ಬಿಜೆಪಿ ಸೇರಲು ತಯಾರಾದ ಮಂಡ್ಯದ ಪ್ರಭಾವಿ ನಾಯಕ!?

ಅತೃಪ್ತರಾಗಿ ರಾಜೀನಾಮೆ ನೀಡಿ ಅನರ್ಹರಾದ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಉಪ ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ನಾರಾಯಣ ಗೌಡ ಜನರ ನಿರ್ಧಾರ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಅಲ್ಲದೇ ಈಗಿನ ಮುಖ್ಯಮಂತ್ರಿ ನಮ್ಮ ತಾಲೂಕಿನವರೇ ಆಗಿದ್ದು, ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ಇದೆ ಎಂದರು.

ತಾಲೂಕಿನ ಮಗನಾಗಿ ಸಿಎಂ ಯಡಿಯೂರಪ್ಪ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂದು ಹೊಗಳಿದ ನಾರಾಯಣ ಗೌಡ BSY ಹೊಗುಳವ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದರಾ ಎನ್ನಲಾಗುತ್ತಿದೆ.

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನನ್ನು ಕ್ರಿಮಿನಲ್ ಅನ್ನುತ್ತಾರೆ. ಆದರೆ ಯಾರು ಕ್ರಿಮಿನಲ್ ಎನ್ನವುದು ಸಂದರ್ಭ ಬಂದಾಗ ತಿಳಿಯುತ್ತೆ. ಇದಕ್ಕೆ ಸಾಕ್ಷಿ ನೀಡಲಿ ಎಂದರು.

ಇನ್ನು ಮಾಜಿ ಸಚಿವ ಪುಟ್ಟರಾಜು ಅವರೂ ಕೂಡ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಈ ವೇಳೆ ನಾರಾಯಣ ಗೌಡ ಹೇಳಿದರು.

ನಾವ್‌ ಬದುಕ್ತೇವೆ ಎಂಬ ಭರವಸೆಯೇ ಇರ್ಲಿಲ್ಲ.. ನಮ್‌ ಋಣಾ ಮುಗೀತು ಅಂದ್ಕೊಂಡಿದ್ವಿ…………..

ನಾವ್‌ ಬದುಕ್ತೇವ್‌ ಎಂಬ ಭರವಸೆಯೇ ಇರ್ಲಿಲ್ಲ.. ನಮ್‌ ಋುಣಾ ಮುಗಿತು ಅಂದ್ಕೊಂಡಿದ್ವಿ.. ದೇವ್ರ ಬಂದ್ಹಾಂಗ್‌ ಬಂದ್‌ ನಮ್‌ ಜೀವಾ ಉಳಿಸಿದ್ರು. ಈ ಸೈನಿ​ಕ​ರ್ಗಿ ಎಷ್ಟು ಧನ್ಯವಾದ ಹೇಳಿದ್ರೂ ಕಮ್ಮಿ ರೀ..!

ಇದು ಪ್ರವಾಹದ ನಡುವೆ ಸಿಕ್ಕಿ ನಲುಗಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದ ಸಂತ್ರಸ್ತರ ಅಂತಃಕರಣದ ಮಾತು. ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ ಹಾಗೂ ಪಕ್ಕದ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಬಿಟ್ಟಅಪಾರ ನೀರು ಕೃಷ್ಣಾ ಒಡಲು ಉಕ್ಕಿ ಹರಿದು ಭಾರೀ ಪ್ರಮಾ​ಣ​ದಲ್ಲಿ ಸೃಷ್ಟಿ​ಸಿದ್ದ ಪ್ರವಾ​ಹ​ದಲ್ಲಿ ಸಿಲು​ಕಿದ್ದ ದರೂರ ಗ್ರಾಮ​ಸ್ಥರು ಬುದುಕುವ ಆಸೆ​ಯನ್ನೇ ಬಿಟ್ಟಿ​ದ್ದರು. ಇನ್ನೂ ನಮ್ಮ ಜೀವನ ಮುಗಿದೇ ಹೋಯಿತು ಎನ್ನು​ಷ್ಟ​ರ​ಲ್ಲಿ 13 ಜನ ಗ್ರಾಮ​ಸ್ಥ​ರನ್ನು ಭಾನು​ವಾರ ಸೈನಿ​ಕರು ಕಾಪಾಡಿ ಹೊರ​ತಂದಿ​ದ್ದರು. ಆಗ ಬದು​ಕಿತು ಬಡ​ಜೀವ ಎಂದು ಸಂತ್ರ​ಸ್ತರು ನಿಟ್ಟು​ಸಿರು ಬಿಟ್ಟರು. ಸೇನಾ ಕಾಪ್ಟರ್‌ ಮೂಲಕ ಅಥಣಿ ಸುತ್ತಮುತ್ತ ನಡೆದ ರಕ್ಷಣಾ ಕಾರ್ಯಾಚರಣೆಯ ಸಾಹಸಮಯ ದೃಶ್ಯಗಳನ್ನು ಸುವರ್ಣ ನ್ಯೂಸ್‌ ನೇರ ಪ್ರಸಾರ ಮಾಡಿದೆ.

2 ದಿನಗಳಿಂದ ಸಾಹಸ: ಕೃಷ್ಣಾ ನದಿ ನೀರಿನ ಪ್ರವಾಹದಿಂದ ಜಲಾವೃತವಾದ ಅಥಣಿ, ರಾಯಬಾಗ, ಗೋಕಾಕ, ಚಿಕ್ಕೋಡಿ, ಕಾಗವಾಡ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕಳೆದೆರಡು ದಿನಗಳು ಪ್ರವಾಹದಲ್ಲಿ ಸಿಲುಕಿರುವವರಿಗೆ ಅಗತ್ಯ ವಸ್ತುಗಳು ಬಟ್ಟೆಜೊತೆ ತಿಂಡಿ- ತಿನಿಸುಗಳ ಸರಬರಾಜನ್ನು ಭಾರತೀಯ ವಾಯು ಸೇನೆ ಮಾಡುತ್ತಿದೆ.

ಪ್ರವಾಹಕ್ಕೀಡಾದ ಗ್ರಾಮಗಳಲ್ಲಿನ ಜನ, ಜಾನುವಾರಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ವಾಯುಸೇನೆ ಚೇತಕ್‌, ಅಡ್ವಾನ್ಸ್‌ಡ್‌ ಲೈಟ್‌ ಹಾಗೂ ಎಂಐ 17 ಮೂರು ಹೆಲಿಕಾಪ್ಟರ್‌ಗಳ ಮೂಲಕ ರಕ್ಷಣಾ ಕಾರ್ಯ ಹಾಗೂ ಆಹಾರ, ನೀರು ಪೂರೈಕೆ ಕಾರ್ಯ ನಡೆದಿದೆ. ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಸಿಲುಕಿದ್ದ ಜನರನ್ನು ಹೆಲಿಕಾಪ್ಟರ್‌ನಲ್ಲಿ ರಕ್ಷಣೆ ಮಾಡಿದ ವಾಯುಸೇನೆ ಅಧಿಕಾರಿಗಳು, ನಂತರ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆತರುವ ಕಾರ್ಯ ಮಾಡಿದ್ದಾರೆ

ನಾಯಿಯ ಮರಿಯನ್ನು ಕಾಪಾಡುವ ಉದ್ದೇಶದಿಂದ ಪ್ರವಾಹದ ಮಧ್ಯವೇ ದಿನ ಕಳೆದ ಅಜ್ಜ!! ಮುಂದೇನಾಯ್ತು ಗೊತ್ತೆ??

ಇಲ್ಲಿಂದ ಜೀವಂತ ಹೋದ್ರೆ ಈ ಸಣ್ಣ ರಾಮ್ಯಾ, ದೊಡ್ಡ ರಾಮ್ಯಾನ (2 ನಾಯಿಗಳು) ಕರ‌್ಕೊಂಡೇ ಹೋಗ್ಬೇಕು. ಇಲ್ಲಂದ್ರೆ ಇಲ್ಲೇ ನಾನೂ ಸಾಯಬೇಕು ಅಂಥ ಅನ್ಕೊಂಡಿದ್ದೆ. ಕೊನೆಗೂ ಎಲ್ರೂ ಬದುಕಿ ಬಂದೇವು. ಭಾಳ ಖುಷಿ ಆತ್!’

ಇದು ನವಲಗುಂದ ತಾಲೂಕಿನ ಇಂಗಳಹಳ್ಳಿ ಹಾಗೂ ಅಣ್ಣಿಗೇರಿ ತಾಲೂಕಿನ ಶಿಶ್ವಿನಹಳ್ಳಿ ಮಧ್ಯದಲ್ಲಿ ಬರುವ ಬೆಣ್ಣಿಹಳ್ಳದಲ್ಲಿ ಸಿಲುಕಿ ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಹೊರಬಂದ ವಾಚ್‌ಮನ್ ಹನುಮಂತಪ್ಪ ನಲವಡಿ (60) ಅವರ ಸಾವು ಗೆದ್ದು ಬಂದ ನಂತರದ ಮಾತು.

ಈ ಮಾತು ಹೇಳುವಾಗ ಆತನ ಮೊಗದಲ್ಲಿ ತನ್ನೆರಡೂ ನಾಯಿಗಳೊಂದಿಗೆ ಜೀವಂತವಾಗಿ ಹೊರಬಂದ ಖುಷಿ ಮಿನುಗುತ್ತಿತ್ತು. ತನಗೆ ಹಳ್ಳ ದಾಟಿಕೊಂಡು ಬರಲು ಅವಕಾಶ ಇದ್ದಾಗಲೂ ತನ್ನೆರಡೂ ನಾಯಿಗಳನ್ನು ಕರೆದುಕೊಂಡು ಬರಲು ಸಧ್ಯವಾಗದೇ ಇದ್ದಾಗ ರಾತ್ರಿಯಿಡೀ ಅವುಗಳೊಂಡಿಗೆ ಪ್ರವಾಹದಲ್ಲೇ ಕಳೆದಿದ್ದಾನೆ.

ಯಾರೀತ; ಏನೀ ಕಥೆ: ಈತ ಇಂಗಳಹಳ್ಳಿ ಗ್ರಾಮದವನು. ಕಳೆದ ಐದಾರು ತಿಂಗಳಿಂದ ಈತ ಹಾಗೂ ಈತನ ಮಗ ಇಬ್ಬರು ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ವಾಚ್‌ಮನ್ ಕೆಲಸ ಮಾಡುತ್ತಿದ್ದಾರೆ. ಹಗಲು ರಾತ್ರಿ ಇಲ್ಲೇ ಠಿಕಾಣಿ ಇವರದ್ದು. ಮಗನಿಗೆ ಮೈಯಲ್ಲಿ ಹುಷಾರಿಲ್ಲವೆಂದು ಮನೆಯಲ್ಲೇ ಉಳಿದಿದ್ದ. ಹೀಗಾಗಿ ಈತ ಒಬ್ಬನೇ ಕಾರ್ಮಿಕರೊಂದಿಗೆ ರಾತ್ರಿ ಉಳಿದಿದ್ದ. ತನ್ನ ಸಾಕು ನಾಯಿಗಳಾದ ಸಣ್ಣ ರಾಮ್ಯಾ ಹಾಗೂ ದೊಡ್ಡ ರಾಮ್ಯಾ ಅವನ್ನು ಬಿಟ್ಟು ಇರುವುದಿಲ್ಲ. ವು ಕೂಡ ಅಷ್ಟೇ ಆತನನ್ನು ಬಿಟ್ಟು ಕದಲುವುದಿಲ್ಲ.

ತನ್ನ ಕೆಲಸದ ಸ್ಥಳದಲ್ಲೇ ಇವುಗಳನ್ನು ಇಟ್ಟುಕೊಂಡಿದ್ದಾನೆ. ನಿನ್ನೆ ರಾತ್ರಿ ಕೂಡ ಮೊದಲು ಅವುಗಳಿಗೆ ಊಟ ಹಾಕಿದ್ದಾನೆ. ಬಳಿಕ ತಾನು ಊಟ ಮಾಡಬೇಕು ಎಂದುಕೊಂಡು ಹೊರಗೆ ಹೋಗಿ ಮುಖ ತೊಳೆಯಲು ಹೋದಾಗ ಸುತ್ತಲೂ ನೀರು ಬರುತ್ತಿರುವುದು ಗೊತ್ತಾಗಿದೆ. ಇನ್ನು ಇಲ್ಲೇ ಸಿಲುಕುತ್ತೇವೆ ಈಗಲೇ ಹೋಗಿಬಿಟ್ಟರಾಯ್ತು ಎಂದುಕೊಂಡು ತನ್ನೊಂದಿಗೆ ಇದ್ದ ಇತರೆ ಓಡಿಸಾ ಮೂಲದ ಕಾರ್ಮಿಕರಿಗೆ, ‘ಚಲೋ ಮೇ ಲೇಕೆ ಚಲ್ತಾವೂಂ’ ಅಂತ ಹೇಳಿದ್ದಾನೆ.

ತನ್ನೊಂದಿಗೆ ಸಣ್ಣ ನಾಯಿಮರಿಯನ್ನು ಎತ್ತಿಕೊಂಡಿದ್ದಾನೆ. ಇನ್ನೊಂದು ನಾಯಿ ದೊಡ್ಡದಿದೆ. ಹೀಗಾಗಿ ಹಿಂದೆ ಬರುತ್ತದೆ ಎಂದುಕೊಂಡು ಮುಂದೆ ಸಾಗಿದ್ದಾನೆ. ಈತನೊಂದಿಗೆ ಓಡಿಸಾ ಮೂಲದ ಇಬ್ಬರು ಕಾರ್ಮಿಕರು ಇನ್ನೊಂದು ನಾಯಿಯನ್ನು ಎತ್ತಿಕೊಂಡು ಸಾಗಿದ್ದಾರೆ. ಆದರೆ, ಐವತ್ತು ಹೆಜ್ಜೆ ದಾಟುವಷ್ಟರಲ್ಲೇ ಪ್ರವಾಹ ಹೆಚ್ಚಲು ಪ್ರಾರಂಭವಾಗಿದೆ. ಆಗ ಈತನೊಂದಿಗೆ ಬಂದಿದ್ದ ಓಡಿಸ್ಸಾದ ಇಬ್ಬರು ಕಾರ್ಮಿಕರು ಜೆಸಿಬಿಯತ್ತ ಓಡಿ ಹೋಗಿ ನಾಯಿಯೊಂದಿಗೆ ಜೆಸಿಬಿ ಏರಿದ್ದಾರೆ. ಇನ್ನು ತಾನಷ್ಟೇ ಒಂದೇ ನಾಯಿಮರಿಯೊಂದಿಗೆ ಹೋಗಿ ಏನು ಮಾಡಲಿ. ಇಲ್ಲಿಂದ ಹೋದರೆ ಎರಡು ನಾಯಿಗಳೊಂದಿಗೆ ಹೋದರಾಯ್ತು. ಇಲ್ಲವೇ ಅವುಗಳೊಂದಿಗೆ ಇಲ್ಲೇ ಇಹಲೋಕ ತ್ಯಜಿಸಿದರಾಯ್ತು ಎಂದುಕೊಂಡು ಈಜು ಬರುತ್ತಿದ್ದರೂ, ಹಳ್ಳ ದಾಟಿ ರೂಢಿಯಿದ್ದರೂ ತಾನು ಕೂಡ ತಾನೊಬ್ಬನೆ ಹೋಗದೇ ನಾಯಿಮರಿಯೊಂದಿಗೆ ಜೆಸಿಬಿ ಏರಿ ಕುಳಿತಿದ್ದಾನೆ.

ನಂಬಿಕೆ ಇರಲಿಲ್ಲ: ಆದರೆ, ರಾತ್ರಿಯಿಡೀ ಹೀಗೆ ಜೆಸಿಬಿಯಲ್ಲೇ ಇಬ್ಬರು ಕಾರ್ಮಿಕರು ಹಾಗೂ ತನ್ನೆರಡು ನಾಯಿಗಳೊಂದಿಗೆ ಕುಳಿತ್ತಿದ್ದ ಈತನಿಗೆ ಜೀವಂತವಾಗಿ ಊರು ಸೇರುವ ಯಾವುದೇ ಭರವಸೆ ಇರಲಿಲ್ಲ. ನೀರಿನ ಸೆಳೆವೂ ಜೋರಾಗಿತ್ತು. ಇಲ್ಲಿಂದ ಹೋದರೆ ನಾಯಿಗಳೊಂದಿಗೆ ಹೋಗಬೇಕು, ಇಲ್ಲವೇ ಇಲ್ಲಿ ಪ್ರಾಣಬಿಡಬೇಕು ಎಂದುಕೊಂಡಿನಂತೆ ಹನುಮಂತಪ್ಪ.

ಕೊನೆಗೆ ಎನ್‌ಡಿಆರ್‌ಎಫ್ ಈತನನ್ನು ನಾಯಿಗಳ ಸಮೇತ ಸುರಕ್ಷಿತವಾಗಿ ದಡಕ್ಕೆ ತಂದಾಗಲೂ ನಾಯಿಮರಿಯನ್ನು ಬಿಗಿದಪ್ಪಿಯೇ ಹಿಡಿದುಕೊಂಡಿದ್ದ. ನಗು ಮುಖದಿಂದಲೇ ‘ಈ ಎರಡು ರಾಮ್ಯಾಗಳು ನನ್ನ ಪ್ರಾಣಾ ರ‌್ರಿ. ಇವನ್ ಬಿಟ್ ಹ್ಯಾಂಗ್ ಬರಲಿ. ಮನಸ್ ಬರಲಿಲ್ಲ… ಹೀಂಗಾಗಿ ರಾತ್ರಿ ಅಲ್ಲೇ ಕಳೆದೆ’ ಎಂದು ನಾಯಿಯೊಂದಿಗೆ ಹೆಜ್ಜೆ ಹಾಕಿದ. ಈತನಿಗೆ ನಾಯಿಗಳ ಮೇಲೆ ಇರುವ ಪ್ರೀತಿ ಕಂಡು ಶಾಸಕರು, ಅಧಿಕಾರಿಗಳು ಸಹ ಒಂದು ಕ್ಷಣ ಮೌನವಾದರು.

 

ನೀವು ಪಾನ್ ಕಾರ್ಡ್ ಮಾಡಿಸಬೇಕೆ? ಮೊಬೈಲ್‌ನಲ್ಲಿ application ಹಾಕೋದು ಹೇಗೆ?? ಇಲ್ಲಿದೆ ಸಂಪೂರ್ಣ ಮಾಹಿತಿ

ನೀವು ಪಾನ್ ಕಾರ್ಡ್ ಮಾಡಿಸಬೇಕೆ? ಮೊಬೈಲ್‌ನಲ್ಲಿ application ಹಾಕೋದು ಹೇಗೆ?? ಇಲ್ಲಿದೆ ಸಂಪೂರ್ಣ ಮಾಹಿತಿ. ವಿಡಿಯೋ ನೋಡಿ

ಈ ಎರಡು ರಾಶಿಯವರಿಗೆ ಮುಂದೆ ನಡೆಯುವುದು ಮೊದಲೇ ಸ್ಪಷ್ಟವಾಗಿ ತಿಳಿಯುತ್ತದೆಯಂತೆ!! ಆ ರಾಶಿ ಯಾವುದು ಗೊತ್ತಾ??

ಈ ಎರಡು ರಾಶಿಯವರಿಗೆ ಮುಂದೆ ನಡೆಯುವುದು ಮೊದಲೇ ಸ್ಪಷ್ಟವಾಗಿ ತಿಳಿಯುತ್ತದೆಯಂತೆ!! ಆ ರಾಶಿ ಯಾವುದು ಗೊತ್ತಾ?? ವಿಡಿಯೋ ನೋಡಿ