ಕುಟುಂಬ ರಾಜಕಾರಣ ಮಾಡಿದ್ದಕ್ಕೆ ಜನ ನನಗೆ ತಕ್ಕ ಪಾಠ ಕಲಿಸಿದ್ದಾರೆ : ದೇವೇಗೌಡ

ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲೇ ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದಲ್ಲೇ ಮೂವರು ಸ್ಪರ್ಧಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಜನರೂ ತಕ್ಕ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಕುಟುಂಬ ರಾಜಕಾರಣದ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂದೂ ಕುಟುಂಬ ರಾಜಕಾರಣ ಮಾಡಿಲ್ಲ. ಆದರೆ ಕಳೆದ ಚುನಾವಣೆಯಲ್ಲಿ ನಮ್ಮ ಕುಟುಂಬದ ಮೂವರು ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿದ್ದನ್ನು ನೋಡಿದ್ದೇನೆ. ಜನರೂ ತಕ್ಕ ಶಿಕ್ಷೆ ನೀಡಿದ್ದಾರೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗದವರನ್ನು ಗುರುತಿಸಿಕೊಂಡು ಬಂದೆ. ನಾನು ಚುನಾವಣೆಗೆ ನಿಂತಿದ್ದೂ ಆಕಸ್ಮಿಕ. ಇನ್ನು ನಾನು ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ನಿಖಿಲ್ ಕುಮಾರಸ್ವಾಮಿ ಒಬ್ಬ ಯುವಕನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದಾನೆ. ಒಳ್ಳೆಯ ಹೆಸರು ಪಡೆಯುತ್ತಿದ್ದಾನೆ. ನಿಖಿಲ್ ರಾಜಕೀಯಕ್ಕೆ ಬರುವುದು ಸಹ ಕನಸು ಮನಸಲ್ಲೂ ಗೊತ್ತಿರಲಿಲ್ಲ ಎಂದು ಹೇಳಿ ದೇವೇಗೌಡರು ಭಾವುಕರಾದರು.

ಯಾವ ಪಕ್ಷದವನಿಂದಲೂ ಆಗದ ಕೆಲಸ ಮಾಡಿ ಹವಾ ಇಟ್ಟ ಅಮಿತ್ ಷಾ!! 30 ವರ್ಷದಲ್ಲಿ ಇದೇ ಮೊದಲು!!

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕಣಿವೆ ರಾಜ್ಯದ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಅದಕ್ಕಿಂತಲೂ ಮುಖ್ಯ ವಿಷಯ ಎಂದರೆ ಇದೇ ಮೊದಲ ಬಾರಿಗೆ ಅಂದರೆ 30 ವರ್ಷಗಳಲ್ಲಿ ಗೃಹ ಸಚಿವರ ಭೇಟಿಯ ವೇಳೆ ಯಾವುದೇ ರೀತಿಯ ಬಂದ್‌ ಆಚರಣೆ ಮಾಡಲಾಗಿಲ್ಲ.
ಪ್ರತಿ ಬಾರಿಯೂ ಗೃಹ ಸಚಿವರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಪ್ರತಿಭಟನೆ, ಬಂದ್‌ ಇದ್ದೇ ಇರುತ್ತಿತ್ತು. ಆದರೆ ಅಮಿತ್ ಶಾ ಭೇಟಿಯ ವೇಳೆ ಯಾವುದೇ ರೀತಿಯ ಬಂದ್‌ ಆಚರಿಸಲಾಗಿಲ್ಲ.
ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಬದಿಗೊತ್ತಿದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ತಮ್ಮ ರಾಜಕೀಯ ಸಲಹೆಗಾರ ಮತ್ತು ಹಿರಿಯ ಅಧಿಕಾರಿಗಳ ಜತೆಗೂಡಿ ವಿಮಾನ ನಿಲ್ದಾಣಕ್ಕೆ ತೆರಳಿ ಅಮಿತ್‌ ಶಾ ಅವರನ್ನು ಬರ ಮಾಡಿಕೊಂಡರು.

ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದರೆ ಮಾತ್ರ ರಾಜ್ಯಪಾಲರು ಹೋಗಿ ಅವರನ್ನು ಬರ ಮಾಡಿಕೊಳ್ಳುವುದು ಇದುವರೆಗಿನ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಆ ಸಂಪ್ರದಾಯ ಮೀರಿ ಮಲಿಕ್‌ ಅವರು ಎರಡು ದಿನಗಳ ರಾಜ್ಯ ಭೇಟಿಗೆ ಆಗಮಿಸಿದ ಗೃಹ ಸಚಿವರನ್ನು ಬರ ಮಾಡಿಕೊಂಡಿದ್ದರು.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಅಮಿತ್ ಶಾ ಗುರುವಾರ ಉನ್ನತ ಮಟ್ಟದ ಸಭೆ ಕೂಡ ನಡೆಸಲಿದ್ದಾರೆ.

ಬ್ರೇಕಿಂಗ್ ನ್ಯೂಸ್ : ಮಂಡ್ಯದ ಏಳು ಮಂದಿ ಶಾಸಕರು ನಾಪತ್ತೆ?!

ಮಂಡ್ಯ: ಕೆಲ ದಿನಗಳಿಂದ ಜಿಲ್ಲೆಯ ರೈತರು ಕಾಲುವೆಗಳಿಗೆ ನೀರು ಹರಿಸುವಂತೆ ಪ್ರತಿಭಟನೆ ಕೈಗೊಂಡಿದ್ದಾರೆ. ಆದರೆ ಇಲ್ಲಿವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇಂದು ರೈತರು ಜಿಲ್ಲೆಯ ಶಾಸಕರು, ಸಚಿವರನ್ನ ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಫ್ಲೆಕ್ಸ್ ಹಾಕಿ ಕಬ್ಬು ಬೆಳೆ ಉಳಿವಿಗಾಗಿ ಪ್ರತಿಭಟಿಸುತ್ತಿದ್ದಾರೆ.

ನಗರದಲ್ಲಿ ಒಂದು ವಾರದಿಂದ ರೈತರು, ರೈತ ಸಂಘದ ನೇತೃತ್ವದಲ್ಲಿ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಸ್ಥಳಕ್ಕೆ ಜಿಲ್ಲೆಯ ಸಚಿವರು ಹಾಗೂ ಶಾಸಕರು ಭೇಟಿ ನೀಡದೆ ನಿರ್ಲಕ್ಷ ತೋರಿದ್ದಾರೆ. ಹೀಗಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಸಚಿವರು ಶಾಸಕರನ್ನ ಹುಡುಕಿಕೊಟ್ಟವರಿಗೆ ಬಹುಮಾನ ಎಂದು ಫ್ಲೆಕ್ಸ್ ಹಾಕಿ ಪ್ರತಿಭಟಿಸುತ್ತಿದ್ದಾರೆ

ಎದ್ದೇಳು, ಹೋಗೋಣ.. ಸಾವನ್ನಪ್ಪಿದ ಕರುವಿನ ಮುಂದೆ ತಾಯಿ ಹಸು ಕಣ್ಣೀರು

ಬಾಗಲಕೋಟೆ: ನಗರದ ಎಕ್ಷಟೆನ್ಶನ್ ಏರಿಯಾದಲ್ಲಿ ಬುಧವಾರ ರಾತ್ರಿ ವೇಳೆ ಹೃದಯಸ್ಪರ್ಶಿ ಸನ್ನಿವೇಶ ನಡೆದಿದೆ.

ಬುಧವಾರ ರಾತ್ರಿ ಒಂದು ಆಕಳು ಕರು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಹಸು ಕರುವನ್ನು ಎರಡು ಗಂಟೆಗಳ ಕಾಲ ಅದನ್ನು ಎದ್ದೇಳಿಸುವ ಪ್ರಯತ್ನ ಮಾಡಿದೆ. ಸತ್ತುಬಿದ್ದ ಕರುವನ್ನು ಎದ್ದೇಳು ಎನ್ನುವಂತೆ ಹಸು ನಾಲಿಗೆಯಿಂದ ಸವರಿ ತನ್ನ ಮಮತೆಯ ಕಡಲನ್ನೇ ಹರಿಸಿದೆ.

ತನ್ನ ಕರುವನ್ನು ಯಾರಾದರೂ ಹೊತ್ತೊಯ್ಯಹುದೆಂಬ ಕಾರಣಕ್ಕೆ ಹಸು ಕರುವನ್ನು ಬಿಟ್ಟು ಕದಲದೆ ಕಾಯುತ್ತಾ ನಿಂತಿತ್ತು. ಕರುವಿನ ಹತ್ತಿರ ಯಾರನ್ನು ಸುಳಿಯಲು ಬಿಡದೆ ಕಾವಲಾಗಿ ಕಾಯ್ದಿದೆ. ಹತ್ತಿರ ಬಂದರೆ ಹಾಯೋಕೆ ಬರುತ್ತಿದ್ದ ಹಸು ತನ್ನ ಕರುವಿನ ಮೇಲೆ ತನ್ನು ಕರುಳ ಬಳ್ಳಿ ಪ್ರೀತಿಯನ್ನು ವ್ಯಕ್ತಪಡಿಸಿದೆ.

ಬ್ರೆಡ್ ಆಸೆ ತೋರಿಸಿದರೂ ಕರುವನ್ನು ಬಿಟ್ಟು ಮೂರು ಅಡಿ ತೆರಳದ ಹಸುವಿನ ಮಮತೆ ನೋಡುಗರ ಮನ ಮಿಡಿಯುವಂತೆ ಮಾಡಿತ್ತು. ಎರಡು ಗಂಟೆಗಳ ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಗೋ ರಕ್ಷಕ ಸಮಿತಿಯವರು ಹಸುವಿಗೆ ಬ್ರೆಡ್ ಕಡೆ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ಕರುವನ್ನು ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ದಿದ್ದಾರೆ.

ಕಂದನಿಗಾಗಿ ಹಸು ಅಂಬಾ ಎಂದು ಗೋಗರೆದ ದೃಶ್ಯ ತಾಯಿ ಕರುಳು ಆಕಾಶಕ್ಕೂ ಮಿಗಿಲಾದದ್ದು ಎಂಬುದನ್ನು ಸಾಬೀತು ಮಾಡಿದೆ. ಪ್ರಾಣಿ ಪಕ್ಷಿಗಳಿಗೂ ತಮ್ಮ ಮಕ್ಕಳ ಮೇಲೆ ಎಷ್ಟೊಂದು ಪ್ರೀತಿ ಇರುತ್ತೆಂದು ಜನರ ಹೃದಯ ಕಲುಕಿದ ಸನ್ನಿವೇಶ ಅಲ್ಲಿ ಸೃಷ್ಟಿಯಾಗಿತ್ತು.

ಹಿಂದೂ ಜೈನ ಯುವಕನ ಕೈಹಿಡಿದ ಮುಸ್ಲಿಂ ಸಂಸದೆ ನುಸ್ರತ್ ಜಹಾನ್ ರೋಚಕ ಸ್ಟೋರಿ ಇಲ್ಲಿದೆ!!

ನವದೆಹಲಿ – ಪಶ್ಚಿಮ ಬಂಗಾಳ ನಟಿ, ತೃಣಮೂಲ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಸಂಸತ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ನುಸ್ರತ್ ಜಹಾನ್ ಅವರು ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯಲ್ಲಿ ಸಪ್ತಪದಿ ತುಳಿದಿದ್ದರು. ತಮ್ಮ ವಿವಾಹದ ಬಗ್ಗೆ ಇಂದು ಬೆಳಗ್ಗೆ ನುಸ್ರತ್ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. ನುಸ್ರತ್ ಮದುವೆ ಹಿನ್ನೆಲೆಯಲ್ಲಿ ಸಂಸತ್ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಟ್ವೀಟರ್ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿರುವ ನುಸ್ರತ್, ನಿಖಿಲ್ ಜೈನ್ ಜೊತೆಗಿನ ವಿವಾಹ ತುಂಬಾ ಖುಷಿಕೊಟ್ಟಿದೆ ಎಂದು ಬರೆದುಕೊಂಡಿದ್ದರು. ಇಂದು ಕುಂಕುಮವಿಟ್ಟು ಅಪ್ಪಟ ಭಾರತೀಯ ನಾರಿಯಂತೆ ಮಿಂಚಿ ಸಾಕಷ್ಟು ಜನರ ಮನಗೆದ್ದಿದ್ದಾರೆ.

ನಾವು ಹೇಳಿದರೆ ಮುಖ್ಯಮಂತ್ರಿಯೂ ಕೇಳ್ಬೇಕು ಅವರ ಅಪ್ಪಾನೂ ಕೇಳ್ಬೇಕು! ಗುಡುಗಿದ ಶ್ರೀಗಳ ವೀಡಿಯೋ ವೈರಲ್!

ಬೆಂಗಳೂರು: ನಮ್ಮ ವಾಲ್ಮೀಕಿ ಸಮುದಾಯದ ಶಾಸಕರು ಪಕ್ಷಾತೀತವಾಗಿ ರಾಜೀನಾಮೆ ಕೊಟ್ಟರೆ ಮುಖ್ಯಮಂತ್ರಿ ಗೊಟಕ್ ಅಂದುಬಿಡ್ತಾರೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಯನ್ನು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, 17 ಮಂದಿ ವಾಲ್ಮೀಕಿ ಸಮುದಾಯದ ಶಾಸಕರು ಇದ್ದಾರೆ. ಇವರು ರಾಜೀನಾಮೆ ನೀಡಿದರೆ ಸರ್ಕಾರ ಉರುಳುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ವಿರುದ್ಧ ಸಿಡಿಮಿಡಿಗೊಂಡ ಸ್ವಾಮೀಜಿ, ಸಿಎಂ ಸರ್ಕಾರ ಉಳಿಸಲು ಕಾಲು ಹಿಡಿಯುತ್ತಾರೆ ಅನ್ನೋದು ನಂಗೆ ಗೊತ್ತಿದೆ. ಅವರು ಸಿಎಂ ಆಗಿ ಮುಂದುವರೆಯಬೇಕೇ? ಬೇಡವಾ ಎಂದು ಇವತ್ತು ನಿರ್ಧಾರವಾಗಲಿ. ನಾವು ಹೇಳಿದರೆ ಮುಖ್ಯಮಂತ್ರಿಯೂ ಕೇಳಬೇಕು ಅವರಪ್ಪನೂ ಕೇಳಬೇಕು ಎಂದು ಎಂದು ವಾಗ್ದಾಳಿ ನಡೆಸಿದರು. ಈ ವಿಚಾರವಾಗಿ ಮಾತನಾಡಲು ಬಂದಿದ್ದ ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಮುಂದೆಯೇ ಮುಖ್ಯಮಂತ್ರಿಗಳಿಗೆ ಅವಾಜ್ ಹಾಕಿದ ಸ್ವಾಮೀಜಿ, ನಮ್ಮವರು ರಾಜೀನಾಮೆ ಕೊಟ್ಟರೆ ಸರ್ಕಾರ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಗೆ ಸುದೀಪ್ ಬರಬೇಕಾಗಿತ್ತು. ಆದರೆ ಅವರು ಶೂಟಿಂಗ್‍ನಲ್ಲಿದ್ದಾರೆ. ಅದ್ದರಿಂದ ಬಂದಿಲ್ಲ ಅವರು ವಿಡಿಯೋ ಮೆಸೇಜ್ ಮಾಡಿ ಕಳಿಸಿದ್ದಾರೆ. ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು. ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸಿಡಿದ ಜನರು ಡಿಸಿಎಂಗೆ ಮಾತನಾಡಲು ಬಿಡದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗದ್ದಲ ಉಂಟುಮಾಡಿದರು.

ಬೀದಿ ಬದಿ ಸಮೋಸ ವ್ಯಾಪಾರಿಗಳಿಗೆ IT ನೋಟೀಸ್! ಇವರ ಆದಾಯ ಕೇಳಿದ್ರೆ ಶಾಕ್ ಆಗ್ತೀರಾ!

ಲಕ್ನೋ: ಬೀದಿಯಲ್ಲಿ ಕಚೋರಿ, ಸಮೋಸ ಮಾರಾಟದ ಮೂಲಕ ವಾರ್ಷಿಕ 60 ಲಕ್ಷದಿಂದ 1 ಕೋಟಿ ರೂ. ಆದಾಯ ಪಡೆಯುತ್ತಿದ್ದ ಬೀದಿ ವ್ಯಾಪಾರಿ ಮೇಲೆ ತೆರಿಗೆ ಇಲಾಖೆಯ ಕಣ್ಣುಬಿದ್ದಿದ್ದು, ವ್ಯಾಪಾರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಉತ್ತರ ಪ್ರದೇಶದ ಅಲಿಗಢ್‍ನಲ್ಲಿರುವ ಬೀದಿ ವ್ಯಾಪಾರಿ ಮುಖೇಶ್ ಅವರು ಕೇವಲ ಕಚೋರಿ, ಸಮೋಸ ಮಾರಾಟ ಮಾಡುವುದರ ಮೂಲಕವೇ ಕೋಟ್ಯಧಿಪತಿ ಆಗಿದ್ದಾರೆ.

ಹೌದು. ಅಲಿಗಢ್‍ನಲ್ಲಿರುವ ಸೀಮಾ ಸಿನಿಮಾ ಹಾಲ್ ಬಳಿ `ಮುಖೇಶ್ ಕಚೋರಿ’ ಹೆಸರಿನ ಅಂಗಡಿಯನ್ನು ಮುಖೇಶ್ ನಡೆಸುತ್ತಿದ್ದಾರೆ. ಇವರು ತಯಾರಿಸುವ ಕಚೋರಿ, ಸಮೋಸದ ರುಚಿಗೆ ಇಲ್ಲಿನ ತಿಂಡಿ ಪ್ರಿಯರು ಫಿದಾ ಆಗಿದ್ದು, ಪ್ರತಿದಿನ ಇಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ. ಕೆಲವು ದಿನಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಗೆ ಮುಖೇಶ್ ಆದಾಯದ ಮೇಲೆ ಯಾರೋ ದೂರು ನೀಡಿದ್ದರು. ಹೀಗಾಗಿ ರಾಜ್ಯ ತೆರಿಗೆ ಇಲಾಖೆಯು ಮುಖೇಶ್ ಮಾರಾಟದ ಬಗ್ಗೆ ದೂರು ಸ್ವೀಕರಿಸಿ, ಈ ಬಗ್ಗೆ ಪರಿಶೀಲನೆ ನಡೆಸಲು ಕೆಲವು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿತ್ತು. ಬಳಿಕ ತೆರಿಗೆ ಅಧಿಕಾರಿಗಳು ಪಕ್ಕದ ಅಂಗಡಿಯಲ್ಲಿ ನೆಲೆಯೂರಿ ಮುಖೇಶ್ ಪ್ರತಿದಿನ ಎಷ್ಟು ವ್ಯಾಪಾರ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಿ ದಿನನಿತ್ಯದ ವ್ಯವಹಾರದ ಲೆಕ್ಕಾಚಾರ ಹಾಕಿದ್ದಾರೆ.

ವೀಡಿಯೋ ನೋಡಿ : ಪ್ರತಾಪ್ ಸಾರಂಗಿ ಡೈಲಾಗ್ ಕೇಳಿ ಜೋರಾಗಿ ನಗೆ ಬೀರಿದ ಪ್ರಧಾನಿ ಮೋದಿ!

ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ೧೭ ನೇ ಲೋಕಸಭಾ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುತ್ತಾ ಮಾತನಾಡಿದ ಅವರು ಜೆ ಎನ್ ಯು ಅವರಣದಲ್ಲಿ ದೇಶ ದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು “ಭಾರತ್ ಕೆ ತುಕ್ಡೆ ತುಕ್ಡೆ ಕರ್ನೆ ತಕ್ ಜಂಗ್ ರಹೇಗಿ ‘, ಮತ್ತು’ ಪಾಕಿಸ್ತಾನ ಜಿಂದಾಬಾದ್, ಅಫ್ಜಲ್ ಗುರು ಜಿಂದಾಬಾದ್ ‘ಎಂದು ಹೇಳುವ ಜನರು, ಈ ದೇಶದಲ್ಲಿ ವಾಸಿಸುವ ಹಕ್ಕು ಅವರಿಗೆ ಇದೆಯೇ? ಎಂದು ಪ್ರಶಿಸಿದ್ದಾರೆ.ಇನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಆಡಳಿತವನ್ನು ಸಮರ್ಥಿಸಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ನಗೆ ಬೀರಿದ್ದಾರೆ.