ನೀರವ್ ಮೋದಿಗೆ ಬಿಗ್ ಶಾಕ್ ಕೊಟ್ಟ ಲಂಡನ್ ಕೋರ್ಟ್!! ಅತಂತ್ರ ಸ್ಥಿತಿಯಲ್ಲಿ ನೀರವ್

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ವಂಚಿಸಿ ಹಲವು ತಿಂಗಳುಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಲಂಡನ್​ ಪೊಲೀಸರ ಬಲೆಗೆ ಬಿದ್ದಿರುವ ವಜ್ರದ ಉದ್ಯಮಿ ನೀರವ್​ ಮೋದಿಗೆ ಲಂಡನ್​ನ ನ್ಯಾಯಾಲಯ ಎರಡನೇ ಬಾರಿಗೆ ಜಾಮೀನು ನಿರಾಕರಿಸಿದೆ.

ಬಂಧನದಿಂದ ತಪ್ಪಿಸಿಕೊಳ್ಳಲು ನೀರವ್ ಮೋದಿ ಪ್ರತ್ಯಕ್ಷದರ್ಶಿಗೆ ಮರಣ ಬೆದರಿಕೆ ಒಡ್ಡಿ ಮತ್ತು ಮತ್ತೊಬ್ಬರಿಗೆ 20 ಲಕ್ಷ ರೂ. ಆಮಿಷವೊಡ್ಡಿದ್ದರು ಎಂದು ಲಂಡನ್‌ ಪ್ರಾಸಿಕ್ಯೂಟರ್ ಜಾಮೀನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು.

ಭಾರತೀಯ ಅಧಿಕಾರಿಗಳ ಪರವಾಗಿ ವಾದ ಮಂಡಿಸಿದ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವಿಸ್‌ ಅಥವಾ ಸಿಪಿಎಸ್‌, ನೀರವ್ ಮೋದಿ ಅವರಿಗೆ ಜಾಮೀನು ದೊರೆತರೆ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಅವರು ತಪ್ಪಿಸಿಕೊಂಡದ್ದೇ ಆದರೆ ಸಾಕ್ಷಿಗಳು ಮತ್ತು ಪುರಾವೆಗಳಲ್ಲಿ ಹಸ್ತಕ್ಷೇಪ ಮಾಡುವ ಅಪಾಯವಿದೆ. ಅಲ್ಲದೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿ ನಿರ್ದೇಶನದ ಮೇರೆಗೆ ಭಾರತದಲ್ಲಿ ದೂರವಾಣಿ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇನ್ನು ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ. 26ಕ್ಕೆ ಮುಂದೂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀರವ್ ಮೋದಿಯನ್ನು ಗಡಿಪಾರು ಮಾಡುವುದಕ್ಕೆ ಭಾರತದ ಜಾರಿ ನಿರ್ದೇಶನಾಲಯ ಮನವಿ ಮಾಡಿದ ಹಿನ್ನೆಲೆಯಲ್ಲಿ ಲಂಡನ್ ಕೋರ್ಟ್ ನೀರವ್ ಮೋದಿ ವಿರುದ್ಧ ಮೊನ್ನೆಯಷ್ಟೇ ಬಂಧನ ವಾರಂಟ್ ಜಾರಿಗೊಳಿಸಿತ್ತು. ಅದಾದ ಬಳಿಕ ನೀರವ್ ಮೋದಿಯನ್ನು ಲಂಡನ್‌ ಪೊಲೀಸರು ಮಾ. 20ರಂದು ಬಂಧಿಸಿದ್ದರು.

ತಿಳಿದುಕೊಳ್ಳಲೇಬೇಕಾದ ಮಾಹಿತಿ; ಇಂದೂ ಬ್ಯಾಂಕುಗಳು ಫುಲ್ ಡೇ ಓಪನ್!ಏಕೆ ಗೊತ್ತಾ..?!!

ಸಾಮಾನ್ಯವಾಗಿ ಭಾನುವಾರ ಬಂದರೆ ಬ್ಯಾಂಕ್‍ಗಳು ಕ್ಲೋಸ್ ಆಗಿರುತ್ತವೆ. ಆದರೆ ಇಂದು ದಿನ ಪೂರ್ತಿ ಬ್ಯಾಂಕ್‍ಗಳು ತೆರೆದಿರುತ್ತವೆ.

2018-19ರ ಹಣಕಾಸು ವರ್ಷದ ಅವಧಿ ಇಂದಿಗೆ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಭಾನುವಾರವಾದರೂ ಬ್ಯಾಂಕ್‍ಗಳು ಎಂದಿನಂತೆ ಕಾರ್ಯಾ ನಿರ್ವಹಿಸಲಿವೆ. ಹೀಗಾಗಿ ಹಣಕಾಸು ವರ್ಷದ ಎಲ್ಲಾ ವ್ಯವಹಾರ (Transaction) ಗಳ ಮೇಲಿನ ಮತ್ತು ಎಲ್ಲಾ ಐಟಿ ರಿಟರ್ನ್ ಗಳನ್ನು ಇವತ್ತು ಕೂಡ ಫೈಲ್ ಮಾಡಬಹುದು.

ಎಂದಿನಂತೆ ಇವತ್ತು ಕೂಡ ಆದಾಯ ತೆರಿಗೆ ಹಾಗೂ ಜಿಎಸ್‍ಟಿ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಆದ್ದರಿಂದ ತೆರಿಗೆದಾರರು ತಮ್ಮ ವಹಿವಾಟು ನಡೆಸಬಹುದಾಗಿದೆ. ಬ್ಯಾಂಕುಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಪಾಕಿಸ್ತಾನವನ್ನು ಉಗ್ರ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಸಿಕ್ಕಿದೆ ಮಹತ್ವದ ಸಾಕ್ಷಿ!! ಸುಲಭವಾಯ್ತು ಪಾಕಿಸ್ತಾನದ ಹೆಡೆಮುರಿಗಟ್ಟುವ ಕೆಲಸ

ಭಾರತ ಗಡಿಯಲ್ಲಿ ಉಗ್ರರು ನಡೆಸುತ್ತಿರುವ ದಾಳಿಗೆ ಪಾಕ್ ಸೇನೆ ನೆರವನ್ನು ನೀಡುತ್ತಿದೆ ಎಂಬುವುದಕ್ಕೆ ಪುರಾವೆ ದೊರೆತಿದೆ. ಉಗ್ರರು ಸದೆಬಡಿರುವ ಸೇನೆ ಅವರ ಬಳಿಕ ಪಾಕ್ ಸೇನೆಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಶುಕ್ರವಾರ ಬದ್ಗಾಮ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಭದ್ರತಾಪಡೆ ಜೈಶ್-ಎ- ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಒರ್ವನನ್ನು ಬಂಧಿಸಿದೆ. ಈ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಪಾಕಿಸ್ತಾನ ಸೇನೆಯ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ರೈಫಲ್ ಕೂಡಾ ಪತ್ತೆಯಾಗಿದೆ. ಇದರಿಂದ ಪಾಕ್ ಸೈನ್ಯವೇ ನೇರವಾಗಿ ಈ ರೈಫಲ್‍ಗಳನ್ನು ಉಗ್ರರಿಗೆ ನೀಡಿರುವುದಕ್ಕೆ ಇದು ಸಾಕ್ಷಿಯಾಗಿದೆ.

ಪಾಕ್ ಯೋಧರು ಬಳಸುವ ರೈಫಲ್ ಉಗ್ರರ ಬಳಿ ಪತ್ತೆಯಾಗುತ್ತಿರುವುದು ಇದು 3ನೇ ಬಾರಿಯಾಗಿದ್ದು, ಈ ಹಿಂದೆ 2017ರ ಅಕ್ಟೋಬರ್‍ನಲ್ಲಿ ಮಸೂದ್ ಅಜರ್‍ನ ಅಳಿಯ ತಲ್ಹಾ ರಶೀದ್‍ನ ಎನ್‍ಕೌಂಟರ್ ನಡೆದಾಗ ಇದೇ ಶಸ್ತ್ರ ದೊರಕಿತ್ತು. ಅಲ್ಲದೆ 2018ರ ಅಕ್ಟೋಬರ್ 31ರಂದು ಪುಲ್ವಾಮಾ ಜಿಲ್ಲೆಯ ಟ್ರಾನ್‍ನಲ್ಲಿ ಜೈಷ್‍ಟ ಉಗ್ರರ ಮೇಲೆ ದಾಳಿ ನಡೆಸಿದಾಗಲೂ ಸ್ಥಳದಲ್ಲೂ ಎಂ4 ರೈಫಲ್ ಪತ್ತೆಯಾಗಿತ್ತು.

ಏನಿದು ಎಂ4 ರೈಫಲ್?
ಎಂ4 ಕಾರ್ಬೈನ್ ರೈಫಲ್‍ಗಳು ಅರೆಸ್ವಯಂಚಾಲಿತ ಶಸ್ತ್ರವಾಗಿದ್ದು, ಇದರಿಂದ ಮೂರು ಸುತ್ತು ಗುಂಡು ಹಾರಿಸಬಹುದಾಗಿದೆ. ಅಮೆರಿಕ ಯೋಧರು ಇದನ್ನು ಪ್ರಧಾನವಾಗಿ ಬಳಸುತ್ತಾರೆ. ಹಲವಾರು ಯುದ್ಧಗಳಲ್ಲಿ ಅಮೆರಿಕಾ ಎಂ4 ರೈಫಲ್‍ಗಳನ್ನು ಬಳಸಿದೆ. ಹಾಗೆಯೇ ಈ ಶಸ್ತ್ರಗಳನ್ನು ಪಾಕಿಸ್ತಾನಕ್ಕೂ ಮಾರಾಟ ಮಾಡಿದೆ.

ಪುಲ್ವಾಮಾ ದಾಳಿ ಬಳಿಕ ಗಡಿಭಾಗದಲ್ಲಿ ಗುಂಡಿನ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ಅಲ್ಲದೆ ಈ ದಾಳಿ ಬಳಿಕ ಭಾರತೀಯ ಭದ್ರತಾ ಪಡೆ ಕಣಿವೆಯಲ್ಲಿ ಉಗ್ರರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಈವರೆಗೆ ಸುಮಾರು ಜೈಶ್ ಸಂಘಟನೆಗೆ ಸೇರಿರುವ 30 ಉಗ್ರರನ್ನು ಸದೆಬಡಿಯಲಾಗಿದೆ. ಹಾಗೆಯೇ ಕಳೆದ 24 ಗಂಟೆಗಳಲ್ಲಿ ಸುಮಾರು 6 ಮಂದಿ ಉಗ್ರರನ್ನು ಭದ್ರತಾಪಡೆ ಹತ್ಯೆಗೈದಿದೆ. ಗುರುವಾರ ಶೋಪಿಯಾನ್ ಬಳಿ ನಡೆಸಿದ ಎನ್‍ಕೌಂಟರ್‍ನಲ್ಲಿ ನಾಲ್ವರು ಉಗ್ರರು ಹಾಗೂ ಶುಕ್ರವಾರದಂದು ಬದ್ಗಾಮ್‍ನಲ್ಲಿ ಇಬ್ಬರು ಜೈಷ್ ಉಗ್ರರು ಹತರಾಗಿದ್ದಾರೆ.

ಬಿಗ್ ನ್ಯೂಸ್; ಸುಮಲತಾ ಅಂಬರೀಶ್ ಗೆಲ್ಲಲಿ ಎಂದು ಈ ಯುವಕ ಮಾಡಿದ್ದೇನು ಗೊತ್ತಾ..?!!

ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಮಂಡ್ಯದ ಯುವಕನೊಬ್ಬ ಉರುಳು ಸೇವೆ ಮಾಡಿದ್ದಾರೆ.

ಬೆನಕಪ್ರಸಾದ್ ಉರುಳು ಸೇವೆ ಮಾಡಿದ ಯುವಕ. ಬೆನಕಪ್ರಸಾದ್ ಪಕ್ಕಾ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯಾಗಿದ್ದು, ಈಗ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಮಂಡ್ಯ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಈ ಸೇವೆ ಮಾಡಿದ್ದಾರೆ.

ಬೆನಕಪ್ರಸಾದ್ ಕೆ.ಆರ್ ನಗರ ಪಟ್ಟಣ ಆಂಜನೇಯ ಬ್ಲಾಕ್‍ನ ಆಂಜನೇಯಸ್ವಾಮಿ ದೇವಾಲಯದಿಂದ ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ಎದ್ದು ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾರೆ.

ದಿನಕ್ಕೆ ಎರಡು ಬಾರಿ ಮಾಯವಾಗಿ ಮತ್ತೆ ಪ್ರತ್ಯಕ್ಷವಾಗುತ್ತೆ ಈ ಮಂದಿರ; ಇಂದಿಗೂ ಈ ವಿಸ್ಮಯ ನಡೆಯುವ ಈ ದೇವಸ್ತಾನ ಇರುವುದಾದರು ಎಲ್ಲಿ ಗೊತ್ತೆ.?

ನಮ್ಮ ಭಾರತದೇಶ, ಚಾರಿತ್ರಿಕ, ಪುರಾತನ ದೇವಾಲಯಗಳ ನಿಲಯ. ಹಲವಾರು ಶತಾಬ್ಧಗಳ ಹಿಂದೆ ನಿರ್ಮಿಸಿದ್ದರೂ ಇಂದಿಗೂ ಸುಸ್ಥಿತಿಯಲ್ಲಿರುವ ದೇವಾಲಯಗಳು ಕೆಲವಾದರೆ, ಪುರಾಣಗಳ ಹಿನ್ನೆಲೆಯ ವಿಶಿಷ್ಟ ದೇವಾಲಯಗಳೂ ಇಲ್ಲಿವೆ.

ಕೆಲವು ದೇವಾಲಯಗಳು ಅವುಗಳನಿರ್ಮಾಣ ಶೈಲಿ,ಆಕಾರ,ಪ್ರಾಚೀನತೆ ಮೊದಲಾದ ಅಂಶಗಳಿಂದ ಪ್ರಚಾರಕ್ಕೆ ಬರುತ್ತವೆ. ಆದರೆ,ಗುಜರಾತ್ ರಾಜ್ಯದಲ್ಲಿರುವ ಒಂದು ಶಿವಾಲಯ ಮಾತ್ರ ಇವೆಲ್ಲವಕ್ಕೂ ಭಿನ್ನವಾಗಿದೆ. ಯಾಕೆಂದರೆ,ಆ ದೇವಾಲಯ ಪ್ರತೀದಿನ ಮಾಯವಾಗುತ್ತದೆ ಹಾಗು ಮತ್ತೆ ಪ್ರತ್ಯಕ್ಷವಾಗುತ್ತದೆ.

ಗುಜರಾತಿನ ವಡೋದರ ಬಳಿಯಿರುವ ಕವಿ ಕಂಬೋಯ್ ಎಂಬ ಗ್ರಾಮದ ಬಳಿ ಅರಬ್ಬೀ ಸಮುದ್ರದಲ್ಲಿ ನಿರ್ಮಿಸಿರುವ ಆಲಯದಲ್ಲಿ ಶಿವನನ್ನು ‘ಸ್ತಂಭೇಶ್ವರ’ನಾಗಿ ಪೂಜಿಸುತ್ತಾರೆ.  ಈ ದೇವಾಲಯ ಬಹಳ ಪುರಾತನವಾದದ್ದೆಂದು ಇತಿಹಾಸಕಾರರು ಹೇಳುತ್ತಾರೆ.  ಸಹಸ್ರಮಾನಗಳ ಹಿಂದೆ ಕಾರ್ತಿಕೇಯ ಸ್ವಾಮಿಯೇ ಇದನ್ನು ನಿರ್ಮಿಸಿದನೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಆಗ ತಾರಕಾಸುರನನ್ನು ವಧಿಸಿದ ಸಮಯದಲ್ಲಿ ನಿರ್ಮಿಸಲಾದ ಈ ದೇವಾಲಯ ಸಮುದ್ರದಲ್ಲಿ ಮುಳುಗಿದ್ದು 150 ವರ್ಷಗಳ ಹಿಂದೆ ಕಾಣಿಸಿಕೊಂಡಿತಂತೆ. ಆದರೂ ಸಹ ಇಂದಿಗೂ ಈ ದೇವಾಲಯ ದಿನವೂ ಸಮುದ್ರದಲ್ಲಿ ಮುಳುಗಿ,ಮಾರನೇ ದಿನ ಪ್ರತ್ಯಕ್ಷವಾಗುತ್ತದಂತೆ.

4 ಅಡಿ ಎತ್ತರವಿರುವ ಈ ಶಿವಲಿಂಗ ತಮ್ಮ ಕೋರಿಕೆಗಳನ್ನು ಈಡೇರಿಸುತ್ತದೆಂದು ಭಕ್ತರು ನಂಬಿದ್ದಾರೆ. ಈ ದೇವಾಲಯದ ಧರ್ಶನ ಪಡೆಯಬೇಕಾದರೆ ಭಕ್ತರು ಬೆಳಗ್ಗೆ ಬರಬೇಕು. ಮಧ್ಯಾನ್ಹದ ವರೆಗೂ ದರ್ಶನ ಮಾಡಿ ಪೂಜೆ ನೆರವೇರಿಸಬಹುದು. ಆನಂತರ ಹಿಂದಿರುಗಲೇ ಬೇಕು . ಯಾಕೆಂದರೆ ಆಗ ಈ ದೇವಾಲಯ ಸಮುದ್ರದಲ್ಲಿ ಮುಳುಗಿಹೋಗುತ್ತದೆ.  ಆದರೆ ಈ ಆಲಯಕ್ಕೆ ಇದೇ ವಿಶೇಷತೆಯಲ್ಲದೆ ಇನ್ನೊಂದು ವಿಶೇಷತೆಯೂ ಇದೆ.

ಈ ದೇವಾಲಯ ಇರುವ ಸ್ಥಳದಲ್ಲಿ ಚೋಟೇ ಮಹೀ ಸಾಗರ್ ,ಸಬರ್ಮತಿ ಎಂಬ ಎರಡು ನದಿಗಳ ಸಂಗಮವಾಗುತ್ತವೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇನ್ನೇಕೆ ತಡಮಾಡುತ್ತೀರ ? ನೀವೂ ಸಹ ಒಮ್ಮೆ ಈ ಶಿವಾಲಯವನ್ನು ದರ್ಶಿಸಿ ಪುನೀತರಾಗಿ.ಲ

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ ದಶ ಲಾಭಗಳು ಗೊತ್ತಾದರೆ ಅಚ್ಚರಿ ಪಡುವಿರಿ

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗ ಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣ ಪಡಿಸ ಬಹುದು ಎಂದು ತಿಳಿದಿದೆಯಾ?

ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿದು ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವರೆಂಬ ಹೆಗ್ಗಳಿಕೆಯಿದೆ.

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡ ಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ:

🔹 ಕರುಳಿನ ಕ್ರಿಯೆ ಸರಾಗ: ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆಯು ಸದಾ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ.

🔹ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ: ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.

🔹ಹಸಿವು ಹೆಚ್ಚಿಸುತ್ತದೆ: ಆಗಾಗ ನಾವು ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡ ಬಹುದು.

🔹ತಲೆನೋವು ನಿವಾರಿಸುತ್ತದೆ: ನಮಗೆ ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ತಲೆನೋವು ಕಾಣಿಸಿ ಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡ ಬಹುದು.

🔹 ಕರುಳನ್ನು ಸ್ವಚ್ಛಗೊಳಿಸುತ್ತದೆ: ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿ ಕೊಳ್ಳಲು ನೆರವಾಗುತ್ತದೆ.

🔹ಚಯಾಪಚಯ ಕ್ರಿಯೆಗೆ ವೇಗ : ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.

🔹ರಕ್ತ ಕಣಗಳ ಸೃಷ್ಟಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.

🔹 ತೂಕ ಕಳೆದು ಕೊಳ್ಳಲು: ನೀವು ತೂಕ ಕಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರ ಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.

🔹ಹೊಳೆಯುವ ತ್ವಚ್ಛೆಗೆ: ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ.

🔹ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ….

ಕುತೂಹಲ ನಡೆ; ಈ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆ ಬಾಕಿ, ಪ್ರಮುಖ ಪಕ್ಷಗಳ ನಡೆ ಏನು?!!

ಇಷ್ಟು ಸಾರಿ ಚುನಾವಣೆಯಲ್ಲಿ ತ್ರಿಕೋನ ಹಣಾಹಣಿಗೆ ವೇದಿಕೆಯಾಗುತ್ತಿದ್ದ ಅಖಾಡಗಳು ಈ ಸಾರಿ ದೋಸ್ತಿ ಸರಕಾರದ ಕಾರಣಕ್ಕೆ ನೇರ ಹಣಾಹಣಿಯ ವೇದಿಕೆಯಾಗಿದೆ. ಅಲ್ಲಲ್ಲಿ ಬಂಡಾಯದ ಮಾತುಗಳು ಕೇಳಿ ಬಂದಿದ್ದರೂ ನಾಮಪತ್ರ ಹಿಂತೆಗೆತಕ್ಕೆ ಮಾ. 29ರವರೆಗೆ ಅವಕಾಶ ಇದೆ.

ಹಾಗಾದರೆ ಯಾವ ಪಕ್ಷ ಇನ್ನು ಮೂರನೇ ಹಂತ ಅಂದರೆ ರಾಜ್ಯದಲ್ಲಿ 2ನೇ ಹಂತದ ಚುನಾವಣೆ ನಡೆಯಲಿರುವ ಸ್ಥಾನಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ ಎನ್ನುವುದಕ್ಕೆ ಉತ್ತರ ಇಲ್ಲಿದೆ.  ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು..!!

ಬಿಜೆಪಿ: ಕೊಪ್ಪಳ, ರಾಯಚೂರು, ಚಿಕ್ಕೋಡಿ

ಕಾಂಗ್ರೆಸ್ – ಧಾರವಾಡ

ಸಿಗದ ಟಿಕೆಟ್: ಕಚೇರಿಯ 300 ಕುರ್ಚಿಗಳನ್ನೇ ಹೊತ್ತೊಯ್ದ ಕೈ ಶಾಸಕ!

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿಲ್ಲ ಎಂದು ಬೇಸತ್ತ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಪ್ರಾದೇಶಿಕ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ಬೆಂಬಲಿಗರ ಸಹಾಯದಿಂದ ಹೊತ್ತೊಯ್ದಿದ್ದಾರೆ. ಈ ಮೂಲಕ ಪಕ್ಷದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಪ್ರಾದೇಶಿಕ ಕಚೇರಿ ‘ಗಾಂಧಿ ಭವನ್’ಲ್ಲಿ ಮಂಗಳವಾರದಂದು ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷ NCP ಮುಖಂಡರ ಸಭೆ ಕರೆಯಲಾಗಿತ್ತು. ಅದರೆ ಈ ಸಭೆಯ ಮಾಹಿತಿ ಪಡೆದ ಶಾಸಕ ಅಬ್ದುಲ್ ಸತ್ತರ್ ಕಚೇರಿಯಲ್ಲಿದ್ದ 300 ಕುರ್ಚಿಗಳನ್ನು ತಮ್ಮ ಬೆಂಬಲಿಗರ ಸಹಾಯದೊಂದಿಗೆ ಹೊರಗೊಯ್ದಿದ್ದಾರೆ. ಈ ಕುರಿತಾಗಿ ಪ್ರಶ್ನಿಸಿದಾಗ ಕುರ್ಚಿಗಳನ್ನು ಸತ್ತರ್ ಇದನ್ನು ದಾನ ಮಾಡಿದ್ದರು ಎಂದು ವಾದಿಸಿದ್ದಾರೆ. ಶಾಸಕರ ಈ ನಡೆಯಿಂದಾಗಿ ಮೈತ್ರಿ ಪಕ್ಷಗಳ ಈ ಸಭೆಯನ್ನು ಬಳಿಕ NCP ಕಚೇರಿಯಲ್ಲಿ ನಡೆಸಲಾಯಿತು.

ಸತ್ತರ್ ಸಿಲೋದ್ ವಿಧಾನಸಭಾ ಕ್ಷೇತ್ರದ ಓರ್ವ ಪ್ರಭಾವಿ ಕಾಂಗ್ರೆಸ್ ನಾಯಕ. ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಔರಂಗಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷೆ ಇಟ್ಟುಕೊಂಡಿದ್ದರು. ಆದರೆ ಕೈ ಪಕ್ಷವು ಸಂಸದ ಸುಭಾಶ್ ಜಂಬದ್  ರಿಗೆ ಟಿಕೆಟ್ ನೀಡಿತ್ತು. ಇದು ಅಬ್ದುಲ್ ಸತ್ತರ್ ಆಕ್ರೋಶಕ್ಕೆ ಕಾರಣವಾಗಿತಸತ್ತರ್

‘ಹೌದು ಈ ಕುರ್ಚಿಗಳೆಲ್ಲ ನನ್ನದೇ. ಕಾಂಗ್ರೆಸ್ ಕಚೇರಿಯಲ್ಲಾಗುವ ಸಭೆಗೆಂದು ನಾನದನ್ನು ನೀಡಿದ್ದೆ. ಆದರೀಗ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಹೀಗಾಗಿ ನಾನು ನೀಡಿದ ಕುರ್ಚಿಗಳನ್ನು ಕೊಂಡೊಯ್ದಿದ್ದೇನೆ. ಪಕ್ಷ ಯಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆಯೋ ಅವರೇ ಕುರ್ಚಿಗಳ ವ್ಯವಸ್ಥೆ ಮಾಡಲಿ’
-ಅಬ್ದುಲ್ ಸತ್ತರ್

ಪ್ರಕರಣದ ಕುರಿತಾಗಿ ಮಹಾರಾಷ್ಟ್ರ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದು ‘ಸತ್ತರ್ ರವರಿಗೆ ಕುರ್ಚಿಗಳ ಅವಶ್ಯಕತೆ ಇತ್ತು ಅನಿಸುತ್ತದೆ. ಹೀಗಾಗಿ ಅವರು ಅವುಗಳನ್ನು ಸಾಗಿಸಿದ್ದಾರೆ. ಇದರಿಂದ ನಮಗೇನೂ ಬೇಜಾರಿಲ್ಲ. ಸತ್ತರ್ ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ’ ಎಂದಿದ್ದಾರೆ.

ಪ್ರಕಾಶ್ ರಾಜ್‌ಗೆ ಬಿಗ್ ಶಾಕ್; ನಟ ಪ್ರಕಾಶ್ ರಾಜ್​ ವಿರುದ್ಧ ಚುನಾವಣೆ ಆಯೋಗಕ್ಕೆ ದೂರು!! ಕಾರಣವೇನು ಗೊತ್ತೆ?

ಗೌರಿ ಲಂಕೇಶ್ ಮರಣಾನಂತರ ರಾಜಕೀಯ ಮುನ್ನಲೆಗೆ ಬಂದವರು ಪ್ರಕಾಶ್ ರಾಜ್. ಅಲ್ಲಿಯ ತನಕ ಸಿನೆಮಾ ರಂಗದಲ್ಲಿ ಬಿಟ್ಟು ಬೇರೆಲ್ಲೂ ಕಾಣಿಸಿಕೊಂಡಿರಲಿಲ್ಲ. ಗೌರಿ ಲಂಕೇಶ್ ಅವರ ಮರಣಾನಂತರ ರಾಜಕೀಯಕ್ಕೆ ಎಂಟ್ರಿ ಕೊಡಲು ಬಯಸಿದ್ದು ಪ್ರಕಾಶ್ ರಾಜ್. ಹೊಸವರ್ಷದಂದು ಟ್ವೀಟ್ ಮೂಲಕ ರಾಜಕೀಯಕ್ಕೆ ಬರುವ ಹೊಸ ಸುಳಿವೊಂದನ್ನು ಕೊಟ್ಟು ಈಗ ಅಧಕೃತವಾಗಿ ಪ್ರಕಾಶ್ ರಾಜ್ ಅವರು ರಾಜಕೀಯಕ್ಕೆ ಬಂದಿದ್ದಾರೆ!!

ಯಾವ ಪಕ್ಷದ ಜೊತೆ ಕೈಜೋಡಿಸಿ ಸ್ಪರ್ಧಿಸುತ್ತಾರೋ ಎಂಬ ಗೊಂದಲಕ್ಕೆ ತೆರೆ ಎಳೆದ ಪ್ರಕಾಶ್ ರಾಜ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಜೊತೆ ಕೈ ಜೋಡಿಸಬಹುದು ಎಂದು ಬಹುತೇಕರು ಮಾತನಾಡಿಕೊಳ್ಳುತ್ತಿರುವಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಹೌದು ಬೆಂಗಳೂರು ಸೆಂಟ್ರೆಲ್​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ನಟ ಪ್ರಕಾಶ್ ರಾಜ್ ಸ್ಪರ್ಧಿಸುತ್ತಿರುವುದು ಗೊತ್ತಿರುವ ವಿಷಯ ಆದ್ರೆ ಅದೇ ನಟನ ವಿರುದ್ಧ ರಾಜ್ಯ ಮುಖ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಇಂದು ಚುನಾವಣಾ ಆಯೋಗ್ಯಕ್ಕೆ ದೂರು ನೀಡಿದ ವಕೀಲ ಅರುಣ್, ನಟ ಪ್ರಕಾಶ ರಾಜ್​ ನಾಮಪತ್ರ ರದ್ದುಗೊಳಿಸುವಂತೆ ಬೆಂಗಳೂರು ಕೇಂದ್ರ ಆರ್​ಒ ಅವರಿಗೂ ದೂರು ನೀಡಿದ್ದು, ಅವರು ನಾಲ್ಕು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರನ ಶಾಂತಿನಗರ, ತಮಿಳನಾಡಿನ ವೇಲಚ್ಚೇರಿಯಲ್ಲಿ ಎರಡು ಕಡೆ ಹಾಗೂ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಒಟ್ಟು ನಾಲ್ಕು ಭಾಗದಲ್ಲಿ ವೋಟರ್ ಐಡಿಯನ್ನು ನಟ ಪ್ರಕಾಶ ರೈ ಹೊಂದಿದ್ದಾರೆ. ಎಲ್ಲಾ ಕಡೆಯಲ್ಲೂ ಪ್ರಕಾಶ್ ರಾಜ್ s/o ಮಂಜುನಾಥ್ ರೈ ಅಂತಲೇ ಇದ್ದು, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ವಕೀಲ ಅರಣ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸ್ಪೋಟಕ ಮಾಹಿತಿ; ಮೂರು ದಿನಗಳ ಹಿಂದೆಯಷ್ಟೇ ತೇಜಸ್ವಿನಿ ಅವರು ತೇಜಸ್ವಿ ಭೇಟಿ ಮಾಡಿದ್ದರು..?! ಏಕೆ ಗೊತ್ತಾ..?!!

ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರು ಮೂರು ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿಕೊಂಡಿದ್ದರು.

ತೇಜಸ್ವಿನಿ ಅನಂತ್ ಕುಮಾರ್ ಅವರು ಮೂರು ದಿನಗಳ ಹಿಂದೆ ಶಾಸಕ ರವಿಸುಬ್ರಮಣ್ಯ ಮನೆಗೆ ತೆರಳಿದ್ದರು. ಇದೇ ವೇಳೆ ರವಿಸುಬ್ರಮಣ್ಯ ಅಣ್ಣನ ಮಗ ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಜೊತೆಯೂ ಮಾತುಕತೆ ನಡೆಸಿದ್ದರು.

ಇದೇ ಸಂದಂರ್ಭದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣದ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಅವರ ಬಳಿಕ ನಮ್ಮ ಪ್ರಚಾರ ಹೆಚ್ಚು ಮಾಡಪ್ಪ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ತೇಜಸ್ವಿನಿಗೆ ಟಿಕೆಟ್ ನೀಡದೇ ತೇಜಸ್ವಿ ಸೂರ್ಯ ಅವರಿಗೆ ನೀಡಿದೆ.

ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಮತ್ತು ತೇಜಸ್ವಿ ಸೂರ್ಯ ಮಧ್ಯೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆಯ ಮಧ್ಯೆ ಬಿಜೆಪಿ ಹೈಕಮಾಂಡ್ ರವಿಸುಬ್ರಹ್ಮಣ್ಯ ಅವರಿಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ರವಿ ಸುಬ್ರಹ್ಮಣ್ಯ ಟಿಕೆಟ್ ಆಫರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಅಣ್ಣನ ಮಗನಾದ ತೇಜಸ್ವಿ ಸೂರ್ಯ ಅವರಿಗೆ ಹೈಕಮಾಂಡ್ ಟಿಕೆಟ್ ನೀಡಿದೆ.

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಕ್ಷೇತ್ರವನ್ನು ಅವರ ಪತ್ನಿ ತೇಜಸ್ವಿನಿ ಅವರಿಗೆ ನೀಡಲು ಪಕ್ಷದ ಮುಖಂಡರು ಮುಂದಾಗಿದ್ದರು. ಈ ಸಂಬಂಧ ದಕ್ಷಿಣ ಭಾಗದ ಬಿಜೆಪಿ ಶಾಸಕರು, ಮುಖಂಡರ ಸಭೆ ನಡೆಸಿದ ಬಳಿಕ ರಾಜ್ಯ ನಾಯಕರು ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

ಮಹತ್ವದ ಬೆಳವಣಿಗೆ ; ರಾಷ್ಟೀಯ ಜನತಾ ದಳಕ್ಕೆ ಗುಡ್ ಬೈ ಹೇಳಿ, ಬಿಜೆಪಿಗೆ ಸೇರ್ಪಡೆಯಾದ ರಾಷ್ಟ್ರ ರಾಜಕಾರಣದ ಇಬ್ಬರು ಪ್ರಬಲ ನಾಯಕರು!!

ರಾಷ್ಟ್ರೀಯ ಜನತಾ ದಳದ ಜಾರ್ಖಂಡ್ ರಾಜ್ಯ ಘಟಕದ ಮಾಜಿ ಅಧ್ಯಕ್ಷೆ ಅನ್ನಪೂರ್ಣಾದೇವಿ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸಮ್ಮುಖದಲ್ಲಿ ಅವರು ಕಮಲ ಪಾಳಯ ಸೇರಿದರು.

ಅವರು ಬಿಜೆಪಿ ಸೇರುತ್ತಿದ್ದಂತೆ ಆರ್‌ಜೆಡಿಯಿಂದ ಆರು ವರ್ಷ ಅಮಾನತು ಮಾಡಲಾಗಿದೆ. ವಿರೋಧ ಪಕ್ಷಗಳ ಜೊತೆಗಿನ ಸೀಟು ಹೊಂದಾಣಿಕೆ ಬಗ್ಗೆ ಅನ್ನಪೂರ್ಣ ತೀವ್ರ ಅಸಮಾಧಾನಗೊಂಡಿದ್ದರು.

ಅನ್ನಪೂರ್ಣಾ ಅವರ ಜೊತೆ ಮಾಜಿ ಶಾಸಕ ಜನಾರ್ದನ ಪಾಸ್ವಾನ್ ಅವರೂ ಬಿಜೆಪಿ ಸೇರ್ಪಡೆಗೊಂಡರು. ಈ ಮೂಲಕ ಮೋದಿ ಮೋಡಿಗೆ ಫಿದಾ ಆಗದವರೇ ಇಲ್ಲ ಎಂಬ ಮಾತು ಈಗ ಮತ್ತೊಮ್ಮೆ ಸಾಬೀತಾಗಿದೆ. ಜನಸಾಮಾನ್ಯರಿಂದ ಹಿಡಿದು ವಿಶ್ವದ ದೊಡ್ಡಣ್ಣ ಡೊನಾಲ್ಡ್ ಟ್ರಂಪ್ ತನಕ ದಿಗ್ಗಜರೆಲ್ಲ ಮೋದಿ ಮೋಡಿಗೆ ಫಿದಾ ಆದವರೇ!! ಬಾಲಿವುಡ್‌ನಲ್ಲೂ ಅನೇಕರು ಈಗಾಗಲೇ ಅನೇಕರು ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ಬಾಲಿವುಡ್‌ನ ಖ್ಯಾತ ನಟಿ ಮೌಶುಮಿ ಚ್ಯಾಟರ್ಜಿಯವರು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ದೊಡ್ಡ ಸಂಚಲನವನ್ನೇ ಮೂಡಿಸಿದ್ದರು.

1960 ಮತ್ತು 1970ರ ಹಿಂದಿ ಮತ್ತು ಬೆಂಗಾಳಿಯ ಸಾಕಷ್ಟು ಸಿನಿಮಾಗಳಲ್ಲಿ ಇವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕೋಲ್ಕತ್ತಾದ ಈಶಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಇವರು ಸ್ಪರ್ಧಿಸಿದ್ದರು.

ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಮತ್ತು ಎಡಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯುವ ಅದಮ್ಯ ಉತ್ಸಾಹದಲ್ಲಿರುವ ಬಿಜೆಪಿ, ಅಲ್ಲಿನ ಖ್ಯಾತನಾಮರನ್ನು ತನ್ನತ್ತ ಬರಮಾಡಿಕೊಳ್ಳುತ್ತಿದೆ. ಮ‌ಹಾಭಾರ‌ತ‌ದ‌ಲ್ಲಿ ದ್ರೌಪ‌ದಿಯಾಗಿ ನ‌ಟಿಸಿ  ಖ್ಯಾತಿ ಪಡೆದುಕೊಂಡಿದ್ದ  ನಟಿ ರೂಪಾ ಗಂಗೂಲಿ ಈಗಾಗಲೇ ಬಿಜೆಪಿ ಸೇರಿ, ರಾಜ್ಯಸಭೆಗೆ ಆಯ್ಕೆಗೊಂಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮೋದಿಯವರ ನಾಯಕತ್ವವನ್ನು ಮೆಚ್ಚಿ ಮಾಜಿ IAS ಅಧಿಕಾರಿಯೋರ್ವರು ಬಿಜೆಪಿಗೆ ಸೇರ್ಪಡೆಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹೌದು ಮಾಜಿ IAS ಅಧಿಕಾರಿ ಅಪರಾಜಿತಾ ಸಾರಂಗಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದರು. ನವದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕೇಂದ್ರ ಸಚಿವ ಧರ್ಮೆಂದ್ರ ಪ್ರಧಾನ್, ಒರಿಸ್ಸಾ ಬಿಜೆಪಿ ಅಧ್ಯಕ್ಷ ಬಸಂತ್ ಪಾಂಡಾ ಉಪಸ್ಥಿತರಿದ್ದರು. ಸಾರಂಗಿ ಅವರು ಒರಿಸ್ಸಾ ಕೇಡರ್‌ನ ಅಧಿಕಾರಿಯಾಗಿದ್ದು, ವಿಸ್ತೃತವಾಗಿ ಜನಸೇವೆ ಮಾಡಬೇಕು ಎಂಬ ಅದಮ್ಯ ಆಕಾಂಕ್ಷೆಯೊಂದಿಗೆ ಬಿಜೆಪಿಯನ್ನು ಸೇರಿದ್ದಾಗಿ ಹೇಳಿದ್ದಾರು. ಇದೀಗ ಬಾಲಿವುಡ್‌ನ ಖ್ಯಾತ ನಟಿ ಕೂಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ!!

ಇತ್ತೀಚೆಗಷ್ಟೇ ಮಾಜಿ ಇಸ್ರೋ ಅಧ್ಯಕ್ಷ ಮಾಧವನ್‌ ನಾಯರ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ತುಂಬು ಹೃದಯದಿಂದ ಹಾಡಿ ಹೊಗಳಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ರಾಜಕೀಯದ ಬದಲು ದೇಶ ನಿರ್ಮಾಣದಲ್ಲಿ ಪ್ರಧಾನ ಮಂತ್ರಿ  ಮೋದಿಗೆ ತಾಂತ್ರಿಕ ನೆಲಗಟ್ಟಿನಲ್ಲಿ ಸಹಕರಿಸಲು ಇಚ್ಛಿಸುವೆ”. “ನಾನು ರಾಜಕಾರಣಿಯಲ್ಲ. ಮುಂದೆಯೂ ರಾಜಕಾರಣಿ ಅಗಲಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿರ ಅಭಿವೃದ್ಧಿ ಮಂತ್ರದ ಕುರಿತಂತೆ ಮೆಚ್ಚುಗೆ ಬಂದು, ಅಮಿತ್ ಶಾ ಅವರ ಸಮ್ಮುಖದಲ್ಲಿ ಪಕ್ಷ ಸೇರಿಕೊಂಡೆ ಎಂದು ಹೇಳಿದ್ದರು. ರಾಜಕೀಯದ ಬದಲು ದೇಶ ನಿರ್ಮಾಣದಲ್ಲಿ ಪ್ರಧಾನ ಮಂತ್ರಿ  ಮೋದಿಗೆ ತಾಂತ್ರಿಕ ನೆಲಗಟ್ಟಿನಲ್ಲಿ ಸಹಕರಿಸಲು ಇಚ್ಛಿಸುವೆ” ಎಂದು ಹೇಳಿದ ಬಾಹ್ಯಾಕಾಶ ಸಂಸ್ಥೆಯ ಮಾಜಿ ಮುಖ್ಯಸ್ಥ ಜಿ ಮಾಧವನ್‌ ನಾಯರ್‌ ಬಿಜೆಪಿಗೆ ಸೇರ್ಪಡೆಯಾಗಿದ್ದರು!!

ಮಾಧವನ್‌ ನಾಯರ್‌ ಅವರು ಇಸ್ರೋ ಅಧ್ಯಕ್ಷರಾಗಿ ಗಣನೀಯ ಸಾಧನೆ ಸಲ್ಲಿಸಿದ್ದರು. ಚಂದ್ರಯಾನ 1, ಇನ್ಸಾಟ್‌, ಪಿಎಸ್‌ಎಲ್‌ವಿ, ಜಿಎಸ್‌ಎಲ್‌ವಿ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇಂತಹ ಮಹಾನ್ ವ್ಯಕ್ತಿ ಬಿಜೆಪಿಗೆ ಸೇರಿ ಆನೆಬಲ ತಂದಿದ್ದಾರೆ.