನೋಟೀಸ್ ನೀಡಿರುವುದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಬಹುದು ಎಂದರು.

ಮಿಲನದ ನಂತರ ಮೂತ್ರ ವಿಸರ್ಜನೆ ಏಕೆ ಮಾಡಬೇಕು ಗೊತ್ತೇ ..? ಇಲ್ಲವಾದರೆ ಏನ್ ಆಗುತ್ತೆ ಗೊತ್ತಾ…

ಯಾವುದೇ ಪರಿಸ್ಥಿತಿಯಲ್ಲಿ ಮೂತ್ರ ವಿಸರ್ಜನೆಯನ್ನು ತಡೆಹಿಡಿಯಬಾರದು ಅಡರಿನ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಲುಂಟಾಗುತ್ತವೆ. ಅದರಲ್ಲೂ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದು ಎಲ್ಲ ವಿಧಗಳಲ್ಲೂ ಆರೋಗ್ಯಕರ ಎಂಬ ವಿಷಯ ನಿಮಗೆ ತಿಳಿದಿದೆಯೇ…? ಹೌದು ಮಿಲನ ಮಹೋತ್ಸವದ ನಂತರ ಮೂತ್ರ ವಿಸರ್ಜನೆ ಮಾಡುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ ಎನ್ನಲಾಗುತ್ತೆ. ಇದಕ್ಕೆ ಕಾರಣಗಳೂ ಮತ್ತು ಪ್ರಯೋಜನೆಗಳೂ ಇವೆ. ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಆಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ ನೋಡಿ.

ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದಾಗ ಒಬ್ಬರ ದೇಹದಿಂದ ಮತ್ತೊಬ್ಬರ ದೇಹದೊಳಕ್ಕೆ ಪ್ರವೇಶಿಸುತ್ತವೆ.ಹೀಗೆ ಒಬ್ಬರ ಅವಯವಗಳಿಂದ ಮತ್ತೊಬ್ಬರ ಅವಯವದೊಳಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುವುದರಿಮದ ಹೊಸ ವ್ಯಾಧಿಗಳು ಹುಟ್ಟಿಕೊಳ್ಳುತ್ತವೆ.ಆದುದರಿಂದ ಶರೀರದ ಒಳಗೆ ಸೇರಿರುವ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಲು ಮೂತ್ರವನ್ನು ವಿಸರ್ಜಿಸಬೇಕು. ಅದೇರೀತಿ HIV ಯನ್ನು ಸಹ ಮೂತ್ರವಿಸರ್ಜನೆಯ ಮೂಲಕ ನಿಯಂತ್ರಿಸಬಹುದು.

ನಮ್ಮ ಕಣ್ಣಿಗೆ ಕಾಣಿಸದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಒಂದಾಗುವುದರಿಂದ ಲೈಂಗಿಕ ವ್ಯಾಧಿಗಳು ಬರುವ ಸಂಭವವಿದೆ.ಮೂತ್ರವಿಸರ್ಜನೆ ಮಾಡುವುದರ ಮೂಲಕ ಸೂಕ್ಷ್ಮ ಜೀವಿಗಳು ಒಡನೆಯೇ ಹೊರ ಹಾಕಲ್ಪಡುತ್ತವೆ.

ಲೈಂಗಿಕ ಕ್ರಿಯೆ ಸಮಯದಲ್ಲಿ ಆನಂದಕ್ಕೆ ಅಡಚಣೆ ಆಗದಿರಲು ,ಮೂತ್ರಾಶಯ ಮೂತ್ರವಿಸರ್ಜನೆಯನ್ನು ತಡೆಹಿಡಿದಿರುತ್ತದೆ. ಆದುದರಿಂದ ಲೈಂಗಿಕ ಕ್ರಿಯೆಯ ನಂತರ ಮೂತ್ರವನ್ನು ವಿಸರ್ಜಿಸುವುದರ ಮೂಲಕ ಮೂತ್ರಕೋಶವನ್ನು ರಕ್ಷಿಸಬಹುದು.

ಸಾಮಾನ್ಯವಾಗಿ ಹೆಣ್ಣು,ಗಂಡುಗಳಲ್ಲಿ ಶೀಘ್ರ ಸ್ಪಲನ ಸಮಸ್ಯೆಯಿರುತ್ತದೆ. ಆದರೆ ತಜ್ಞ ವೈದ್ಯರುಗಳು ನಡೆಸಿರುವ ಸಂಶೋಧನೆಗಳ ಪ್ರಕಾರ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜಿಸುವುದರಿಂದ ಮೂತ್ರಕೋಶ ಹಾಗು ಶೀಘ್ರ ಸ್ಪಲನ ಸಮಸ್ಯೆಗಳು ನಿವಾರಣೆಯಾಗುತ್ತವೆಂದು ತಿಳಿದು ಬಂದಿದೆ.

ಸೆಕ್ಸ್ ನಂತರ ಮೂತ್ರವನ್ನು ವಿಸರ್ಜಿಸಿದರೆ, ಮತ್ತೊಮ್ಮೆ ಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ನವ ಚೈತನ್ಯ ಬರುತ್ತದೆ. ಜೊತೆಗೆ ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿದಲ್ಲಿ ಇಬ್ಬರೂ ತೃಪ್ತಿ ಹೊಂದಿ ಆರಾಮವೆನಿಸುತ್ತದೆ.

ಸಿಎಂ ಒಂದು ಹೇಳಿಕೆಯಿಂದ ಬೆಚ್ಚಿ ಬಿದ್ದ ಕಾಂಗ್ರೆಸ್‌!

ಕಾಂಗ್ರೆಸ್‌ ಶಾಸಕ ಎಸ್‌.ಟಿ. ಸೋಮಶೇಖರ್‌ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪದ ತ್ಯಾಗ ಮಾಡುವುದಾಗಿ ಹೇಳಿದ್ದು ಕಾಂಗ್ರೆಸ್‌ ವಲಯದಲ್ಲಿ ತಲ್ಲಣ ಉಂಟು ಮಾಡಿತಲ್ಲದೆ ತಕ್ಷಣ ಎಚ್ಚೆತ್ತ ಹೈಕಮಾಂಡ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಯಿತು.

ಕುಮಾರಸ್ವಾಮಿ ಹೇಳಿಕೆ ಹೊರಬೀಳುತ್ತಿದ್ದಂತೆ ಎಸ್‌.ಟಿ. ಸೋಮಶೇಖರ್‌ ಅವರಿಗೆ ನೋಟಿಸ್‌ ನೀಡುವಂತೆ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಹೈಕಮಾಂಡ್‌ ಸೂಚಿಸಿತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಂಪೂರ್ಣ ನಂಬಿಕೆಯಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.

ಜತೆಗೆ ದಿನೇಶ್‌ ಗುಂಡೂರಾವ್‌ ಕೂಡ ಎಸ್‌.ಟಿ. ಸೋಮಶೇಖರ್‌ ಅವರಿಗೆ ಖಡಕ್‌ ಎಚ್ಚರಿಕೆ ನೀಡಿ, ಸರ್ಕಾರದ ವಿರುದ್ಧ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ರೀತಿಯ ನಡವಳಿಕೆ ಪಕ್ಷ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆರಂಭದಲ್ಲಿ ಸೋಮಶೇಖರ್‌ ಹೇಳಿಕೆಯನ್ನು ಸಮರ್ಥಿಸಿಕೊಂಡು, ಸಿದ್ದರಾಮಯ್ಯ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರು, ನಮ್ಮ ಶಾಸಕರು ಅವರ ಬಗ್ಗೆ ಒಳ್ಳೆಯ ಮಾತು ಆಡಿದರೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.

ಸೋಮಶೇಖರ್‌ ಹೇಳಿಕೆಗೆ ಜೆಡಿಎಸ್‌ನಿಂದ ಖಾರವಾದ ಪ್ರತಿಕ್ರಿಯೆಗಳು ಹೆಚ್ಚಾದ ಮೇಲೆ ತಕ್ಷಣ ದಿನೇಶ್‌ ಗುಂಡೂರಾವ್‌, ಎಸ್‌.ಟಿ. ಸೋಮಶೇಖರ್‌ ಅವರನ್ನು ಪಕ್ಷದ ಕಚೇರಿಗೆ ಕರೆಸಿ ವಿವರಣೆ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್‌, ಕನಕ ಜಯಂತಿ ಕಾರ್ಯಕ್ರಮದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಕುರುಬ ಸಂಘಟನೆಯವರು ಒತ್ತಾಯ ಮಾಡಿದ್ದರು. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಮಾಡಿಕೊಡುವುದಾಗಿ ಹೇಳಿದ್ದೆ. ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮಗಳು ಆಗಿವೆ ಎಂದು ಸಮಜಾಯಿಸಿ ನೀಡಿದರು.

ನಾನು ಮುಖ್ಯಮಂತ್ರಿ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಮೈತ್ರಿ ಸರ್ಕಾರದ ಚೌಕಟ್ಟಿನಲ್ಲಿ ನಾನು ನಡೆದುಕೊಂಡಿದ್ದೇನೆ. ಮೈತ್ರಿ ಧರ್ಮ ಮೀರಿ ನಾನು ನಡೆದುಕೊಂಡಿಲ್ಲ. ನಾನು ಯಾರಿಗೂ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಅವರ ಕ್ಷಮೆ ಕೋರುವುದಾಗಿ ಸ್ಪಷ್ಟಪಡಿಸಿದರು. ಇದಕ್ಕೆ ಸಮಾಧಾನ ವ್ಯಕ್ತಪಡಿಸಿದ ದಿನೇಶ್‌ ಗುಂಡೂರಾವ್‌, ಸಮ್ಮಿಶ್ರ ಸರ್ಕಾರದ ವ್ಯವಸ್ಥೆಯಲ್ಲಿ ಯಾರೇ ಆದರೂ ಗೊಂದಲದ ಹೇಳಿಕೆಗಳನ್ನು ನೀಡಬಾರದು. ಎಲ್ಲರೂ ಮೈತ್ರಿ ಧರ್ಮದ ಲಕ್ಷ್ಮಣ ರೇಖೆ ಮೀರಬಾರದು. ಆ ರೀತಿ ಯಾರೇ ನಡೆದುಕೊಂಡರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಆದರೆ, ಸೋಮಶೇಖರ್‌ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವುದರಿಂದ ಅವರ ವಿರುದ್ದ ಕ್ರಮ ಜರುಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್‌ ಶಾಸಕರ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿರಬಹುದು.ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಯಾವತ್ತೂ ತಾವು ಮುಖ್ಯಮಂತ್ರಿ ಎಂದು ಹೇಳಿಲ್ಲ. ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡಿರುವುದರಿಂದ ಕೆಲವರು ಆ ರೀತಿಯ ಭಾವನೆ ವ್ಯಕ್ತಪಡಿಸಿರಬಹುದು.