ಕಾಂಗ್ರೆಸ್ಸಿಗೆ ಬಿಗ್ ಶಾಕ್; ಬಿಜೆಪಿ ಸೇರ್ಪಡೆಗೆ ಸಜ್ಜಾದ ಮೂವರು NCP, ಓರ್ವ ಕಾಂಗ್ರೆಸ್ ಶಾಸಕ

ಇತ್ತ ಕರ್ನಾಟಕದಲ್ಲಿ ದೋಸ್ತಿಯಾಗಿ ಅಧಿಕಾರಕ್ಕೆ ಏರಿದ್ದ ಕಾಂಗ್ರೆಸ್ ಕೆಳಕ್ಕೆ ಇಳಿದು ಬಿಜೆಪಿ ಪಟ್ಟಕ್ಕೇರಿದೆ. ಅತ್ತ ಮಹಾರಾಷ್ಟ್ರದಲ್ಲಿ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಕಳೆದ 2 ದಿನಗಳ ಹಿಂದಷ್ಟೇ NCP ನಾಯಕ ಬಿಜೆಪಿ ಸೇರಿದ ಬೆನ್ನಲ್ಲೇ ಮತ್ತೆ ಮೂವರು ಕಮಲ ಪಾಳಯ ಸೇರಲು ಸಿದ್ಧರಾಗಿದ್ದಾರೆ. ಇವರೊಂದಿಗೆ ಓರ್ವ ಕಾಂಗ್ರೆಸ್ ಶಾಸಕರೂ ಕೂಡ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.

NCPಯ ಶಿವೇಂದ್ರ ಸಿಂಗ್, ವೈಭವ್ ಪಿಚದ್, ಸಂದೀಪ್ ನಾಯ್ಕ್, ಕಾಂಗ್ರೆಸ್ ಶಾಸಕ ಕಾಳಿದಾಸ್ ಕೊಲಂಬ್ಕರ್ ಜುಲೈ 31 ರಂದು ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಇದರ ಬೆನ್ನಲ್ಲೇ ಇದಕ್ಕೂ ಹೆಚ್ಚಿನ ಸಂಖ್ಯೆ ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಸಚಿವರೋರ್ವರು ಹೇಳಿದ್ದು, ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಕಾಂಗ್ರೆಸ್ ಹಾಗೂ ಶರದ್ ಪವಾರ್ ನೇತೃತ್ವದ NCPಗೆ ಭಾರಿ ಹಿನ್ನಡೆ ಎದುರಾಗುತ್ತಿದೆ.

2019ರ ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಇಲ್ಲಿ ಕಮಲ ಪಾಳಯ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸಿದೆ.

ಗುಡ್ ನ್ಯೂಸ್; ಯಡಿಯೂರಪ್ಪ ಸರ್ಕಾರದಿಂದ ನಾಡಿನ ಜನತೆಗೆ ಭರ್ಜರಿ ಬಂಪರ್ ಗಿಫ್ಟ್!!

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ನೇಕಾರರ ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೀಗ ಮೀನುಗಾರರಿಗೂ ಬಂಪರ್‌ ಕೊಡುಗೆ ನೀಡಿದ್ದಾರೆ. ಮೀನುಗಾರರ 60.58 ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳಿಗೆ ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲಾಗಿದೆ. 2017-18, 2018-19ನೇ ಸಾಲಿನಲ್ಲಿ ಮೀನುಗಾರರು ಪಡೆದ ಸಾಲ ಮನ್ನಾ ಮಾಡಿ ಆದೇಶಿಸಲಾಗಿದೆ. ಈ ಆದೇಶದಿಂದ 23507 ಮೀನುಗಾರರಿಗೆ ಅನುಕೂಲವಾಗಲಿದೆ.

ಮೀನುಗಾರರು ಮತ್ತು ವಿಶೇಷವಾಗಿ ಮಹಿಳಾ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ , ಮೀನಿನ ಸಂರಕ್ಷಣೆ ಮತ್ತು ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ.2ರಷ್ಟುಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ 50 ಸಾವಿರ ರು.ವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ.

ಪಡೆದ ಸಾಲವನ್ನು 24 ತಿಂಗಳಲ್ಲಿ ಬ್ಯಾಂಕುಗಳಿಗೆ ಮರುಪಾವಿತಿಸಿದ ಮೀನುಗಾರರು ವ್ಯತ್ಯಾಸದ ಬಡ್ಡಿ ಮೊತ್ತಕ್ಕೆ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಕಳೆದ ಮೂರು ವರ್ಷದ ಅವಧಿಯಲ್ಲಿ ಈ ರೀತಿ ಪಡೆದ ಸಾಲವನ್ನು ಅನೇಕ ಮೀನುಗಾರರು ಪಾವತಿ ಮಾಡದ ಕಾರಣ 60.58 ಕೋಟಿ ರು. ಸಾಲ ವಸೂಲಿ ಬಾಕಿ ಇತ್ತು. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಈ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನು ಕುಡಿದರೆ ನಿಮಗೆ ಥೈರಾಯಿಡ್ ಸಮಸ್ಯೆ ಎಂದಿಗೂ ಬರುವುದಿಲ್ಲ!! ಏನದು ಗೊತ್ತೆ? ಸಂಪೂರ್ಣ ಮಾಹಿತಿಗಾಗಿ ಇದನ್ನು ಓದಿ

ಬ್ಯೂಸಿ ಜೀವನ ಮತ್ತು ಅನಾರೋಗ್ಯದ ಆಹಾರ ತಿಂದ ಕಾರಣ ಥೈರಾಯಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಅಧ್ಯಯನಗಳ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಹತ್ತು ಪಟ್ಟು ಕಾಣಿಸಿಕೊಳ್ಳುತ್ತದೆ. ಥೈರಾಯಿಡ್ ಕಂಟ್ರೋಲಿಗೆಜನರು ಎಕ್ಸರೈಸ್ ಮತ್ತು ಮದ್ದು ಸೇವಿಸುತ್ತಾರೆ. ಆದರೆ ನೀವು ಮನೆಯಲ್ಲಿಯೇ ಇದಕ್ಕೆ ಮದ್ದು ಮಾಡಿಟ್ಟುಕೊಳ್ಳಬಹುದು. ನಾವು ನಿಮಗೆ ಇಂತಹ ಒಂದುಮದ್ದು ತಿಳಿಸುತ್ತೇವೆ. ಇದರಿಂದ ನಿಮ್ಮ ಥೈರಾಯಿಡ್‍ನ್ನು ಬ್ಯಾಲೆನ್ಸ್‍ನಲ್ಲಿ ಇಟ್ಟು ಕೊಳ್ಳಬಹುದು.
ಥೈರಾಯಿಡ್ ಎಂದರೇನು?

ದೇಹದಲ್ಲಿ ಥೈರಾಯಿಡ್ ಗ್ರಂಥಿ ಇದೆ. ಇದರಿಂದಥೈರಾಡಕ್ಸಿನ್ ಟಿ-4 ಟ್ರಿಡೊಥೈರೊನಾಯಿನ್ ಟಿ-3 ಹಾರ್ಮೊನ್ ಸ್ರವಿಸುತ್ತವೆ. ಇದು ಶರೀರದಲ್ಲಿ ಶಕ್ತಿಯನ್ನು ನಿಯಂತ್ರಿಸಿ ರಕ್ತ ಸಂಚಾರ, ಉಸಿರಾಟ ಮತ್ತು ಡೈಜೇಶನ್‍ನಂತಹ ಅಗತ್ಯ ಕಾರ್ಯಗಳಿಗೆ ಸಹಕಾರ ಮಾಡುತ್ತದೆ. ಈ ಗ್ರಂಥಿಯಲ್ಲಿ ಹಾನಿಯಾಗಿ ಥೈರಾಯಿಡ್ ರೋಗ ಬರುತ್ತದೆ. ಮಹಿಳೆಯರಲ್ಲಿ ಹೆಚ್ಚು ಯಾಕೆ ಕಾಣಿಸಿಕೊಳ್ಳುತ್ತಿದೆ.

ಥೈರಾಯಿಡ್ ಕಾರ್ಬೊಹೈಡ್ರೇಟ್ಸ್, ಅಯೊಡಿನ್ ಮತ್ತು ವಿಟಮಿನ್ ಬಿ 12ಕೊರತೆ , ಹೆಚ್ಚು ಉಪ್ಪು ಅಥವಾ ಸಮುದ್ರದ ಆಹಾರ ತಿನ್ನುವುದರಿಂದ ಈರೋಗ ಕಂಡು ಬರುತ್ತದೆ. ಇದಲ್ಲದೆ ಹಾಸಿಮೊಟೊ ರೋಗದಕಾರಣದಿಂದಲೂ ಮಹಿಳೆಯರಲ್ಲಿ ಥೈರಾಯಿಡ್ ಅಪಾಯವಿದೆ.

ರೋಗ ಲಕ್ಷಣ

ಹೈಪರ್ ಥೈರಾಯಿಡ್‍ನಿಂದ ಭಾರ ಕಡಿಮೆಯಾಗುವುದು. ತಾಪವನ್ನು ಸಹಿಸಲುಆಗದಿರುವುದು. ಸರಿಯಾಗಿ ನಿದ್ದೆ ಬರದಿರುವುದು. ಬಾಯಾರಿಕೆ ಆಗುವುದು. ಅತಿಹೆಚ್ಚು ಬೆವರುವುದು. ಕೈಕಂಪಿಸುವುದು. ಎದೆ ಬಡಿತ ಹೆಚ್ಚಾಗುವುದು. ದುರ್ಬಲತೆ, ಚಿಂತೆ, ಮತ್ತು ನಿದ್ರೆಇಲ್ಲದಿರುವುದು ಸೇರಿದೆ. ಹೈಪೊಥೈರಾಯಿಡ್‍ನಿಂದ ಆಯಾಸ, ಮಲಬದ್ಧತೆ, ನಿಧಾನ ಹೃದಯ ಬಡಿತ, ಚಳಿ, ಚರ್ಮ ಒಣಗುವುದು, ಶೀತ, ಅನಿಯಮಿತ ತಿಂಗಳ ಮುಟ್ಟು

ಮನೆಯಲ್ಲಿ ನಿಯಂತ್ರಿಸಿ:

ಭಾರ ಕಡಿಮೆ ಮತ್ತು ಡೈಜೇಶನ್ ಆಗದಿರುವುದು ಥೈರಾಯಿಡನ್ನು ನಿಯಂತ್ರಿಸಲು ಕೊತ್ತಂಬರಿ ಬೀಜವನ್ನು ಬಳಸುವುದು ಹೆಚ್ಚು ಉಪಯುಕ್ತ . ಥಐರಾಯಿಡ್ ರೋಗವನ್ನು ದಿನಾಲು ಇದರ ನೀರು ಕುಡಿದು ಸರಿದೂಗಿಸಬಹುದು. ಹದಿನೈದು ದಿವಸಗಳಲ್ಲಿ ಬ್ಯಾಲೆನ್ಸ್ ಆಗಬಹುದು. ಇಷ್ಟೇ ಅಲ್ಲ. ಅದರ ನೀರು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಮೊಡವೆಯಿಂದ ರಕ್ಷಣೆ ನೀಡುತ್ತದೆ

ಕೊತ್ತಂಬರಿಯ ನೀರು ಹೇಗೆ ಮಾಡಬೇಕು:

ಎರಡು ಚಮಚ ಕೊತ್ತಂಬರಿ ಬೀಜವನ್ನು ರಾತ್ರೆಯಿಡಿ ಒಂದು ಗ್ಲಾಸು ನೀರಿನಲ್ಲಿ ಹಾಕಿಡಿ. ಬೆಳಗ್ಗೆ ನೀರನ್ನು ಐದು ನಿಮಿಷ ಬಿಸಿಮಾಡಿ. ಮತ್ತು ಅದು ಸೊಸಿ ಸ್ವಲ್ಪಸ್ವಲ್ಪ ಕುಡಿಯಿರಿ.

ಹೀಗೆ ಕುಡಿಯಿರಿ.ಒಂದು ವೇಳೆ ನೀವು ಥೈರಾಯಿಡ್ ಕಂಟ್ರೋಲ್ ಮಾಡಲು ಮದ್ದು ಸೇವಿಸುತ್ತಿದ್ದರೆ ಮೊದಲು ಖಾಲಿ ಹೊಟ್ಟೆಯಲ್ಲಿ ಮದ್ದು ಕುಡಿಯಿತಿ ನಂತರ ಮೂವತ್ತು ನಿಮಿಷದ ನಂತರ ಈ ನೀರು ಕುಡಿಯಿರಿ. ನಂತರ 30 ನಲ್ವತ್ತೈದು ನಿಮಿಷದ ನಂತರ ನಾಷ್ಟಾ ಮಾಡಿರಿ. ನಿಮಗೆ ಇಷ್ಟವಾದರೆ ದಿನದಲ್ಲಿ ಎರಡು ಸಲ ಕುಡಿಯಬಹುದು. ಸುಮಾರು 30-45 ದಿನಗಳಲ್ಲಿ ನಿಯಮಿತವಾಗಿ ಸೇವಿಸಬೇಕು. ನಂತರ ಥೈರಾಯಿಡ್‍ನ್ನು ಚೆಕ್‍ಮಾಡಿಸಿಕೊಳ್ಳಿರಿ.

ಹೊಸ ಇತಿಹಾಸ ಸೃಷ್ಟಿಸಿ ಎಸ್‌ಐ ಆಗಿ ನೇಮಕಗೊಂಡ ದೇಶದ ಮೊದಲ ಮಂಗಳ ಮುಖಿ ಪ್ರೀತಿಕಾಳ ಬಗ್ಗೆ ನಿಮಗೆ ಗೊತ್ತಾ??

ಉದ್ಯೋಗಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಮಂಗಳಮುಖಿ ಪ್ರೀತಿಕಾ ಯಾಶಿನಿ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2016ರಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕವಾಗುವ ಮೂಲಕ ದೇಶದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪ್ರೀತಿಕಾ ಪಾತ್ರರಾಗಿದ್ದಾರೆ.
ಚೆನ್ನೈ ಸಮೀಪದ ವಂಡಲೂರಿನಲ್ಲಿ 1028 ಮಂದಿ ಅಭ್ಯರ್ಥಿಗಳ ಜೊತೆ ಪ್ರೀತಿಕಾ 1 ವರ್ಷ ತರಬೇತಿಯನ್ನು ಪಡೆದು 2016ರಲ್ಲೇ ಉದ್ಯೋಗಕ್ಕೆ ಸೇರಿದ್ದಾರೆ. ಮೊದಲ ದಿನ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೆ, ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಹಕಾರ ನೀಡಿದರು ಎಂದು ಪ್ರೀತಿಕಾ ಹೇಳಿದ್ದಾರೆ. ನೇಮಕವಾದ ತಕ್ಷಣ ಪ್ರತಿಕ್ರಿಯಿಸಿದ ಪ್ರೀತಿಕಾ ಸಬ್ ಇನ್ಸ್ ಪೆಕ್ಟರ್ ಉದ್ಯೋಗ ಕೊನೆಗೂ ಸಿಕ್ಕಿದೆ, ಮುಂದೆ ಯುಪಿಎಸ್‍ಸಿ ಪರೀಕ್ಷೆ ಬರೆದು ಐಪಿಎಸ್ ಆಗಿ ಆಯ್ಕೆಯಾಗಬೇಕೆಂಬ ಕನಸು ಇದೆ ಎಂದಿದ್ದಾರೆ.

ಗಂಡು ಮಗುವಾಗಿ ಹುಟ್ಟಿ ಬೆಳೆದ ಪ್ರದೀಪ್ ಕುಮಾರ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಓದಿದ್ದರು. ನಂತರ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮೂಲಕ ಪ್ರೀತಿಕಾ ಆಗಿ ಬದಲಾದರು. ಮಗ ಲಿಂಗಪರಿವರ್ತನೆಯಾಗಿದ್ದನ್ನು ನೋಡಿ ಪೋಷಕರು ಶಾಕ್ ಆಗಿದ್ದರು. ತಂದೆ ತಾಯಿ ಮಗನಾಗಿ ಬದಲಾಗಲು ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರೀತಿಕಾ ತನ್ನ ಹೆತ್ತವರನ್ನೂ ತೊರೆದು ಬಂದಿದ್ದರು. ಮಂಗಳಮುಖಿಯರ ಜೊತೆ ಸೇರಿಕೊಂಡಿದ್ದ ಇವರು ಆರಂಭದಲ್ಲಿ ಮಹಿಳೆಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಉದ್ಯೋಗ ಮಾಡಿಕೊಂಡಿದ್ದರು.
ಏನಾಗಿತ್ತು?
2015ರಲ್ಲಿ ಪ್ರೀತಿಕಾ ಪೊಲೀಸ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹೆಣ್ಣು ಅಥವಾ ಗಂಡು ವಿಭಾಗಕ್ಕೆ ಸೇರದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪ್ರೀತಿಕಾ ಮದ್ರಾಸ್ ಹೈಕೋರ್ಟ್ ಮೆಟ್ಟಲು ಹತ್ತಿದರು. ಮದ್ರಾಸ್ ಹೈಕೋರ್ಟ್ ಮುಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ಹೇಳಿ ತಮಿಳುನಾಡು ಸರ್ಕಾರಕ್ಕೆ ಆದೇಶ ನೀಡಿತ್ತು.

ಸತತ ಕಾನೂನು ಹೋರಾಟದ ಬಳಿಕ ಕೊನೆಗೂ ತಮಿಳುನಾಡಿನ ಮಂಗಳಮುಖಿ ಪ್ರತೀಕಾ ಯಶಿನಿ ದೇಶದ ಮೊದಲ ತೃತೀಯಲಿಂಗಿ ಪೊಲೀಸ್ ಅಧಿಕಾರಿಯಾಗಿ 2016ರಲ್ಲಿ ನೇಮಕಗೊಂಡಿದ್ದಾರೆ. ಮೊದಲಿಗೆ ಪ್ರದೀಪ್ ಕುಮಾರ್ ಆಗಿದ್ದ ಇವರಿಗೆ ಲಿಂಗ ಪರಿವರ್ತನೆಯ ಬಳಿಕ ಪ್ರತೀಕಾ ಯಶಿನಿ ಎಂದು ಮರುನಾಮಕರಣಮಾಡಲಾಗಿತ್ತು.
ಆದರೆ ಶಾಲಾ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳಲ್ಲಿನ ಹೆಸರಿಗೂ ಅವರ ಇಂದಿನ ಹೆಸರಿಗೂ ವ್ಯತ್ಯಾಸವಿದ್ದ ಕಾರಣ ಪ್ರತೀಕಾಳಿಗೆ ಎಸ್ಐ ಹುದ್ದೆಯನ್ನು ನಿರಾಕರಿಸಲಾಗಿತ್ತು.ಹೀಗಾಗಿ ಕೋರ್ಟ್ ಮೆಟ್ಟಿಲೇರಿದ್ದ ಪ್ರತೀಕಾಳಿಗೆ ಈಗ ಕೊನೆಗೂ ಜಯಸಿಕ್ಕು 2016ರಲ್ಲಿ ಎಸ್‌ಐ ಆಗಿ ನೇಮಕಗೊಂಡಿದ್ದಾರೆ. ಲಿಂಗ ಪರಿವರ್ತನೆಯಾಗಿರುವುದನ್ನು ವೈದ್ಯರು ದೃಢಪಡಿಸಿದ್ದು, ಮತ್ತು ಆಕೆ ಈ ಹುದ್ದೆಗೆ ಸಮರ್ಥಳಾಗಿರುವ ಕಾರಣ ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಕಾರ್ಯನಿರ್ವಹಿಸಿಕೊಂಡು ಹೋಗಲಿ ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಯುನಿಫಾಮ್ರ್ಡ್ ಸೇವಾ ನೇಮಕಾತಿ ಮಂಡಳಿಗೆ ಸೂಚಿಸಿತ್ತು.

ಮುಂದಿನ ನೇಮಕಾತಿ ಪ್ರಕ್ರಿಯೆ ಶುರುವಾಗುವುದರೊಳಗೆ ಅರ್ಜಿಯಲ್ಲಿ ತೃತೀಯಲಿಂಗದ ಆಯ್ಕೆಯನ್ನು ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೇಮಕಾತಿ ಮಂಡಳಿಗೆ ಕೋರ್ಟ್ ಆದೇಶಿಸಿದೆ. ಈಗಾಗಲೇ ದೇಶದಲ್ಲಿ ಇಬ್ಬರು ತೃತೀಯಲಿಂಗಿ ಕಾನ್ಸಟೇಬಲ್ಗಳಿದ್ದಾರೆ. ಆದರೆ ಅವರು ಪೊಲೀಸ್ ಇಲಾಖೆಗೆ ನೇಮಕಗೊಂಡ ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದರು. ಆದರೆ ಪ್ರತೀಕಾ ಯಶಿನಿ ಎಸ್ಐ ಹುದ್ದೆಗೆ ನೇಮಕವಾಗಿರುವ ದೇಶದ ಮೊದಲ ತೃತೀಯಲಿಂಗಿ ಅಭ್ಯರ್ಥಿಯಾಗಿದ್ದಾರೆ. ಕೋರ್ಟ್ ಆದೇಶದ ಪ್ರಕಾರ 2016 ಫೆ. 15ರಂದು ಸಿಟಿ ಪೊಲೀಸ್ ಕಮಿಷನರ್ ಸ್ಮಿತ್ ಸರನ್ ಪ್ರೀತಿಕಾ ಸೇರಿದಂತೆ 22 ಮಂಗಳಮುಖಿಯರಿಗೆ ಎಸ್ ಐ ಹುದ್ದೆಗೆ ನೇಮಕವಾಗುವಂತೆ ಸೂಚನೆ ನೀಡಿದ್ದರು.

ಒಬ್ಬ ಸಾಮಾನ್ಯ ಕಿರಾಣಿ ಅಂಗಡಿಯವರ ಮಗಳು ಐಎಎಸ್ ಅಧಿಕಾರಿ!! ಸಾಧಿಸುವವರಿಗೆ ಸ್ಪೂರ್ತಿಯಾದ ಯುವತಿಯ ಸಾಧನೆಯ ಕಥೆ

ಸಾಧಿಸುವವರ ಜೀವನ ಅಷ್ಟೊಂದು ಸುಲಭವಾಗಿರೋದಿಲ್ಲ ತಾನು ಸಾಧನೆ ಮಾಡಿದ ಮೇಲೆ ಇತರರಿಗೂ ಸಾಧನೆಯ ಹಾದಿ ಬಗ್ಗೆ ತಿಳಿಯುತ್ತದೆ. ಒಬ್ಬ ಸಾಮಾನ್ಯ ಕಿರಾಣಿ ಅಂಗಡಿ ನಡೆಸುತ್ತಿದ್ದವರ ಮಗಳು ಐಎಎಸ್ ಅಧಿಕಾರಿ ಅಂದ್ರೆ ಸುಲಭದ ಮಾತಲ್ಲ, ಇದರ ಹಿಂದೆ ಎಷ್ಟೊಂದು ಶ್ರಮವಿರಬೇಕು ಅನ್ನೋದು ಅಲ್ಲೇ ಗೊತ್ತಾಗುತ್ತದೆ. ಅಷ್ಟಕ್ಕೂ ಈ ಐಎಎಸ್ ಅಧಿಕಾರಿ ಯಾರು ಇವರ ಸಾಧನೆಯ ಹಾದಿ ಹೇಗಿತ್ತು ಅನ್ನೋದನ್ನ ಮುಂದೆ ನೋಡಿ.

ಭದ್ರೇಶ್ವರದ ಒಬ್ಬ ಬಡ ಸಾಮಾನ್ಯ ಕಿರಾಣಿ ಅಂಗಡಿಯವನ ಮಗಳು ಶ್ವೇತಾ ಅಗರ್ವಾಲ್ ಎಂಬುದಾಗಿ ಇವರ ಐಎಎಸ್ ಪಾಸ್ ಆಗಿ 19ನೇ ರ‍್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿದ್ದಾರೆ. ಇವರ ವಿದ್ಯಾಭ್ಯಾಸದಿಂದ ಐಎಎಸ್ ಅಧಿಕಾರಿ ಆಗುವವರೆಗೂ ತುಂಬಾನೇ ಕಷ್ಟ ಪಟ್ಟಿದ್ದಾರೆ, ಹಾಗು ಹಲವು ಸಮಸ್ಯೆಗಳನ್ನು ಎದುರಿಸಿ ಜೀವನದ ಹಾದಿಯನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಆಸೆಯಂತೆ ತಂದೆ ತಾಯಿಗಳ ಮಾತಿನ ಮೇರೆಗೆ ಉನ್ನತ ಹುದ್ದೆಯಲ್ಲಿದ್ದಾರೆ.

ಶ್ವೇತಾ ಅವರ ವಿದ್ಯಾಭ್ಯಾಸಕ್ಕೆ ತಂದೆ ಹಲವು ಬಾರಿ ಕೂಲಿ ಕೆಲಸ ಮಾಡಿ ಮಗಳನ್ನು ಓದಿಸಿದ್ದಾರೆ. ಹೀಗೆ ಮನೆಯಲ್ಲಿ ಒಂದು ದಿನ ತುಂಬಾನೇ ಕಷ್ಟದ ಪರಿಸ್ಥಿತಿ ಬಂದಾಗ ಶ್ವೇತಾ ಅವರನ್ನು ಶಾಲೆ ಬಿಟ್ಟು ಬಿಡು ನಿಂಗೆ ವಿದ್ಯಾಭ್ಯಾಸ ಕೊಡಿಸುವುದು ಸುಮ್ಮನೆ ವ್ಯರ್ಥ ಎಂಬುದಾಗಿ ಹೇಳಿದ್ದರು, ಇದರಿಂದ ಹಿಂಜರಿಯದ ಶ್ವೇತಾ ನಾನು ನಿಮ್ಮ ತಲೆ ತಗ್ಗಿಸುವಂತೆ ಎಂದಿಗೂ ಮಾಡುವುದಿಲ್ಲ. ನಾನು ಈ ಕುಟುಂಬದ ಮೊದಲ ಪದವೀಧರೆಯಾಗುತ್ತೇನೆ ಎಂದು ತಂದೆ-ತಾಯಿಯಲ್ಲಿ ಹೇಳಿದಂತೆ ಪದವೀಧರೆಯಾದರು

ಪದವಿಯಲ್ಲಿ ಉತ್ತಮ ರಾಂಕ್ ನಲ್ಲಿ ಪಾಸು ಮಾಡಿದ ಶ್ವೇತಾ ಅವರು ಬಳಿಕ MBA ಮಾಡಿ ಅಂತರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಐಎಎಸ್‌ಗಾಗಿ ತಯಾರಿ ನಡೆಸಿದ್ದರು. ಎರಡು ಪ್ರಯತ್ನಗಳಲ್ಲಿ UPSC ಪಾಸು ಮಾಡಿದ್ದರೂ ಐಎಎಸ್ ಸಿಗಲಿಲ್ಲ.

ಆದರೆ ಅದರಿಂದ ವಿಚಲಿತರಾಗದೆ ಮತ್ತು ಅಷ್ಟಕ್ಕೇ ತೃಪ್ತಿಯಾಗದೆ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಕೈ ಬಿಡದೆ ಮೂರನೆಯ ಪ್ರಯತ್ನದಲ್ಲಿ 19ನೇ ರ‍್ಯಾಂಕ್‌ನೊಂದಿಗೆ ಪಾಸ್ ಮಾಡಿ ಪ್ರಸ್ತುತ ಐಎಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಸಾಧಿಸುವವನಿಗೆ ಛಲ, ಶ್ರಮ ಇದ್ರೆ ಏನನ್ನ ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಇವರು ಒಳ್ಳೆಯ ಉದಾಹರಣೆ ಅನ್ನಬಹುದು. ಇವರ ಈ ಸಾಧನೆಯ ಕತೆ ಎಲ್ಲ ಯುವಕ ಯುವತಿಯರಿಗೆ ಸ್ಪೋರ್ತಿದಾಯಕವಾಗಿದೆ.